ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8: ಜಾಸ್ತಿಯಾದರೆ ಎರಡು ತಟ್ಟಬೇಕು ಅನಿಸುತ್ತೆ: ಕಿಚ್ಚನ ಕಿಡಿ

ಅಕ್ಷರ ಗಾತ್ರ

ಬೆಂಗಳೂರು: ಎಲಿಮಿನೇಶನ್ ರದ್ದಾಗಿದ್ದರಿಂದ ಖುಷಿಯಾಗಿದ್ದ ಮನೆಯ ಸದಸ್ಯರಿಗೆ ಕಿಚ್ಚ ಸುದೀಪ್ ಧ್ವನಿ ಸಂದೇಶ ಕಳುಹಿಸುವ ಮೂಲಕ ಮೂರ್ನಾಲ್ಕು ವಾರಗಳಲ್ಲಿ ಸದಸ್ಯರು ಮಾಡಿರುವ ತಪ್ಪಿನ ಅರಿವು ಮಾಡಿಸಿದ್ದಾರೆ. ಹಾದಿ ತಪ್ಪಿದ್ದ ಕಂಟೆಸ್ಟೆಂಟ್ಸ್ ಸರಿದಾರಿಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ವಿಪರೀತ ಆಡುತ್ತಿದ್ದ ಕೆಲವರಿಗೆ ಚಾಟಿ ಬೀಸಿದ್ದಾರೆ.

ಹೌದು, ಅನಾರೋಗ್ಯದ ಕಾರಣ ಸತತ ಮೂರು ವಾರ ಕಿಚ್ಚ ಸುದೀಪ್ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ನ ವೀಕೆಂಡ್ ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿಲ್ಲ. ಅವರ ಅನುಪಸ್ಥಿತಿಯಲ್ಲಿ7 ಮತ್ತು 8ನೇ ವಾರ ಎಲಿಮಿನೇಶನ್ ಸಹ ನಡೆದಿದೆ. 9ನೇ ವಾರ ಎಲಿಮಿನೇಶನ್ ಇರಲಿಲ್ಲ. ಆದರೆ, ಒಂಬತ್ತನೇ ವಾರದಲ್ಲಿ ಮನೆಯ ಸದಸ್ಯರು ಭಾರೀ ಗಲಾಟೆ ಮಾಡಿಕೊಂಡಿದ್ದರು.ಟಾಸ್ಕ್‌ಗಳಲ್ಲಿ ಅನ್ಯಾಯ. ಹೋರಾಟ, ಉಪವಾಸ, ಬೈದಾಟ, ಕೂಗಾಟ ಹೀಗೆ ರಂಪಾಟವೇ ನಡೆದು ಹೋಗಿತ್ತು. ಈ ಬಗ್ಗೆ ಗಮನ ಹರಿಸಿದ್ದ ಸುದೀಪ್ ವಾಯ್ಸ್ ಮೆಸೇಜ್ ಮೂಲಕ ಬುದ್ಧಿ ಹೇಳಿದ್ದಾರೆ.

ನಾನು ಈಗ ಆರೋಗ್ಯವಾಗಿದ್ದೇನೆ. ಆದರೆ, ಎಪಿಸೋಡ್ ಚಿತ್ರೀಕರಣದಲ್ಲಿ ಭಾಗವಹಿಸುವಷ್ಟು ಆರಾಮವಾಗಿಲ್ಲ ಎಂದು ಮಾತು ಆರಂಭಿಸಿದ ಸುದೀಪ್ ಒಬ್ಬೊಬ್ಬರಿಗೆ ಕಿವಿಮಾತು ಹೇಳಿದರು.

ಮೊದಲಿಗೆ ವೈಷ್ಣವಿ, ಮನೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಇರ್ತೀರಿ. ಾದರೆ, ಮನೆಯಲ್ಲಿ ಗೊಂದಲ ಆದಾಗ ಮನಸಲ್ಲಿ ಇರುವುದೆಲ್ಲ ಹೊರಬರಲಿ. ಇಲ್ಲವಾದರೆ, ಎಲ್ಲವೂ ಹೆಪ್ಪುಗಟ್ಟಿ ಆಪರೇಶನ್ ಮಾಡಬೇಕಾಗುತ್ತದೆ ಎನ್ನುವ ಮೂಲಕ ಓಪನ್ ಆಗಿರುವಂತೆ ಸಲಹೆ ಕೊಟ್ಟರು.

ಆಮೇಲೆ ಜೈಲು ಸೇರಿದ್ದ ಪಿಯಾಂಕಾ ಅವರನ್ನು ಉದ್ದೇಶಿಸಿ, ಪ್ರಿಯಾಂಕಾ ಅವರೆ ನೀವು ವೈಲ್ಡ್ ಕಾರ್ಡ್ ಎಂಟ್ರಿ. ಟಾಸ್ಕ್‌ಗಳಲ್ಲಿ ತುಂಬಾ ಚೆನ್ನಾಗಿ ಆಡುತ್ತಿದ್ದೀರಿ, ಆದರೆ, ಮನೆಯವರ ಜೊತೆ ಬೆರೆಯಲು ಹಿಂದೇಟು ಹಾಕಬೇಡಿ. ಇಬ್ಬಿಬ್ಬರು ಕೂತಿದ್ದರೂ ಹೋಗಿ ಮಾತನಾಡಿಸಿ ಎಂದರು.

ದಿವ್ಯಾ ಸುರೇಶ್ ಅವರೆ, ಟಾಸ್ಕ್‌ಗಳಲ್ಲಿ ನಿಮ್ಮ ಪ್ಯಾಶನ್ ವಂಡರ್‌ಫುಲ್... ಆದರೆ, ಮಂಜು ಅವರ ಜೊತೆ ಬಿಟ್ಟರೆ ನೀವು ಬೇರೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬುದನ್ನು ಸ್ವಲ್ಪ ನೆನಪಿನಲ್ಲಿಟ್ಟುಕೊಳ್ಳಿ. ಅದನ್ನು ಬದಲಿಸಿಕೊಳ್ಳುವಂತೆ ಸುದೀಪ್ ಸಲಹೆ ನೀಡಿದರು.

ಚಕ್ರವರ್ತಿಗೆ ಮಾತಿನ ಏಟು: ಚಕ್ರವರ್ತಿಯವರೇ ನೀವು ತುಂಬಾ ತಿಳಿವಳಿಕೆ ಇರುವವರು. ಆದರೂ ಒಂದು ಕಿವಿ ಮಾತು. ನಿಮ್ಮ ಮಾತು ಮತ್ತು ತಿಳುವಳಿಕೆ ನಿಜಚಾಗಲೂ ಚೆನ್ನಾಗಿದೆ. ಒಂದೊಮದು ಸಾರಿ ಬುದ್ಧಿ ಹೆಚ್ಚಾದಾಗಲೂ ಲೈಫ್ ದಾರಿ ತಪ್ಪಬಹುದು ಅನ್ನೋದು ಒಂಚೂರು ಗೊತ್ತಿರಲಿ ಎನ್ನಬಹುದು ನನ್ನ ಅನಿಸಿಕೆ. ರಘು ಅವರನ್ನು ಕಳಪೆ ಎಂದು ಸೂಚಿಸಿದ್ದ ಚಕ್ರವರ್ತಿ ಅದಕ್ಕೆ ಕಾರಣ ನೀಡುವಾಗ ಪ್ರಶಾಂತ್ ಬಳಿ ನನ್ನ ಬಗ್ಗೆ ರಘು ಏನೋ ಹೇಳಿದ್ದಾರೆ ಎಂದು ಆರೋಪಿಸಿದ್ದರು. ಖಚಿತಪಡಿಸಿ ಎಂದು ರಘು ಹೇಳಿದಾಗ ಉಲ್ಟಾ ಹೊಡೆದು ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ್ದರು.

ಬಳಿಕ, ಮಂಜು ಪಾವಗಡ ಅವರಿಗೆ ತಿಳಿ ಹೇಳಿದ ಸುದೀಪ್, ನೀವು ಎಂಟರ್‌ಟೈನರ್ ಅಗಿ ಇಲ್ಲಿಗೆ ಬಂದಿದ್ದು. ಅದನ್ನೇ ಮರೆತಿದ್ದೀರ. ಮತ್ತೆ, ಒಂದೇ ಸಿನಿಮಾ ಯಾವಾಗಲೂ ರಿಲೀಸ್ ಆದರೆ ಜನರಿಗೆ ನೋಡಲು ಕಷ್ಟವಾಗುತ್ತೆ ಎನ್ನುವ ಮೂಲಕ ದಿವ್ಯಾ ಸುರೇಶ್ ಜೊತೆ ಮಾತ್ರವಲ್ಲದೆ ಬೇರೆಯವರ ಜೊತೆಯೂ ಬೆರೆಯುವಂತೆ ಸಲಹೆ ನೀಡಿದರು.

ಪ್ರಶಾಂತ್‌ಗೆ ಗುನ್ನ: ಪ್ರಶಾಂತ್ ಸಂಬರಗಿ ಮನೆಯಲ್ಲಿ ಪದೇ ಪದೇ ಬೇರೆಯವರ ಬಗ್ಗೆ ಮಾತನಾಡುವುದು. ಇಲ್ಲಸಲ್ಲದ್ದಕ್ಕೆ ಹೋರಾಟ, ಉಪವಾಸ ಕೂರುವುದನ್ನು ಗಮನಿಸಿದ್ದ ಸುದೀಪ್, ಅಳುವ ಮಗುವಿಗೆ ಸ್ವಲ್ಪ ಜಾಸ್ತಿಯೇ ಹಾಲು ಸಿಗುತ್ತೆ. ಆದರೆ, ಅದೇ ಜಾಸ್ತಿಯಾದರೆ ತಟ್ಟಬೇಕು ಅನಿಸುತ್ತೆ ಎನ್ನುವ ಮೂಲಕ ಪ್ರಶಾಂತ್‌ಗೆ ಚಾಟಿ ಬೀಸಿದರು.

ಇನ್ನು, ನಿಧಿ ಸುಬ್ಬಯ್ಯ ಅವರು ನೇರ ನೇರ ಮಾತನಾಡಿ ಶುಭಾ ಪೂಂಜಾ ಅವರ ಮನಸ್ಸು ನೋಯಿಸಿದ್ದರ ಬಗ್ಗೆ ತಿಳಿದಿದ್ದ ಕಿಚ್ಚ, ನಿಧಿ ಅವರೇ ನೀವು ಅನಿಸಿದ್ದನ್ನು ಥಟ್ ಅಂತ ಹೇಳ್ತೀರಿ. ನೇರಾ ನೇರಾ ಮಾತನಾಡುವುದು ಸರಿ. ಆದರೆ, ಅದರಿಂದ ಬೇರೆಯವರ ಮನಸ್ಸಿಗೆ ನೋವಾಗುತ್ತದೆ ಎಂಬುದನ್ನು ಮರೆಯಬೇಡಿ ಎಂದರು.

ಶುಭಾಗೂ ಸಲಹೆ ಕೊಟ್ಟ ಸುದೀಪ್, ನೀವು ತುಂಬಾ ಆರಾಮವಾಗಿರ್ತೀರ. ಅದು ನಿಮಗೆ ಅಡ್ವಾಂಟೇಜ್ ಹಾಗೂ ಡಿಸ್‌ಅಡ್ವಾಂಟೇಜ್ ಕೂಡ ಹೌದು ಎಂದರು.

ಆನೆ, ಇರುವೆ: ಮನೆಯಲ್ಲಿ ಯಾವಾಗಲೂ ವೈಷ್ಣವಿ ಜೊತೆ ಇರುವ ರಾಘವೇಂದ್ರ ಅಲಿಯಾಸ್ ರಘು ಅವರಿಗೂ ಸುದೀಪ್ ಟಾಂಗ್ ಕೊಟ್ಟರು. ಆನೆ ಮತ್ತು ಇರುವೆ ಆಟದಲ್ಲಿ ಎರಡೂ ಮುಖ್ಯವೆ. ಆದರೆ, ಆನೆ ಜೊತೆ ಇದ್ದರೆ ಇರುವೆ ಕಾಣುವುದಿಲ್ಲ ಅನ್ನೋದನ್ನು ಮರೆಯಬೇಡಿ ಎಂದು ಹೇಳಿದರು.

ಟಾಪ್ ಗೇರ್ ಉಳಿದಿದೆ: ಆರಂಭದಲ್ಲಿ ತಣ್ಣಗಿದ್ದ ಶಮಂತ್ ಈಗ ಚುರುಕು ಪಡೆದಿದ್ದಾರೆ. ಇದನ್ನೇ ಉಲ್ಲೇಖಿಸಿದ ಕಿಚ್ಚ, ನೀವೀಗ ಮೊದಲ ಗೇರ್‌ನಿಂದ ಮೂರನೇ ಗೇರ್‌ಗೆ ಬಂದಿದ್ದೀರಿ. ಆದರೆ, ಟಾಪ್ ಗೇರ್ ಸಹ ಇದೆ ಎಂಬುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.

ಇತ್ತ, ದಿವ್ಯಾ ಉರುಡುಗ ಅವರಿಗೆ ಆರೋಗ್ಯ ಕಾಪಾಡಿಕೊಂಡು ಟಾಸ್ಕ್‌ಗಳತ್ತ ಗಮನ ಹರಿಸುವಂತೆ ಸೂಚಿಸಿದ ಸುದೀಪ್, ಆತ್ಮವಿಶ್ವಾಸ ಹೆಚ್ಚಾದಂತೆ ಮುಗ್ಧತೆ ಮಾಯವಾಗುತ್ತದೆ ಎಂಬುದನ್ನು ಅರಿಯುವಂತೆ ಅರವಿಂದ್‌ಗೆ ತಿಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT