ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಉಪೇಂದ್ರ ಹಾಡಿಗೆ ಬಿಗ್ಬಾಸ್ ಖ್ಯಾತಿಯ ನಂದಿನಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ವಾರ ಡಿಕೆಡಿ ವೇದಿಕೆ ಒಟ್ಟು ಮೂರು ಜನಪ್ರಿಯ ನಟರು ಎಂಟ್ರಿ ಕೊಟ್ಟಿದ್ದಾರೆ.
.DKD: ಅಪ್ಪು ಹಾಡಿಗೆ ಗೃಹಿಣಿ ಬಿಂದಾಸ್ ಡ್ಯಾನ್ಸ್; ದಂಗಾದ ಶಿವಣ್ಣ.ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಎಂಟ್ರಿ ಕೊಟ್ರು ಕಿರುತೆರೆ ಕಲಾವಿದರು.
ಇದೇ ಕ್ರಿಸ್ಮಸ್ ದಿನದಂದು (ಡಿಸೆಂಬರ್ 25) 45 ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ವೇದಿಕೆಗೆ ಬಂದಿದ್ದಾರೆ. ಅದರಲ್ಲೂ 45 ಚಿತ್ರದ ಗೆಟಪ್ನಲ್ಲಿಯೇ ನಟ ಶಿವಣ್ಣ ಎಂಟ್ರಿ ಕೊಟ್ಟ ಪ್ರೊಮೋವನ್ನು ಜೀ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ವಿಶೇಷ ಏನೆಂದರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು 45 ಚಿತ್ರದೊಂದಿಗೆ ನಿರ್ದೇಶಕರಾಗಿ ಚಂದನವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು, ಈ ತ್ರಿಮೂರ್ತಿಗಳು ಎಂಟ್ರಿ ಕೊಟ್ಟಿದ್ದಕ್ಕೆ ಸ್ಪರ್ಧಿಗಳೆಲ್ಲಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಅದರಲ್ಲೂ ಬಿಗ್ಬಾಸ್ ಮೂಲಕ ಖ್ಯಾತಿ ಪಡೆದುಕೊಂಡಿರುವ ನಂದು ಉಪೇಂದ್ರ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ನಂದಿನಿ ಅವರು ಉಪೇಂದ್ರ ಅವರ ದೊಡ್ಡ ಅಭಿಮಾನಿಯಾಗಿದ್ದು, ನೆಚ್ಚಿನ ನಟನ ಮುಂದೆ ನೃತ್ಯ ಮಾಡಿದ್ದು ನಂದುಗೆ ಖುಷಿ ಕೊಟ್ಟಿದೆ. ಅಲ್ಲದೇ ನಂದಿನಿ ಡ್ಯಾನ್ಸ್ ನೋಡಿ ಉಪೇಂದ್ರ, ರಚಿತಾ ರಾಮ್, ಶಿವಣ್ಣ, ರಾಜ್ ಬಿ ಶೆಟ್ಟಿ ಸೇರಿದಂತೆ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.