ಬಾಲಿವುಡ್ನ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಅವರ ಗತ್ತು, ಅವರು ಬಿಟ್ಟಿದ್ದ ಬಿಳಿ ಗಡ್ಡ, ಅವರು ಧರಿಸುತ್ತಿದ್ದ ಕಪ್ಪು ಬಣ್ಣದ ಕೋಟ್, ಹಾಟ್ ಸೀಟ್ನಲ್ಲಿ ಕುಳಿತಿರುತ್ತಿದ್ದ ಸ್ಪರ್ಧಿಗೆ ಪ್ರಶ್ನೆಯೊಂದನ್ನು ಕೇಳಿ ಕಾಲ ಮೇಲೆ ಕಾಲು ಹಾಕಿ ಗಂಭೀರವದನರಾಗಿ ಅವರು ಕುಳಿತುಕೊಳ್ಳುತ್ತಿದ್ದ ಶೈಲಿ... ಇವೆಲ್ಲ ಒಂದು ತಲೆಮಾರಿನವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುತ್ತವೆ. ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದ ವೈಶಿಷ್ಟ್ಯವೇ ಹಾಗಿತ್ತು.

‘ಕನ್ನಡದ ಕೋಟ್ಯಧಿಪತಿ’ ಹೆಸರಿನಲ್ಲಿ ಈ ಕಾರ್ಯಕ್ರಮ ಕನ್ನಡ ವೀಕ್ಷಕರ ಮುಂದೆ ಬಂದಿತ್ತು. ಇದರ ಮೊದಲ ಎರಡು ಸೀಸನ್ಗಳಲ್ಲಿ ನಿರೂಪಕರಾಗಿ ಕಾಣಿಸಿಕೊಂಡವರು ಪುನೀತ್ ರಾಜ್ಕುಮಾರ್. ಕಾರ್ಯಕ್ರಮದ ಮೂರನೆಯ ಸೀಸನ್ ಸೋಮವಾರದಿಂದ (ಜೂನ್ 25) ಮತ್ತೆ ಕನ್ನಡ ಕಿರುತೆರೆ ವೀಕ್ಷಕರ ಮುಂದೆ ಬರಲಿದೆ. ಇದರ ನಿರೂಪಣೆಯ ಹೊಣೆ ಹೊತ್ತವರು ನಟ ರಮೇಶ್ ಅರವಿಂದ್.

‘ಕನ್ನಡದ ಕೋಟ್ಯಧಿಪತಿ’ಯ ಚಿತ್ರೀಕರಣ ಬೆಂಗಳೂರಿನ ಹೊರವಲಯದಲ್ಲಿ ಇರುವ ‘ರಾಜ್ಲೈನ್ ಸ್ಟುಡಿಯೋ’ದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದ ಚಿತ್ರೀಕರಣವನ್ನು ನೇರವಾಗಿ ವೀಕ್ಷಿಸುವ ಉದ್ದೇಶದಿಂದ ‘ಚಂದನವನ’ ಪ್ರತಿನಿಧಿ ಅಲ್ಲಿಗೆ ತೆರಳಿದಾಗ, ರಮೇಶ್ ಅವರು ತಮ್ಮೆದುರಿನ ಹಾಟ್ಸೀಟ್ನಲ್ಲಿ ಸ್ಪರ್ಧಿಯೊಬ್ಬರನ್ನು ಕೂರಿಸಿಕೊಂಡು ಅವರತ್ತ ಒಂದು ಪ್ರಶ್ನೆ ಎಸೆದು, ಗಂಭೀರವದನರಾಗಿ ಕುಳಿತಿದ್ದರು. ಹತ್ತೆಂಟು ಕ್ಯಾಮೆರಾ ಕಣ್ಣುಗಳು, ಬಣ್ಣಬಣ್ಣದ ಬೆಳಕು ಚೆಲ್ಲುವ ಬಲ್ಬುಗಳು ಅವರಿಬ್ಬರ ಮೇಲೆ ಕಣ್ಣಿಟ್ಟಿದ್ದವು! ಟೇಕ್ಗಳು, ರೀಟೇಕ್ಗಳು ನಡೆಯುತ್ತಿದ್ದವು. ರಮೇಶ್ ಎಲ್ಲವನ್ನೂ ನಗುನಗುತ್ತಲೇ ನಿಭಾಯಿಸುತ್ತಿದ್ದರು. ಹಾಟ್ಸೀಟ್ ಮೇಲೆ ಕುಳಿತಿದ್ದವರನ್ನೂ ನಗಿಸುವ ಪ್ರಯತ್ನವನ್ನು ಆಗಾಗ ಮಾಡುತ್ತಿದ್ದರು.

ನಂಬರ್ 2 ಸ್ಥಾನದ ಗುರಿ:
ಈ ಕಾರ್ಯಕ್ರಮದ ಮೂರನೆಯ ಸೀಸನ್ ಆರಂಭಿಸುವುದರ ಹಿಂದೆ ‘ಸ್ಟಾರ್ ಸುವರ್ಣ’ ವಾಹಿನಿಗೆ ಒಂದು ಪ್ರಮುಖ ಉದ್ದೇಶ ಇದೆ. ‘ದೊಡ್ಡ ರಿಯಾಲಿಟಿ ಶೋ ಒಂದನ್ನು ಮಾಡಬೇಕು ಎಂಬ ಇರಾದೆ ನಮ್ಮಲ್ಲಿ ಇತ್ತು. ಭಾರತದಲ್ಲಿ ಇರುವುದು ಎರಡೇ ಎರಡು ದೊಡ್ಡ ರಿಯಾಲಿಟಿ ಶೋಗಳು – ಬಿಗ್ ಬಾಸ್ ಮತ್ತು ಕೋಟ್ಯಧಿಪತಿ. ಈ ಕಾರ್ಯಕ್ರಮವು ಮನರಂಜನೆ ವಿಭಾಗದಲ್ಲಿ ನಮ್ಮ ವಾಹಿನಿಯನ್ನು ಎರಡನೆಯ ಸ್ಥಾನಕ್ಕೆ ಕರೆದೊಯ್ಯುತ್ತದೆ ಎನ್ನುವ ನಿರೀಕ್ಷೆ ಇದೆ. ನಾವು ಈಗ ಮೂರನೆಯ ಸ್ಥಾನದಲ್ಲಿ ಇದ್ದೇವೆ. ಈ ಕಾರ್ಯಕ್ರಮ ಶುರುವಾದ ಎರಡು ಅಥವಾ ಮೂರನೆಯ ವಾರದಲ್ಲೇ ನಾವು ಎರಡನೆಯ ಸ್ಥಾನಕ್ಕೆ ಜಿಗಿಯುತ್ತೇವೆ ಎನ್ನುವ ನಿರೀಕ್ಷೆ ನಮ್ಮದು’ ಎಂದರು ವಾಹಿನಿಯ ಬ್ಯುಸಿನೆಸ್ ಹೆಡ್ ಸಾಯಿಪ್ರಸಾದ್.

ಈ ಬಾರಿಯ ಕೋಟ್ಯಧಿಪತಿ ಸೀಸನ್ ನಿರೂಪಣೆಯನ್ನು ಪುನೀತ್ ಅವರೇ ಮಾಡಲಿ ಎನ್ನುವ ಇರಾದೆಯೊಂದಿಗೆ ವಾಹಿನಿಯು ಅವರನ್ನು ಸಂಪರ್ಕಿಸಿತ್ತು. ಆದರೆ, ಕಾರಣಾಂತರಗಳಿಂದ ನಿರೂಪಕರಾಗಿ ಬರಲು ಪುನೀತ್ ಅವರಿಗೆ ಸಾಧ್ಯವಿರಲಿಲ್ಲ. ಹಾಗಾಗಿ, ರಮೇಶ್ ಅವರನ್ನು ನಿರೂಪಕರನ್ನಾಗಿ ನೇಮಿಸುವ ನಿರ್ಧಾರವನ್ನು ವಾಹಿನಿ ತೆಗೆದುಕೊಂಡಿತು. ‘ರಮೇಶ್ ಅವರಿಗೆ ಟಿ.ವಿ. ಮಾಧ್ಯಮದ ಜೊತೆ ಒಡನಾಟ ಇದೆ. ರಮೇಶ್ ಅವರು ಹೇಳಬೇಕಿರುವ ವಿಷಯಗಳನ್ನು ಖಚಿತವಾಗಿ ಹೇಳುತ್ತಾರೆ. ಅವರ ಹಿಂದಿನ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಬಹಳ ಜನಪ್ರಿಯ ಆಗಿತ್ತು. ಅವರು ಚೆನ್ನಾಗಿ ಮಾತನಾಡಬಲ್ಲರು ಕೂಡ. ಹಾಗಾಗಿ ಅವರನ್ನೇ ನಿರೂಪಕರನ್ನಾಗಿ ಆರಿಸಿದೆವು’ ಎಂದರು ಸಾಯಿಪ್ರಸಾದ್.

‘ಕನ್ನಡದ ವೀಕ್ಷಕರು ಯಾವಾಗಲೂ ಒಳ್ಳೆಯ ಮನರಂಜನೆಯನ್ನು ಇಷ್ಟಪಡುತ್ತಾರೆ. ಹಿಂದಿಯಲ್ಲಿ ನಡೆದ ಈ ಕಾರ್ಯಕ್ರಮದ ಕೊನೆಯ ಸೀಸನ್ ಬಹಳ ಜನರಿಗೆ ಇಷ್ಟವಾಗಿತ್ತು. ಹಾಗಾಗಿ ಕನ್ನಡದಲ್ಲಿ ಕೂಡ ಮೂರನೆಯ ಸೀಸನ್ ಶುರು ಮಾಡಿದೆವು. ಇದು 65 ಕಂತುಗಳ ಸೀಸನ್. ಈ ಸೀಸನ್ನಿಂದ ನಮ್ಮ ಆದಾಯ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂಬುದನ್ನು ಈಗಲೇ ಹೇಳಲಾಗದು’ ಎಂದು ಅವರು ಹೇಳಿದರು.

‘ಸ್ವಭಾವಕ್ಕೆ ಹೊಂದಿಕೆ ಆಗುತ್ತದೆ’:
‘ಕೋಟ್ಯಧಿಪತಿ ಕಾರ್ಯಕ್ರಮವು ನಮ್ಮ ಮೆದುಳಿಗೂ, ಹೃದಯಕ್ಕೂ ಏಕಕಾಲದಲ್ಲಿ ಕೆಲಸ ಕೊಡುತ್ತದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಾನು ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುತ್ತಿದ್ದೆ. ಈ ಕಾರ್ಯಕ್ರಮದಲ್ಲಿ ನಾನು ಜನಸಾಮಾನ್ಯರ ಜೊತೆ ಇರುತ್ತೇನೆ. ರಸಪ್ರಶ್ನೆ, ಅಕಾಡೆಮಿಕ್ಸ್ ಕ್ಷೇತ್ರದಲ್ಲಿ ನನಗೆ ಮೊದಲಿಂದಲೂ ಆಸಕ್ತಿ ಇರುವ ಕಾರಣ ಈ ಕಾರ್ಯಕ್ರಮ ನನ್ನ ಸ್ವಭಾವಕ್ಕೆ ಹೊಂದಿಕೆ ಆಗುತ್ತದೆ’ ಎಂದರು ರಮೇಶ್. ಅವರು ಆಗಷ್ಟೇ ‘ಕೋಟ್ಯಧಿಪತಿ’ ಕಾರ್ಯಕ್ರಮದ ಒಂದು ಹಂತದ ಚಿತ್ರೀಕರಣ ನಡೆಸಿ, ವೇದಿಕೆಯಿಂದ ಕೆಳಗೆ ಇಳಿದಿದ್ದರು.

‘ನಾನು ಜನರ ಜೊತೆ ಬೇಗ ಸಂಪರ್ಕ ಸಾಧಿಸುತ್ತೇನೆ. ಅವರನ್ನು ಬಹಳ ಬೇಗ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇನೆ. ನಾನು ನನ್ನ ಪಾಲಿನ ಕೆಲಸವನ್ನು ಆಸಕ್ತಿಯಿಂದ ಮಾಡುತ್ತೇನೆ. ಹಾಗಾಗಿ ನನಗೆ ಕೆಲಸ ಮಾಡಿ ಸುಸ್ತಾಗುವುದಿಲ್ಲ. ನಾನು ಗಮನಿಸಿರುವ ಪ್ರಕಾರ ಇದು ಬಹಳ ವಿಶ್ವಾಸಾರ್ಹ ಕಾರ್ಯಕ್ರಮ. ಆ ಕಾರಣಕ್ಕಾಗಿಯೇ ಇದು ಬಹಳ ವರ್ಷಗಳಿಂದಲೂ ಉಳಿದುಕೊಂಡು ಬಂದಿದೆ’ ಎಂದರು ರಮೇಶ್.

ಧಾರಾವಾಹಿಗಳನ್ನು ಹೆಂಗಸರು ಹೆಚ್ಚಾಗಿ ವೀಕ್ಷಿಸುತ್ತಾರೆ, ಪುರುಷರು ಸುದ್ದಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ನೋಡುತ್ತಾರೆ ಎಂದು ಕೆಲವು ಅಂಕಿ–ಅಂಶಗಳು ಹೇಳುತ್ತವೆ. ಆದರೆ, ‘ಕನ್ನಡದ ಕೋಟ್ಯಧಿಪತಿ’ಯಂತಹ ಕಾರ್ಯಕ್ರಮವನ್ನು ಇಡೀ ಕುಟುಂಬ ಒಟ್ಟಾಗಿ ವೀಕ್ಷಿಸುತ್ತದೆ. ಕುಟುಂಬದವರೆಲ್ಲಾ ಊಟ ಮಾಡುತ್ತ ವೀಕ್ಷಿಸಲಿ ಎಂಬ ಕಾರಣಕ್ಕೆ ನಾವು ಇದನ್ನು ರಾತ್ರಿ ಎಂಟು ಗಂಟೆಗೆ ಪ್ರಸಾರ ಮಾಡುತ್ತಿದ್ದೇವೆ.
ಸಾಯಿಪ್ರಸಾದ್
ಸ್ಟಾರ್ ಸುವರ್ಣ ವಾಹಿನಿಯ ಬ್ಯುಸಿನೆಸ್ ಹೆಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.