ಕನ್ನಡ ಬಿಗ್ಬಾಸ್ನ 12ನೇ ಆವೃತ್ತಿಯ ಕಳೆದ ಭಾನುವಾರದ ಸಂಚಿಕೆಯಲ್ಲಿ ಕಿಚ್ಚನ ಚಪ್ಪಾಳೆ ಯಾರಿಗೂ ಸಿಕ್ಕಿಲ್ಲ. ಈ ನಡುವೆ ಸುದೀಪ್ ಅವರು, ಸ್ಪರ್ಧಿ ಗಿಲ್ಲಿ ನಟನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಕನ್ನಡ ಬಿಗ್ಬಾಸ್ನ 12ನೇ ಆವೃತ್ತಿಯ ಕಳೆದ ಭಾನುವಾರದ ಸಂಚಿಕೆಯಲ್ಲಿ ಕಿಚ್ಚನ ಚಪ್ಪಾಳೆ ಯಾರಿಗೂ ಸಿಕ್ಕಿಲ್ಲ. ‘ಈ ವಾರ ನನಗೆ ಯಾರ ಆಟವೂ ಅಷ್ಟೆನು ಇಷ್ಟ ಆಗಿಲ್ಲ. ಕಿಚ್ಚನ ಚಪ್ಪಾಳೆ ಕೊಡ್ಬೇಕು ಅಂತಲೂ ಅನಿಸಲಿಲ್ಲ. ಆ ಕಾರಣಕ್ಕೆ ಈ ವಾರ ಯಾರಿಗೂ ನನ್ನ ಚಪ್ಪಾಳೆ ಕೊಡ್ತಾ ಇಲ್ಲ’ ಎಂದು ಸುದೀಪ್ ಹೇಳಿದ್ದರು.
.ಏಕಾಏಕಿ ರಘು ವಿರುದ್ಧ ತಿರುಗಿಬಿದ್ದ ರಾಶಿಕಾ: ಅಸಲಿಗೆ ಇಬ್ಬರ ಮಧ್ಯೆ ಆಗಿದ್ದೇನು?.Bigg Boss 12: ಬಿ.ಬಿ ಕಾಲೇಜ್ ಆಗಿ ಬದಲಾದ ಬಿಗ್ಬಾಸ್ ಮನೆ.
ಪ್ರತಿ ಸೀಸನ್ನಂತೆ ಈ ಬಾರಿಯೂ ಕೂಡ ಸುದೀಪ್ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗೆ ಚಪ್ಪಾಳೆ ನೀಡಿದ್ದಾರೆ. ಈಗಾಗಲೇ ನಾಲ್ಕು ವಾರಗಳನ್ನು ಪೂರೈಸಿದ ಬಿಗ್ಬಾಸ್ ಸ್ಪರ್ಧಿಗಳಲ್ಲಿ ಒಬ್ಬರಿಗೆ ಮಾತ್ರ ಚಪ್ಪಾಳೆ ಸಿಕ್ಕಿದೆ. ತಪ್ಪು ನಡೆಯುತ್ತಿದ್ದಾಗ ಧ್ವನಿ ಎತ್ತಿದ್ದಕ್ಕಾಗಿ ಗಿಲ್ಲಿಗೆ ಕಳೆದ ಸಂಚಿಕೆಯಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ಹೀಗಾಗಿ ಸುದೀಪ್ ಅವರು ಗಿಲ್ಲಿಗೆ ವಿಶೇಷ ಗಿಫ್ಟ್ ಅನ್ನು ಕೊಟ್ಟಿದ್ದಾರೆ.

ಇನ್ನು ಮುಂದೆ ಸುದೀಪ್ ಅವರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಪ್ರತಿ ಸ್ಪರ್ಧಿಗೆ ಒಂದು ವಿಶೇಷ ಗಿಫ್ಟ್ ಬರಲಿದೆ. ಈ ಬಗ್ಗೆ ಖುದ್ದು ಸುದೀಪ್ ಅವರೇ ಹೇಳಿದ್ದರು. ಅದರಂತೆ ಕಳೆದ ಸಂಚಿಕೆಯಲ್ಲಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಗಿಲ್ಲಿಗೆ ಒಂದು ವಿಶೇಷ ಗಿಫ್ಟ್ ಸಿಕ್ಕಿದೆ.

ಆ ಪೆಟ್ಟಿಗೆಯಲ್ಲಿ ಏನಿದೆ?

ಗಿಲ್ಲಿಗೆ ಸೇರಿದ ಆ ಪೆಟ್ಟಿಗೆಯಲ್ಲಿ ಕಿಚ್ಚ ಸುದೀಪ್ ಹೆಸರಿನ ಕಪ್ಪು ಬಣ್ಣದ ಟೀ–ಶರ್ಟ್ ಇದೆ. ಕಾಫಿ ಕುಡಿಯಲು ಒಂದು ಗ್ಲಾಸ್ ಇದ್ದು, ಜೊತೆಗೆ ಬಿಸ್ಕೆಟ್ಸ್ ತುಂಬಿರೋ ಗಾಜಿನ ಜಾರ್ ಕೂಡ ಇದೆ. ಈ ಪೆಟ್ಟಿಗೆಯನ್ನು ನೋಡುತ್ತಿದ್ದಂತೆ ಮನೆಮಂದಿ ಅಚ್ಚರಿಗೊಂಡಿದ್ದಾರೆ. ನಮಗೆ ಸಿಗಲಿಲ್ಲ ಅಂತ ಬೇಸರದಲ್ಲಿ ಕೆಲವು ಸ್ಪರ್ಧಿಗಳು ಕುಳಿತುಕೊಂಡಿರುವುದು ಸಂಚಿಕೆಯಲ್ಲಿ ಕಾಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.