‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಆರಂಭವಾಗಿದೆ. ಕಳೆದ ಸೀಸನ್ನಂತೆ ಈ ಬಾರಿಯೂ ಕೂಡ ಕಿರುತೆರೆಯ ಕಲಾವಿದರು ಹಾಗೂ ಸಾಮಾನ್ಯ ಜನರಿಗೂ ಡ್ಯಾನ್ಸ್ ಮಾಡಲು ಅವಕಾಶ ನೀಡಲಾಗಿದೆ. ಆದರೆ ವಿಶೇಷ ಏನೆಂದರೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಗೃಹಿಣಿಯೊಬ್ಬರು ಪುನೀತ್ ರಾಜ್ಕುಮಾರ್ ನಟನೆಯ ‘ಬಿಂದಾಸ್’ ಸಿನಿಮಾ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
.DKD ವೇದಿಕೆಗೆ ಬಂದ 7 ವರ್ಷದ ಬಾಲಕ: ಈತನ ಡ್ಯಾನ್ಸ್ಗೆ ಮನಸೋತ ಶಿವಣ್ಣ, ರಚಿತ ರಾಮ್.ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಎಂಟ್ರಿ ಕೊಟ್ರು ಕಿರುತೆರೆ ಕಲಾವಿದರು.
ಜೀ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಗೃಹಿಣಿಯೊಬ್ಬರು ವೇದಿಕೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ತೀರ್ಪುಗಾರರು ಗೃಹಿಣಿಯ ನೃತ್ಯ ಕಂಡು ಅಚ್ಚರಿಗೊಂಡಿದ್ದಾರೆ. ವೇದಿಕೆಗೆ ಬಂದ ಶ್ರೀದೇವಿ ಅವರು ತರ ತರ ಒಂತರ ಹಾಡಿಗೆ ಬಿಂದಾಸ್ ಆಗಿ ನೃತ್ಯ ಮಾಡಿದ್ದಾರೆ. ಗೃಹಿಣಿಯ ಡ್ಯಾನ್ಸ್ ನೋಡುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರು ಬೆರಗಾಗಿದ್ದಾರೆ. ಡ್ಯಾನ್ಸ್ ಕೊನೆಯಲ್ಲಿ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಇನ್ನು, ಜೀ ಕನ್ನಡ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಶ್ರೀಮತಿ ಶ್ರೀದೇವಿ ಅವರ ವಿಡಿಯೊಗೆ 19.8 ಮಿಲಿಯನ್ ವೀಕ್ಷಣೆ ಬಂದಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ನೋಡಿದ ನೆಟ್ಟಿಗರು ‘ಕಲೆಗೆ ವಯಸ್ಸಿನ ಮಿತಿ ಇಲ್ಲ ಅಂತ ನೀವು ಸಾಬೀತು ಮಾಡಿದ್ದೀರಿ ಅಮ್ಮ’ ಎಂದು ಕಾಮೆಂಟ್ ಹಾಕಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ ಇವರೊಂದಿಗೆ ರಚಿತಾ ರಾಮ್ ಕೂಡ ತೀರ್ಪುಗಾರರಾಗಿದ್ದಾರೆ. ಇನ್ನು ಮುಂದೆ ಶನಿವಾರ ಹಾಗೂ ಭಾನುವಾರ ಸಂಜೆ 7:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.