ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bigg Boss 10: ನಾಮಿನೇಷನ್‌ ಪಾಸ್‌ಗಾಗಿ ಪ್ರತಾಪ್‌ ಮೇಲೆ ಮುಗಿಬಿದ್ದ ಸ್ಪರ್ಧಿಗಳು

Published 30 ಅಕ್ಟೋಬರ್ 2023, 6:28 IST
Last Updated 30 ಅಕ್ಟೋಬರ್ 2023, 6:28 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ನಾಲ್ಕನೇ ವಾರ ಬೆಳಿಗ್ಗೆಯೇ ಆರಂಭವಾದ ನಾಮಿನೇಷನ್‌ ಪ್ರಕ್ರಿಯೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ. ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚನಿಂದ ಸ್ಫೂರ್ತಿ ಪಡೆದ ಪ್ರತಾಪ್‌, ಕಾರ್ತಿಕ್‌ ನಡೆಸಿದ ಬಲಪ್ರಯೋಗಕ್ಕೂ ಜಗ್ಗಲಿಲ್ಲ, ವಿನಯ್‌ ಬಿರುಸಿನ ಮಾತಿಗೂ ಕ್ಯಾರೇ ಅಂದಿಲ್ಲ.

ಜಿಯೊ ಸಿನಿಮಾದಲ್ಲಿ 24ಗಂಟೆಯೂ ಉಚಿತವಾಗಿ ನೇರಪ್ರಸಾರವಾಗುತ್ತಿರುವ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಹಣಾಹಣಿ ತೀವ್ರವಾಗಿದೆ.  ಬೆಳಿಗ್ಗೆಯ ಸಿಹಿನಿದ್ದೆಯಲ್ಲಿದ್ದ ಸದಸ್ಯರಿಗೆ ನಾಮಿನೇಷನ್‌ ಶಾಕ್‌ ಕಾದಿತ್ತು. ‘ಈ ವಾರ ಎಲ್ಲರಿಗೂ ನಾಮಿನೇಷನ್ ಮಾಡುವ ಅವಕಾಶ ಇರುವುದಿಲ್ಲ. ಬಲೂನ್‌ಗಳನ್ನು ಒಡೆದು ಅದರಲ್ಲಿರುವ ನಾಮಿನೇಷನ್ ಪಾಸ್‌ಗಳನ್ನು ಹುಡುಕಬೇಕು’ ಎಂದು ಹೇಳಲಾಗಿತ್ತು. ತಕ್ಷಣವೇ ಮನೆಯ ಸದಸ್ಯರೆಲ್ಲರೂ ಬಲೂನ್‌ಗಳನ್ನು ತುಂಬಿರುವ ಜಾಗಕ್ಕೆ ಹೋಗಿ ಬಲೂನ್‌ಗಳನ್ನು ಒಡೆದು ನೋಡಲು ಶುರುಮಾಡಿದ್ದರು. ಆದರೆ ನಾಮಿನೇಷನ್ ಪಾಸ್ ಸಿಕ್ಕಿದ್ದು ಡ್ರೋಣ್ ಪ್ರತಾಪ್‌ಗೆ!.

ತನಗೆ ಸಿಕ್ಕಿದ ಪಾಸ್‌ ಅನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಿದ್ದ ಪ್ರತಾಪ್ ಅವರನ್ನು ವಿನಯ್‌, ‘ಹೆಂಗಿರತ್ತೆ ನೋಡೋಣ ತೋರಿಸು’ ಎಂದು ಕೇಳಿದ್ದಾರೆ. ಆದರೆ ಪ್ರತಾಪ್ ಪಾಸ್‌ ಅನ್ನು ವಿನಯ್‌ ಕೈಗೆ ಕೊಟ್ಟಿಲ್ಲ. ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕಾರ್ತಿಕ್, ಸ್ನೇಹಿತ್ ಎಲ್ಲರೂ ಪ್ರತಾಪ್‌ ಮೈಮೇಲೆ ಮುಗಿಬಿದ್ದು ಅವರಿಂದ ಪಾಸ್ ಕಸಿಯಲು ಯತ್ನಿಸುತ್ತಿದ್ದಾರೆ. ಎಲ್ಲರ ನಡುವೆ ಸಿಲುಕಿ ಒದ್ದಾಡುತ್ತಿರುವ ಪ್ರತಾಪ್‌ ಕಿರುಚಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT