ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ಕಲ್ಯಾಣ’ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ರಾಧಾ ಕಲ್ಯಾಣ ಧಾರಾವಾಹಿ ಕಲಾವಿದರಿಗೆ ದೊಡ್ಡ ಹೆಸರನ್ನು ತಂದುಕೊಂಡಿತ್ತು.
ಚಿತ್ರ: ಇನ್‌ಸ್ಟಾಗ್ರಾಂ
ADVERTISEMENT
ನಟಿ ಚೈತ್ರಾ ರೈ ಅವರು ರಾಧಾ ಕಲ್ಯಾಣದಲ್ಲಿ ವಿಶಾಖ ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. ಮಂಗಳೂರು ಮೂಲದ ನಟಿ ಕನ್ನಡದಲ್ಲಿ ಬೆರಳಿಣಿಕೆಯಷ್ಟು ಧಾರಾವಾಹಿಗಳನ್ನು ಮಾಡಿ ತಮ್ಮದೇ ಆದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ಚಿತ್ರ: ಇನ್‌ಸ್ಟಾಗ್ರಾಂ
ಅದರಲ್ಲೂ ನಟಿ ಹೆಚ್ಚಾಗಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಚೈತ್ರಾ ಅವರು ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಸದ್ಯ ನಟಿ ಹಾಗೂ ಅವರ ಕುಟುಂಬಸ್ಥರು ಸಂಭ್ರಮದಲ್ಲಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ಇತ್ತೀಚೆಗೆ ನಟಿ ಚೈತ್ರಾ ರೈ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇದೀಗ ನಟಿ ಚೈತ್ರಾ ರೈ ದಂಪತಿ ತಮ್ಮ ಮಗಳ ತೊಟ್ಟಿಲು ಶಾಸ್ತ್ರ ಹಾಗೂ ನಾಮಕರಣ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಜೊತೆಗೆ ಮಗಳ ಹೆಸರನ್ನು ಕಿವಿಯಲ್ಲಿ ಕೂಗಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ಇನ್ನು, ನಟಿ ಚೈತ್ರಾ ರೈ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಪುಟ್ಟ ಪಾದಗಳು, ದೊಡ್ಡವರಿಂದ ಪಡೆದ ಆಶೀರ್ವಾದ ಮತ್ತು ಪ್ರೀತಿಯಿಂದ ಆರಿಸಲ್ಪಟ್ಟ ಹೆಸರು ಇದು’ ಎಂದು ಬರೆದುಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ನಟಿ ಚೈತ್ರಾ ರೈ ದಂಪತಿ ತಮ್ಮ ಮುದ್ದಾದ ಮಗಳಿಗೆ ‘ಪ್ರಿಷ್ಕಾ’ ಎಂದು ಹೆಸರನ್ನು ಇಟ್ಟು ನಾಮಕರಣ ಮಾಡಿದ್ದಾರೆ. ಪ್ರಿಷ್ಕಾ ಎಂದರೆ, ದೇವರ ಅಮೂಲ್ಯ ಕೊಡುಗೆ, ದೈವಿಕ ಮತ್ತು ಶುದ್ಧ ಆತ್ಮ, ಪ್ರಿಯ, ಆಳವಾಗಿ ಪ್ರೀತಿಸಲ್ಪಡುವವನು ಎಂಬುವುದನ್ನು ಸೂಚಿಸುತ್ತದೆ.