ಸೋಮವಾರ, ಜನವರಿ 17, 2022
20 °C

ಯಾರು ಸೆಕ್ಸಿ? ಎಂದು ಪ್ರಶ್ನಿಸಿದ ನಟಿ ಉರ್ಫಿ ಜಾವೇದ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Urfi Javed Instagram Post

ಬೆಂಗಳೂರು: ಬಿಗ್‌ಬಾಸ್ ಒಟಿಟಿ ಮೂಲಕ ಜನತೆಗೆ ಪರಿಚಿತರಾದ ನಟಿ ಉರ್ಫಿ ಜಾವೇದ್, ಸಾಮಾಜಿಕ ತಾಣಗಳಲ್ಲಿ ಸ್ವಲ್ಪ ಹೆಚ್ಚೇ ಎನ್ನಿಸುವಷ್ಟು ಸಕ್ರಿಯರಾಗಿರುತ್ತಾರೆ.

ಅದರಲ್ಲೂ ಬೋಲ್ಡ್ ಎನ್ನಿಸುವ ಹೇಳಿಕೆ ನೀಡುವಲ್ಲಿ ಅವರು ಸದಾ ಮುಂದು.. ಸೋಮವಾರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಅದರಲ್ಲಿ ಕಪ್ಪು ಬಣ್ಣದ, ಹೊಸ ವಿನ್ಯಾಸದ ಉಡುಪು ಒಂದನ್ನು ಧರಿಸಿರುವ ಉರ್ಫಿ, ‘ಯಾರು ಸೆಕ್ಸಿ?‘ ಎಂದು ಪ್ರಶ್ನಿಸಿ ಅಡಿಬರಹ ನೀಡಿದ್ದಾರೆ.

ಉರ್ಫಿ ಅವರ ಪೋಸ್ಟ್ ನೋಡಿರುವ ಟ್ರೋಲಿಗರು, ಸಾಮಾಜಿಕ ತಾಣಗಳಲ್ಲಿ ಉರ್ಫಿ ಹೊಸ ಉಡುಪು ಕುರಿತು ಟ್ರೋಲ್ ಮಾಡಿದ್ದಾರೆ.

ಆದರೆ ಮತ್ತಷ್ಟು ಜನರು ನಟಿಗೆ ಬೆಂಬಲ ಸೂಚಿಸಿದ್ದು, ನಿಮ್ಮಿಷ್ಟದಂತೆಯೇ ಇರಿ, ಯಾರದೋ ಮಾತುಗಳಿಗೆ ಕಿವಿಗೊಡಬೇಡಿ ಎಂದು ಕಾಮೆಂಟ್ ಮೂಲಕ ಬೆಂಬಲ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು