ಶುಕ್ರವಾರ, ಜೂನ್ 18, 2021
21 °C

ಬಿಗ್‌ಬಾಸ್‌ ಖ್ಯಾತಿಯ ಚೈತ್ರ ಕೋಟೂರು ಸರಳ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್‌ಬಾಸ್‌ ರಿಯಾಲಿಟಿ ಶೋ ಮುಖಾಂತರ ಜನಪ್ರಿಯಗೊಂಡಿದ್ದ ನಟಿ, ನಿರ್ದೇಶಕಿ, ಬರಹಗಾರ್ತಿ ಚೈತ್ರಾ ಕೋಟೂರು ಅವರು ಭಾನುವಾರ ಬೆಂಗಳೂರಿನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.  

ಬಿಗ್‌ಬಾಸ್‌ 7ನೇ ಆವೃತ್ತಿಯಲ್ಲಿ ಸದ್ದು ಮಾಡಿದ್ದ ಚೈತ್ರಾ, ಇದೀಗ ಸದ್ದಿಲ್ಲದೆ ಬ್ಯಾಟರಾಯನಪುರದ ಗಣಪತಿ ದೇವಸ್ಥಾನವೊಂದರಲ್ಲಿ ಉದ್ಯಮಿಯಾಗಿರುವ ನಾಗರ್ಜುನ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಬಿಗ್‌ಬಾಸ್‌ನಲ್ಲಿ ಎಲಿಮಿನೇಟ್‌ ಆಗಿದ್ದ ಚೈತ್ರಾ, ವೈಲ್ಡ್‌ಕಾರ್ಡ್‌ ಮೂಲಕ ಮತ್ತೆ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದರು.

ಸೂಜಿದಾರ ಚಿತ್ರದ ಮುಖಾಂತರ ನಟಿಯಾಗಿ ಚೈತ್ರಾ ಚಂದನವನ ಪ್ರವೇಶಿಸಿದ್ದರು. ಬಿಗ್‌ಬಾಸ್‌ನಿಂದ  ಹೊರಬಂದ ಬಳಿಕ, ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ‘ಹುಡುಗರು ತುಂಬಾ ಒಳ್ಳೆಯವರು’ ಎಂಬ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು