ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ನೀನಾದೆ ನಾ’ ಖ್ಯಾತಿಯ ನಟ ದಿಲೀಪ್ ಶೆಟ್ಟಿ ಅಪ್ಪನನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಮಂಗಳೂರು ಮೂಲದ ನಟ ದಿಲೀಪ್ ಶೆಟ್ಟಿ, ಕನ್ನಡ ಸೇರಿ ತೆಲುಗು ಭಾಷೆಯಲ್ಲೂ ಅಭಿನಯಿಸಿದ್ದಾರೆ.
.ಇಂದು ‘ಕ್ವಾಟ್ಲೆ ಕಿಚನ್’ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಗುವ ಹಣ ಎಷ್ಟು?.‘ಕ್ವಾಟ್ಲೆ ಕಿಚನ್’ ಗ್ರ್ಯಾಂಡ್ ಫಿನಾಲೆ: 6 ಫೈನಲಿಸ್ಟ್ಗಳಲ್ಲಿ ಗೆಲ್ಲೋದು ಯಾರು?.
ಕಲರ್ಸ್ ಕನ್ನಡ ವಾಹಿನಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪ್ರೊಮೋದಲ್ಲಿ ನಟ ದಿಲೀಪ್ ಶೆಟ್ಟಿ ಹಾಗೂ ಅವರ ತಾಯಿ ಕಣ್ಣೀರಿಟ್ಟಿದ್ದಾರೆ. ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋನಲ್ಲಿ ಫೈನಲಿಸ್ಟ್ ಆಗಿರುವ ನಟ ದಿಲೀಪ್ ಶೆಟ್ಟಿ ಗ್ರ್ಯಾಂಡ್ ಫಿನಾಲೆ ವೇಳೆ ತಮ್ಮ ತಂದೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ನಟ ದಿಲೀಪ್ ಶೆಟ್ಟಿ ಹೇಳಿದ್ದೇನು?

'ನನಗೆ ಪಪ್ಪಾ ಅಂದ್ರೆ ಸಿಕ್ಕಾಪಟ್ಟೆ ಪ್ರೀತಿ. ಇದುವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ. ಬಿಸಿನೆಸ್ ಇದ್ದರೂ ನಮ್ಮ ಅಪ್ಪ ಆಟೋ ಓಡಿಸುತ್ತಿದ್ದರು. ಅಲ್ಲಿಂದ ನಮಗೆ ಶಿಕ್ಷಣ ಕೊಡಿಸಿದರು. ನನಗೆ ಖುಷಿ ಏನೆಂದರೆ, ಕಷ್ಟ ಏನು ಅಂತ ನಮಗೆ ತೋರಿಸಿ ಕೊಟ್ಟರು. ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಸೂಟ್ ಹಾಕಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬೇಕು ಅಂತ ತುಂಬಾ ಆಸೆ ಇತ್ತು’ ಎಂದರು.

ಮುಂದುವರೆದು, ‘ಈಗ ತುಂಬಾ ಬೇಜಾರು ಏನು ಅಂದ್ರೆ.. ಕಲರ್ಸ್ ಕನ್ನಡದಲ್ಲಿ ‘ತಕಧಿಮಿತ’ ಶೋ ಮಾಡುತ್ತಿದ್ದೆ. ಮೂರು ತಿಂಗಳಲ್ಲಿ ಹೊಸ ಕಾರು ತೆಗೆದುಕೊಳ್ಳುತ್ತೇನೆ ಅಂತ ನಾನು ತಂದೆಗೆ ಮಾತು ಕೊಟ್ಟಿದ್ದೆ. ಆದರೆ ಶೋ ಶುರುವಾಗಿ ನಾಲ್ಕು ತಿಂಗಳಲ್ಲಿ ಅಪ್ಪ ತೀರಿಕೊಂಡರು’ ಎಂದು ನಟ ದಿಲೀಪ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.