ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ 106ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಭಾನುವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಿಂದ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ. ಕನ್ನಡ, ತೆಲುಗು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ರಾಶಿಕಾ ಶೆಟ್ಟಿ ಕೊನೆಯ ಕ್ಷಣದಲ್ಲಿ ಬಿಗ್ಬಾಸ್ ಮನೆಗೆ ವಿದಾಯ ಹೇಳಿದ್ದಾರೆ.

16 ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ರಾಶಿಕಾ ಅವರು ಬಲಿಷ್ಠ ಸ್ಪರ್ಧಿಯಾಗಿ ಟಾಸ್ಕ್ಗಳಲ್ಲಿ ಭಾಗವಹಿಸಿದ್ದರು. ಅಲ್ಲದೇ ಬಿಗ್ಬಾಸ್ ಮನೆಗೆ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದರು.
.BBK12: ಫಿನಾಲೆಗೆ ಮುನ್ನವೇ ಅಶ್ವಿನಿ ಗೌಡ ಪರ ಅಬ್ಬರದ ಪ್ರಚಾರ.ಅಚ್ಚರಿಯ ರೀತಿಯಲ್ಲಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಾತಿನ ಮಲ್ಲಿ ಮಲ್ಲಮ್ಮ.
ಇನ್ನೇನು ಬಿಗ್ಬಾಸ್ ಫಿನಾಲೆಗೆ ಒಂದು ವಾರ ಇರುವ ಹೊತ್ತಲ್ಲೇ ಮನೆಯಿಂದ ಹೊರ ಬಂದಿದ್ದಾರೆ. ಆ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಬಿಗ್ಬಾಸ್ ಮನೆಯ ಈ ಅದ್ಭುತ ಪಯಣ ಇಲ್ಲಿಗೆ ಮುಕ್ತಾಯವಾಗಿದೆ. ನನ್ನ ಈ ಪಯಣದಲ್ಲಿ ನೀವು ನೀಡಿದ ಪ್ರೀತಿ, ಬೆಂಬಲ ಮತ್ತು ಹಾರೈಕೆಗಳಿಗೆ ನಾನು ಸದಾ ಋಣಿ. ಸೋಲು-ಗೆಲುವಿಗಿಂತ ನಿಮ್ಮ ಹೃದಯದಲ್ಲಿ ನನಗೆ ಸಿಕ್ಕ ಸ್ಥಾನವೇ ದೊಡ್ಡದು. ನನ್ನನ್ನು ಬೆಳೆಸಿದ ಕನ್ನಡಿಗರಿಗೆ ಮತ್ತು ನನ್ನ ಎಲ್ಲಾ ಅಭಿಮಾನಿಗಳಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆಯೇ ಇರಲಿ’ ಎಂದು ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಮುಂದೆ ರಾಶಿಕಾ ಹೇಳಿದ್ದೇನು?

ಬಿಗ್ಬಾಸ್ ಮನೆಯಿಂದ ಹೊರಬಂದಿದ್ದ ರಾಶಿಕಾ ಅವರು ಕಿಚ್ಚ ಸುದೀಪ್ ಮುಂದೆ, ‘ಫಿನಾಲೆಯಲ್ಲಿ ಇರುವುದಕ್ಕೆ ಆಗಲಿಲ್ಲ ಎಂದು ಬೇಸರವಾಗುತ್ತಿದೆ. ನನ್ನ ಜೀವನದಲ್ಲಿ ಒಳ್ಳೆಯ ನಿರ್ಧಾರ ಮಾಡಿದ್ದು ಎಂದರೆ ಅದು ಬಿಗ್ಬಾಸ್ ಶೋ ಆಯ್ಕೆ ಮಾಡಿಕೊಂಡಿದ್ದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.