ಸೊಸೆಯಂದಿರೇ ಸೇರಿ ಮಾವನಿಗೆ ಹೆಣ್ಣು ಹುಡುಕುವ ಕಥೆ ‘ಹಿಟ್ಲರ್ ಕಲ್ಯಾಣ’. ಜೀ ಕನ್ನಡ ವಾಹಿನಿಯಲ್ಲಿ ಆಗಸ್ಟ್ 9ರಿಂದ ಈ ಹೊಸ ಧಾರಾವಾಹಿ ಪ್ರಸಾರ ಆರಂಭವಾಗಲಿದೆ.

‘ಹಿಟ್ಲರ್’ಗಂತೂ ಎಲ್ಲವೂ ಅಚ್ಚುಕಟ್ಟಾಗಿರಬೇಕು ಎಂಬ ನಿಯಮ. ಇಂಥ ವ್ಯಕ್ತಿಗೆ ಮೂವರು ಸೊಸೆಯಂದಿರು ಹೆಣ್ಣು ಹುಡುಕುತ್ತಾರೆ. ಹೆಂಡತಿಯಾಗಿ ಬಂದ ಹುಡುಗಿಯೋ ಮಹಾ ಎಡವಟ್ಟು. ಪರ್ಫೆಕ್ಟ್– ಎಡವಟ್ಟುಗಳ ಸಂಘರ್ಷವನ್ನು ನವಿರಾಗಿ ಕಚಗುಳಿ ಇಡುತ್ತಾ ತೋರಿಸುತ್ತಿದೆ ಈ ಕಥೆ ಎಂದಿದೆ ಧಾರಾವಾಹಿಯ ತಂಡ.

ಕಥೆಯ ಪ್ರಧಾನ ಪಾತ್ರಧಾರಿ ದಿಲೀಪ್‌ರಾಜ್ ಮಾತಿಗೆ ಸಿಕ್ಕರು. ಪಾತ್ರದ ಪರಕಾಯ ಪ್ರವೇಶವನ್ನು ತೆರೆದಿಟ್ಟರು.

‘ಪಾತ್ರದ ಆಲೋಚನೆಗಳು ತುಂಬಾ ದೊಡ್ಡದಿವೆ. ಹಾಗೇ ಆ ಬಗ್ಗೆ ಯೋಚಿಸುತ್ತಾ ‘ಹಿಟ್ಲರ್’ನ ಶಿಸ್ತನ್ನು ನಿಜ ಜೀವನದಲ್ಲೂ ಅಳವಡಿಸಿಕೊಳ್ಳುತ್ತೇವೆ. ಇಲ್ಲಿ ಹಾಗೇ ಆಗಿಬಿಟ್ಟಿತು. ಈ ಪಾತ್ರಸೃಷ್ಟಿಯ ವೇಳೆ ಸಾಕಷ್ಟು ಟ್ರಯಲ್ ಆ‍್ಯಂಡ್ ಎರರ್ ಆಗಿದೆ. ಪಾತ್ರ ಮಧ್ಯವಯಸ್ಕನದ್ದು. ಆದರೆ ಅವನು ಯುವಜನರಿಗೂ ಹೆಚ್ಚು ಹತ್ತಿರವಾಗಬೇಕು. ಅಂಥ ಸ್ಟೈಲಿಷ್ ಲುಕ್‌ಗೆ ಬೇಕಾದ ಹಾಗೆ ಈ ಪಾತ್ರವನ್ನು ರೂಪಿಸಿದ್ದೇವೆ’ ಎಂದರು.

‘ಇಲ್ಲಿ ಹಿಟ್ಲರ್ (ಎ–ಜೆ ಅಭಿರಾಮ್ ಜೈಶಂಕರ್) ಪಾತ್ರ ಸೃಷ್ಟಿಯೇ ತುಂಬಾ ಭಿನ್ನವಾದದ್ದು. ಅವನ ರೀತಿಯ ವರ್ತನೆ ಬೇರೆ ಧಾರಾವಾಹಿಗಳಲ್ಲಿ ಇಲ್ಲ. ತನಗಿಂತ ಚಿಕ್ಕವಯಸ್ಸಿನ ಹುಡುಗಿಯನ್ನು ಏಕೆ ಮದುವೆಯಾಗುತ್ತಾನೆ ಎಂಬುದಕ್ಕೆ ಸಮರ್ಥನೆಯೂ ಇದೆ’ ಎಂದರು ದಿಲೀಪ್.

ಕಥೆಯ ಮೇಲ್ನೋಟ: ಪ್ರೊಮೊ ತುಣುಕು ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದೆ. ಹಿಟ್ಲರ್‌ನ ಪಾತ್ರ ಪರಿಚಯ, ಸೊಸೆಯಂದಿರು ಮಾವನಿಗೆ ಹೆಣ್ಣು ಹುಡುಕಲು ಮಾಡುವ ಪ್ಲ್ಯಾನ್ ಇಲ್ಲಿ ತೋರಿಸಿದ್ದಾರೆ. ಎಡವಟ್ಟಿನ ಘಾಟಿ ಹುಡುಗಿ ಲೀಲಾ ಪಾತ್ರಧಾರಿಯ ಪಂಚಿಂಗ್ ಡೈಲಾಗ್ ಕೂಡಾ ಗಮನ ಸೆಳೆದಿದೆ.

ನಾಯಕಿ ಲೀಲಾ ಯಾವ ಕೆಲಸ ಮಾಡಿದರೂ ಅದಕ್ಕೆ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ. ಅಂಥಾ ಪರ್ಫೆಕ್ಟ್ ವ್ಯಕ್ತಿಗೆ ಈ ಎಡವಟ್ಟಿನ ಹುಡುಗಿ ಜೋಡಿಯಾಗುತ್ತಾಳಾ ಎನ್ನುವುದು ಕುತೂಹಲ.ಎ.ಜೆ.ಯ ಗಂಭೀರ ಸ್ವಭಾವಕ್ಕೆ ತದ್ವಿರುದ್ಧವಾದ ಹುಡುಗಿ ಲೀಲಾ. ಆಕೆ ತನ್ನ ಕಿರಿಯ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿರುತ್ತಾಳೆ. ತಂದೆಯ ಪ್ರೀತಿಯಲ್ಲಿ ಬೆಳೆದಿರುತ್ತಾಳೆ. ಆದರೆ ಆಕೆಯ ಮಲತಾಯಿಗೆ ಲೀಲಾ ಮೇಲೆ ಪ್ರೀತಿ ಇದ್ದರೂ ಏನೋ ಹೇಳಿಕೊಳ್ಳಲಾಗದ ಆತಂಕವಿದೆ. ಎಡವಟ್ಟು ಅನಿಶ್ಚಿತತೆಗಳಿಗೆ ತನ್ನನ್ನು ತಾನು ಒಗ್ಗಿಸಿಕೊಂಡು ‘ಪರಿಪೂರ್ಣ’ತೆಯ ಪರಿಕಲ್ಪನೆಯನ್ನೇ ಲೀಲಾ ಪ್ರಶ್ನಿಸುತ್ತಾಳಾ ಎನ್ನುವುದು ಹಿಟ್ಲರ್ ಕಲ್ಯಾಣ್ ಧಾರಾವಾಹಿಯ ಬೆಚ್ಚನೆಯ ಪ್ರೇಮಕಥೆ ಅನ್ನುವುದು ಝೀ ವಾಹಿನಿಯ ವಿವರಣೆ.

ಅಂದಹಾಗೆ ಈ ಧಾರಾವಾಹಿಯನ್ನು ದಿಲೀಪ್‌ರಾಜ್ ಅವರದೇ ನಿರ್ಮಾಣ ಸಂಸ್ಥೆ ನಿರ್ಮಿಸಿದೆ.

‘8 ವರ್ಷಗಳ ಬಳಿಕ ಕಿರುತೆರೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದೇನೆ. ನನ್ನ ತಂಡದವರು, ಸ್ನೇಹಿತರು ಮತ್ತು ಪತ್ನಿಯ ಒತ್ತಾಯ, ಬೆಂಬಲದಿಂದ ಈ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ’ ಎಂದರು ದಿಲೀಪ್.

ಜೀ ಕನ್ನಡ ಮತ್ತು ಜೀ ಕನ್ನಡ ಎಚ್.ಡಿ.ಯಲ್ಲಿ ಆಗಸ್ಟ್ 9ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ‘ಹಿಟ್ಲರ್ ಕಲ್ಯಾಣ’ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.