ಬುಧವಾರ, ಫೆಬ್ರವರಿ 19, 2020
23 °C

ಬಿಗ್‌ಬಾಸ್‌ ಸೀಸನ್‌ 7: ಶೈನ್, ಪ್ರತಾ‍‍ಪ್, ವಾಸುಕಿ... ವಿನ್ನರ್‌ ಪಟ್ಟ ಯಾರಿಗೆ? 

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

prajavani

ಕಲರ್ಸ್‌ ಸೂಪರ್‌ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್‌ ಸೀಸನ್ 7 ಸ್ಪರ್ಧೆಯು ಅಂತಿಮ ಘಟ್ಟ ತಲುಪಿದೆ. ಭಾನುವಾರದ (ಫೆ.3) ಗ್ರ್ಯಾಂಡ್‌ ಫಿನಾಲೆಗೆ ಕ್ಷಣಗಣನೆ ಶುರುವಾಗಿದ್ದು, ಯಾರಾಗಲಿದ್ದಾರೆ ಈ ಆವೃತ್ತಿ ವಿನ್ನರ್‌ ಎನ್ನುವ ಕುತೂಹಲ ಬಿಗ್‌ಬಾಸ್ ಪ್ರಿಯರಲ್ಲಿ ಹೆಚ್ಚಾಗಿದೆ. 

ಕುರಿ ಪ್ರತಾಪ್‌, ವಾಸುಕಿ ವೈಭವ್‌, ಶೈನ್‌ ಶೆಟ್ಟಿ, ಭೂಮಿ ಶೆಟ್ಟಿ, ದೀಪಿಕಾ ದಾಸ್‌.. ಈ ಐವರು ಫೈನಲಿಸ್ಟ್‌ಗಳಲ್ಲಿ ಶನಿವಾರದ ಫಿನಾಲೆ ಎಪಿಸೋಡ್‌ನಲ್ಲಿ ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್‌ ದೊಡ್ಡಮನೆಯಿಂದ ಹೊರನಡೆದರು. ಸದ್ಯ ಮನೆಯಲ್ಲಿ ಉಳಿದಿರುವುದು ವಾಸುಕಿ ವೈಭವ್‌, ಕುರಿ ಪ್ರತಾಪ್‌ ಮತ್ತು ಶೈನ್‌ ಶೆಟ್ಟಿ. ಈ ಮೂವರ ನಡುವೆ ಭಾರಿ ಸ್ಪರ್ಧೆಯಿದ್ದು, ಕಿಚ್ಚ ಸುದೀಪ್ ಯಾರ ಕೈ ಮೇಲೆತ್ತುತ್ತಾರೆ ಎನ್ನುವ ತವಕ ಎಲ್ಲರಲ್ಲಿ ಮನೆ ಮಾಡಿದೆ.

‘ಪ್ರಜಾವಾಣಿ‘ ಟ್ವಿಟ್ಟರ್‌ನಲ್ಲಿ ಈ ಕುರಿತು ಕ್ರಿಯೇಟ್ ಮಾಡಿರುವ ಪೋಲ್‌ಗೆ ಇಲ್ಲಿಯವರೆಗೆ 210 ಮಂದಿ ಮತ ಹಾಕಿದ್ದು, ಕುರಿ ಪ್ರತಾಪ್‌ಗೆ ಹೆಚ್ಚಿನ ವೋಟ್‌ಗಳು ಸಿಕ್ಕಿವೆ. ಶೈನ್‌ ಶೆಟ್ಟಿ ಎರಡನೇ ಸ್ಥಾನದಲ್ಲಿದ್ದು, ವಾಸುಕಿ ವೈಭವ್‌ ಇವರಿಬ್ಬರಿಗಿಂತ ಕಡಿಮೆ ವೋಟ್‌ ಪಡೆದುಕೊಂಡಿದ್ದಾರೆ.

ಸೀಸನ್ 1ರಲ್ಲಿ ನಟ ವಿಜಯ್ ರಾಘವೇಂದ್ರ ಗೆದ್ದಿದ್ದರು. ಎರಡನೇ ಸೀಸನ್‌ನಲ್ಲಿ ನಿರೂಪಕ ಅಕುಲ್ ಬಾಲಾಜಿ ಬಿಗ್‌ಬಾಸ್ ಕಿರೀಟ ಧರಿಸಿದ್ದರು. ಮೂರನೇ ಸೀಸನ್‌ನಲ್ಲಿ ನಟಿ ಶ್ರುತಿ ವಿನ್ನರ್‌ ಆಗಿದ್ದರು. ನಾಲ್ಕನೇ ಸೀಸನ್‌ನಲ್ಲಿ ಪ್ರಥಮ್ ಗೆದ್ದಿದ್ದರು. ಐದನೇ ಸೀಸನ್‌ನಲ್ಲಿ ಗಾಯಕ ಚಂದನ್ ಶೆಟ್ಟಿ ವಿನ್ನರ್‌ ಆಗಿದ್ದರು. ಆರರಲ್ಲಿ ಆಧುನಿಕ ಕೃಷಿಕ ಎಂದೇ ಹೆಸರು ಮಾಡಿದ್ದ ಶಶಿಕುಮಾರ್ ಬಿಗ್‌ಬಾಸ್‌ ವಿನ್ನರ್‌ ಟ್ರೋಫಿ ಹಿಡಿದಿದ್ದರು.

ಈ ಹಿಂದಿನ ಬಿಗ್‌ಬಾಸ್ ಸೀಸನ್‌ನಲ್ಲಿ ವಿನ್ನರ್‌ಗೆ ₹50 ಲಕ್ಷ ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತಿತ್ತು. ಈ ಬಾರಿ ಅದು ₹61 ಲಕ್ಷಕ್ಕೆ ಏರಿಕೆಯಾಗಿದೆ. ಬಿಗ್‌ಬಾಸ್‌ನ ಸ್ಪರ್ಧೆಯಲ್ಲಿ ಗೆದ್ದವರು ಮತ್ತು ಭಾಗವಹಿಸುವ ಸ್ಪರ್ಧಿಗಳಿಗೆ ಬೆಳ್ಳಿತೆರೆಯಲ್ಲಿ ನಟನೆಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಹಿಂದಿನ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವರು ಈಗ ಹಿರಿತೆರೆ, ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

ಬಿಗ್‌ಬಾಸ್‌ ಸೀಸನ್‌ 1
ಬಿಗ್‌ಬಾಸ್‌ ಸೀಸನ್‌ 2
ಬಿಗ್‌ಬಾಸ್‌ ಸೀಸನ್‌ 3
ಬಿಗ್‌ಬಾಸ್‌ ಸೀಸನ್‌ 4
ಬಿಗ್‌ಬಾಸ್‌ ಸೀಸನ್‌ 5
ಬಿಗ್‌ಬಾಸ್‌ ಸೀಸನ್‌ 6

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು