ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಮಂಜು ಪಾವಗಡ ಅವರು ಫಿನಾಲೆಯಲ್ಲಿ ತಾವು ತೊಟ್ಟಿದ್ದ ಬಟ್ಟೆ ಕಲರ್ಸ್ ಕನ್ನಡ ಚಾನಲ್‌ನಮಜಾಭಾರತ ಕಾರ್ಯಕ್ರಮದತೀರ್ಪುಗಾರರಲ್ಲಿ ಒಬ್ಬರಾದ ನಟಿ ರಚಿತಾ ರಾಮ್ ಕೊಡಿಸಿದ್ದು ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಪ್ರಜಾವಾಣಿಯ ಫೇಸ್‌ಬುಕ್ ಲೈವ್ ಸಂವಾದದಲ್ಲಿ ಪಾಲ್ಗೊಂಡ ಮಂಜು ಪಾವಗಡ ಅವರು, ಮಜಾಭಾರತ ತಂಡದಲ್ಲಿ ನಮ್ಮನ್ನು ಎಲ್ಲರೂ ತುಂಬಾ ಪ್ರೀತಿಸುತ್ತಾರೆ. ತೀರ್ಪುಗಾರರಾದ ರಚಿತಾ ರಾಮ್ ಅವರಿಗೆ ನನ್ನ ಬಗ್ಗೆ ಅತೀವ ಅಕ್ಕರೆ ಇದೆ. ತಮಾಷೆ ಮಾಡುವುದು, ಕಾಲೆಳೆಯುವುದು, ಸ್ಕಿಟ್ ಸರಿ ಇಲ್ಲದಿದ್ದಾಗ ಬುದ್ಧಿ ಹೇಳುತ್ತಾರೆ ಎಂದು ಹೇಳಿದರು. ಗುರುಕಿರಣ್ ಅವರೂ ಸಹ ನಮ್ಮ ತಂಡಕ್ಕೆ ಸಲಹೆ, ಸೂಚನೆಗಳನ್ನು ಕೊಡುತ್ತಾರೆ ಎಂದು ಹೇಳಿಕೊಂಡರು.
ನಮ್ಮ ತಂಡ ನಮ್ಮನ್ನು ಎಷ್ಟು ಪ್ರೀತಿಸುತ್ತೆ ಎಂಬುದಕ್ಕೆ ಬಿಗ್ ಬಾಸ್ ಫಿನಾಲೆಯಲ್ಲಿ ನಾನು ಹಾಕಿದ್ದ ಉಡುಪೇ ಸಾಕ್ಷಿ. ಸ್ವತಃ ರಚಿತಾ ರಾಮ್ ಅವರೇ ನಾನು ಫಿನಾಲೆಯಲ್ಲಿ ಇದೇ ಬಟ್ಟೆ ಹಾಕಿಕೊಳ್ಳಬೇಕೆಂದು ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದರು. ಕಾರ್ಯಕ್ರಮ ಮುಗಿದ ಬಳಿಕವಷ್ಟೇ ಅದು ನನಗೆ ಗೊತ್ತಾಯಿತು ಎಂದು ಮಂಜು ಪಾವಗಡ ಅವರು ಪ್ರಜಾವಾಣಿ ಲೈವ್ ಸಂವಾದದಲ್ಲಿ ಹೇಳಿದ್ದಾರೆ.
ಇದೇವೇಳೆ, ನನಗೆ ಜೀವನ ಕೊಟ್ಟ ಮಜಾಭಾರತ ಕಾರ್ಯಕ್ರಮದಲ್ಲೇ ಮುಂದುವರಿಯುವುದಾಗಿ ಮಂಜು ಪಾವಗಡ ಸ್ಪಷ್ಟಪಡಿಸಿದ್ದಾರೆ. ಮತ್ತೊಂದು ಸೀಸನ್ ಆರಂಭವಾಗಲಿದೆ ಎಂದದು ಹೇಳಿದ್ದಾರೆ. ಅದರಲ್ಲಿ ಖಂಡಿತಾ ಭಾಗವಹಿಸುತ್ತೇನೆ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.