ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8: ಬೆಸ್ಟ್ ಆದ ಪ್ರಶಾಂತ್, ವೈಷ್ಣವಿಗೆ ಕಣ್ಣೀರು ಹಾಕಿಸಿ ಜೈಲಿಗೋದ ರಘು

Last Updated 8 ಮೇ 2021, 5:36 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ 67ನೇ ದಿನ ಹೊಸ ನಾಯಕನ ಆಯ್ಕೆಯಾಗಿದೆ. ಸುದೀಪ್ ಸಂದೇಶದ ಬಳಿಕ ಒಂದಿಷ್ಟು ಬದಲಾಗಿರುವ ಪ್ರಶಾಂತ್ ಸಂಬರಗಿ ಅವರು ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಾಯಕರಾಗಿದ್ದಾರೆ. ಇನ್ನು, ಊಟದ ಕಾರಣಕ್ಕೆ ವೈಷ್ಣವಿ ಕಣ್ಣೀರು ಹಾಕಿದ್ದಾರೆ.

10ನೇ ವಾರ ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿಯದ್ದೇ ಹವಾ. ಕ್ಯಾಪ್ಟೆನ್ಸಿ ಕಂಟೆಸ್ಟೆಂಟ್ ಟಾಸ್ಕ್‌ನಲ್ಲಿ 2 ಸಾವಿರಕ್ಕೂ ಅಧಿಕ ಅಂಕಗಳಿಸಿದ್ದ ಸಂಬರಗಿ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಇನ್ನುಳಿದ ಮೂವರನ್ನು ಹಿಂದಿಕ್ಕಿ ಜಯಶಾಲಿಯಾದರು.

ಅಂತಿಮ ಹಂತದಲ್ಲಿ ನಾಯಕನಗಾದಿಗೆ ಶಮಂತ್, ಪ್ರಶಾಂತ್, ವೈಷ್ಣವಿ ಮತ್ತು ಶುಭಾ ಪೂಂಜಾ ನಡುವೆ ಪೈಪೋಟಿ ಏರ್ಪಟ್ಟಿತ್ತು. ಎಲ್ಲ ಸ್ಪರ್ಧಿಗಳಿಗೂ ಚೆಂಡುಗಳನ್ನು ತುಂಬಿದ್ದ ಬ್ಯಾಗ್ ಕಟ್ಟಲಾಗಿತ್ತು. ಸೊಂಟವನ್ನು ತಿರುಗಿಸುವ ಮೂಲಕ ಬಾಲುಗಳನ್ನು ಉದುರಿಸಬೇಕು. ಎಲ್ಲಾ ಬಾಲುಗಳನ್ನು ಉದರಿಸುವವರು ನಾಯಕನಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ನಾಲ್ವರೂ ಸ್ಪರ್ಧಿಗಳು ಶಕ್ತಿ ಮೀರಿ ಪ್ರಯತ್ನ ಪಟ್ಟರೂ ಸಂಬರಗಿ ವಿಜಯಶಾಲಿಯಾದರು. ಒಂದೇ ಒಂದು ಬಾಲ್ ಉಳಿದಿದ್ದ ಶಮಂತ್, ಎರಡು ಬಾಲ್ ಉಳಿಸಿಕೊಂಡಿದ್ದ ಶುಭಾ, ಪ್ರಶಾಂತ್‌ಗೆ ಸ್ಪರ್ಧೆ ನೀಡಿದರು. ಈ ವಾರ ಮಹಿಳೆಯರಿಗೆ ಕ್ಯಾಪ್ಟನ್ ಅಗುವ ಅವಕಾಶ ಇತ್ತಾದರೂ ಶುಭಾ ಮತ್ತು ವೈಷ್ಣವಿ ಗೆಲುವಿನ ನಗೆ ಬೀರುವಲ್ಲಿ ವಿಫಲರಾದರು.

ಬೆಸ್ಟ್ ಪರ್ಫಾಮರ್ ಸಂಬರಗಿ: ಕಳೆದ ವಾರ ಉಪವಾಸ, ಜಗಳದಲ್ಲೇ ಕಾಲ ಕಳೆದಿದ್ದ ಸಂಬರಗಿ ಈ ವಾರ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಹೀಗಾಗಿ, ಮನೆಯ ಹಲವು ಸದಸ್ಯರು ಅವರ ಹೆಸರನ್ನು ಸೂಚಿಸಿದ್ದರಿಂದ ವಾರದ ಬೆಸ್ಟ್ ಪರ್ಫಾಮರ್ ಗೌರವ ಸಹ ದೊರೆಯಿತು.

ಕಳಪೆಯಾದ ರಘು: ಟಾಸ್ಕ್ ಮುಗಿದ ಬಳಿಕ ಪ್ರಾಪರ್ಟಿಗಳನ್ನು ಮುಟ್ಟಬಾರದೆಂಬ ನಿಯಮವಿದ್ದರೂ ಸಹ ಅದೇ ತಪ್ಪು ಮಾಡಿ ಮನೆಯವರಿಗೆಲ್ಲ ಬಿಗ್ ಬಾಸ್, ಕಾಫಿ, ಟೀ, ಹಾಲು ಬಂದ್ ಮಾಡುವ ಶಿಕ್ಷೆ ಕೊಡಲು ಕಾರಣರಾದ ರಾಘವೇಂದ್ರ ಅಲಿಯಾಸ್ ರಘು ಅವರನ್ನು ಕಳಪೆ ಎಂದು ಮನೆಯ ಹಲವು ಸದಸ್ಯರು ಸೂಚಿಸಿದರು.

ವೈಷ್ಣವಿಗೆ ಕಣ್ಣೀರು ಹಾಕಿಸಿದ ರಘು: ಊಟದ ಸಮಯದಲ್ಲಿ ಅನ್ನ ಸ್ವಲ್ಪ ಕಡಿಮೆ ಇತ್ತು. ಈ ವೇಳೆ ವಿಚಲಿತರಾದ ರಘು, ಅಡುಗೆ ಮಾಡಿದ್ದ ವೈಷ್ಣವಿ ಅವರನ್ನು ಪ್ರಶ್ನಿಸಿದರು. ಅದಕ್ಕೆ, ಪ್ರತಿಕ್ರಿಯಿಸಿದ ವೈಷ್ಣವಿ ನಿಜವಾಗಿಯೂ ಹೇಳುತ್ತಿದ್ದೀಯಾ ಎಂದು ಪ್ರಶ್ನಿಸಿದರು. ತಟ್ಟೆ ಮುಂದೆ ಕುಳಿತು ಸುಳ್ಳು ಹೇಳಲು ನನಗೆ ಹುಚ್ಚು ಹಿಡಿದಿದೆಯಾ? ಎಂದು ರಘು ಖಾರವಾಗಿ ಉತ್ತರಿಸಿದರು. ಇದರಿಂದ, ನೋವು ಮಾಡಿಕೊಂಡ ವೈಷ್ಣವಿ ಕಣ್ಣೀರು ಹಾಕಿದರು. ಬಳಿಕ, ಶುಭಾ ಪೂಂಜಾ ಸಾಂತ್ವನ ಹೇಳಿದರು. ಕೆಲ ಸಮಯದ ಬಳಿಕ ತಪ್ಪನ್ನು ತಿಳಿದುಕೊಂಡು ರಘು ಸಹ ವೈಷ್ಣವಿ ಬಳಿ ಕ್ಷಮೆ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT