ಬೆಂಗಳೂರು: ಬಿಗ್‌ಬಾಸ್‌ನ ಆರನೇ ವಾರಂತ್ಯದ ‘ಕಿಚ್ಚನ ಪಂಚಾಯಿತಿ’ಯಲ್ಲಿ ಕಿಚ್ಚ ಸುದೀಪ್ ಅವರು ಪ್ರತಾಪ್ ಅವರಿಗೆ ಒಂದು ಸರ್ಪ್ರೈಸ್ ನೀಡಿದ್ದಾರೆ.

ಹೌದು, ಪ್ರತಾಪ್ ಅವರ ತಂದೆಯವರಿಗೆ ಕರೆ ಮಾಡುವ ಮೂಲಕ ಬಿಗ್‌ಬಾಸ್ ಸರ್ಪ್ರೈಸ್ ನೀಡಿದ್ದಾರೆ. ಪ್ರತಾಪ್ ಅವರು ಬಿಗ್‌ಬಾಸ್ ಮನೆಯಲ್ಲಿ ತಮ್ಮ ಕುಟುಂಬದವರ ಬಗ್ಗೆ ಮಾತನಾಡಿರುವುದು ಬಹಳ ಕಡಿಮೆಯೇ, ಅಲ್ಲದೆ, ಅವರು ತಮ್ಮ ಕುಟುಂಬದವರೊಂದಿಗೆ ಮೂರು ವರ್ಷಗಳಿಂದ ಮಾತನಾಡುವುದನ್ನು ಬಿಟ್ಟಿರುವುದಾಗಿ ಹೇಳಿಕೊಂಡಿದ್ದರು.

ಕಳೆದ ವಾರ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಇದಕ್ಕಾಗಿ ಬಿಗ್‌ಬಾಸ್ ಒಂದು ಟಾಸ್ಕ್ ಅನ್ನು ನೀಡಿದ್ದರು. ಇದರನ್ವಯ ಬಿಗ್‌ಬಾಸ್ ಮನೆಯ ಕುರಿತಾಗಿ ಪ್ರಶ್ನೆಗಳನ್ನು ಕೇಳಲಾಯಿತು. ಆದರೆ, ಟಾಸ್ಕ್‌ನಲ್ಲಿ ಪ್ರತಾಪ್ ವಿಫಲರಾದರು.

ಈಗ ವೀಕೆಂಡ್‌ನ ‘ಕಿಚ್ಚನ ಪಂಚಾಯಿತಿಯಲ್ಲಿ’ ಸುದೀಪ್ ಅವರು, ‘ನಿಮ್ಮ ಮನೆಯಿಂದ ಬರುತ್ತಿದ್ದ ಪತ್ರದಲ್ಲಿ ನೀವು ಏನು ನಿರೀಕ್ಷಿಸಿದ್ದೀರಿ? ಎಂದು ಪ್ರತಾಪ್ ಅವರನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸುವ ಮೊದಲೇ ಮನೆಯೊಳಗೆ ಪ್ರತಾಪ್ ಅವರ ತಂದೆಯ ಧ್ವನಿ ಕೇಳಿದೆ. ಫೋನ್‌ನಲ್ಲಿ ತಂದೆಯ ಧ್ವನಿಯನ್ನು ಕೇಳಿದ ಪ್ರತಾಪ್, ‘ಅಪ್ಪಾ ನನ್ನ ಕ್ಷಮಿಸಿಬಿಡಿ. ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೀನಿ’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು Jio Cinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.