ಕನ್ನಡದ ಬಿಗ್ಬಾಸ್ ಮನೆ ಸದ್ಯ ಬಿ.ಬಿ ಕಾಲೇಜ್ ಆಗಿ ಬದಲಾಗಿದೆ. ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಬಿಗ್ಬಾಸ್ ‘ನಿಮ್ಮ ಜೀವನದ ಒಂದು ಗೋಲ್ಡನ್ ಪೀರಿಯಡ್ಗೆ ಮತ್ತೆ ನೀವೆಲ್ಲರೂ ಹಿಂದಿರುಗಲಿದ್ದೀರಿ ಈ ವಾರ ಪೂರ್ತಿ ಬಿಗ್ಬಾಸ್ ಮನೆ ಬಿ.ಬಿ ಕಾಲೇಜ್ ಕ್ಯಾಂಪಸ್ ಆಗಿರಲಿದೆ’ ಎಂದಿದ್ದಾರೆ.
.ಜೊತೆಗಿದ್ದು ಬಾವಿ ತೋಡ್ತಿದ್ದೀರಾ: ಅಶ್ವಿನಿ ಗೌಡ–ಜಾಹ್ನವಿ ಸ್ನೇಹದಲ್ಲಿ ಬಿರುಕು.ಬಿಗ್ಬಾಸ್ ಇಡೀ ತಂಡಕ್ಕೆ ಕ್ಷಮೆಯಾಚಿಸಿದ ಅಶ್ವಿನಿ ಗೌಡ: ಕಾರಣ ಇಲ್ಲಿದೆ.
ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಸದ್ಯ, ತಮ್ಮ ಕಾಲೇಜು ದಿನಗಳಿಗೆ ಹಿಂತಿರುಗಲಿದ್ದಾರೆ. ಬಿಗ್ಬಾಸ್ ಕಾಲೇಜು ಕ್ಯಾಂಪಸ್ನಲ್ಲಿ ಸ್ಪರ್ಧಿಗಳು ಮಜಾ ಮಾಡಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ರೆಟ್ರೋ ಉಡುಪುಗಳನ್ನು ಧರಿಸಿಕೊಂಡು ಮೋಜುಮಸ್ತಿ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಬಿಡುಗಡೆಯಾದ ಪ್ರೊಮೋದಲ್ಲಿ ಗಿಲ್ಲಿ ನಟ ಮಲ್ಲಮ್ಮರನ್ನು ಎತ್ತಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಚಂದ್ರಪ್ರಭ, ‘ನನ್ನ ಹೆಸರು ಚಂದ್ರಪ್ರಭ, ನನ್ನ ವಯಸ್ಸು 21’ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಅದಕ್ಕೆ ಮನೆಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

ಇನ್ನು ಸೂರಜ್ ಹಾಗೂ ರಾಶಿಕಾ ಪ್ರೀತಿ ಮುಂದುವರೆದಿದ್ದು, 'ಹುಡುಗಿಯರಿಗೆ ಲೈನ್ ಹೊಡೆಯಬಹುದಾ’ ಎಂದು ಸೂರಜ್ ಕೇಳಿದ್ದಾರೆ. ಅದಕ್ಕೆ ರಾಶಿಕಾ ‘ನೀನು ಅದರಲ್ಲೇ ಇದ್ದು ಬಿಡು ಎಂದು ಹೇಳುತ್ತಾ, ನನಗೆ ಇವನು ಇಷ್ಟ’ ಎಂದು ಜೋರಾಗಿ ಕೂಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.