ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬಿಗ್‌ಬಾಸ್‌ ಮನೆ ಪ್ರವೇಶಿಸಲಿದ್ದಾರೆ 18 ಸ್ಪರ್ಧಿಗಳು: ಇಲ್ಲಿದೆ ವಿವರ

ಬಿಗ್‌ಬಾಸ್‌ 9ನೇ ಆವೃತ್ತಿ ಇಂದು ಸಂಜೆ ಆರಂಭ
Last Updated 24 ಸೆಪ್ಟೆಂಬರ್ 2022, 1:54 IST
ಅಕ್ಷರ ಗಾತ್ರ

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ‘ಬಿಗ್‌ಬಾಸ್‌’ 9ನೇ ಆವೃತ್ತಿಯು ಸೆ.24ರ ಸಂಜೆ 6ರಿಂದ ಆರಂಭವಾಗಲಿದೆ. ಬಿಗ್‌ಬಾಸ್‌ ಇತಿಹಾಸದಲ್ಲೇ ಈ ಆವೃತ್ತಿಯು ಸುದೀರ್ಘವಾಗಿರಲಿದ್ದು, ಒಟ್ಟು 18 ಸ್ಪರ್ಧಿಗಳ ನಡುವೆ ಬಿಗ್‌ಬಾಸ್‌ ಪಟ್ಟಕ್ಕೆ ಹಣಾಹಣಿ ಇರಲಿದೆ ಎಂದು ಕಲರ್ಸ್‌ ಕನ್ನಡ ತಿಳಿಸಿದೆ.

ಬಿಗ್‌ಬಾಸ್‌ ಒಟಿಟಿ ಆವೃತ್ತಿ ಮುಗಿದ ಬೆನ್ನಲ್ಲೇ, 9ನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಶನಿವಾರ ಹಾಗೂ ಭಾನುವಾರ(ಸೆ.24–25ರಂದು) ನಟ ಕಿಚ್ಚ ಸುದೀಪ್ ಒಟ್ಟು ಹದಿನೆಂಟು ಜನರನ್ನು ಬಿಗ್‌ಬಾಸ್ ಮನೆಯೊಳಕ್ಕೆ ಕಳುಹಿಸಿಕೊಡಲಿದ್ದಾರೆ. ನೂರು ದಿನ ಈ ಬಿಗ್‌ಬಾಸ್ ಆಟ ನಡೆಯಲಿದ್ದು, ಕಲರ್ಸ್‌ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಇದು ಪ್ರಸಾರವಾಗಲಿದೆ. 9ನೇ ಆವೃತ್ತಿ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆಗೆ 9 ಅನುಭವಿ ಸ್ಪರ್ಧಿಗಳು ಕಣದಲ್ಲಿರುತ್ತಾರೆ. ಹೀಗಾಗಿ ಈ ಆವೃತ್ತಿಯನ್ನು ‘ಪ್ರವೀಣರು ಮತ್ತು ನವೀನರ ಹಣಾಹಣಿ’ ಎಂದು ಚಾನೆಲ್ ಬಣ್ಣಿಸಿದೆ.

9 ಅನುಭವಿ ಸ್ಪರ್ಧಿಗಳ ಪಟ್ಟಿಯಲ್ಲಿ ಒಟಿಟಿ ಆವೃತ್ತಿಯಲ್ಲಿ ಟಾಪ್ ಫೋರ್‌ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್‌ ಹಾಗೂ ಸಾನ್ಯಾ ಅಯ್ಯರ್ ಇರುತ್ತಾರೆ. ಇವರ ಜೊತೆಗೆ ಹಿಂದಿನ ಬಿಗ್‌ಬಾಸ್ ಆವೃತ್ತಿಯಲ್ಲಿ ಆಡಿ ಜನಮೆಚ್ಚುಗೆ ಗಳಿಸಿದ ಐದು ಸ್ಪರ್ಧಿಗಳು ಇರಲಿದ್ದಾರೆ. ಈಪೈಕಿಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌ ಹಾಗೂ ಅನುಪಮಾ ಗೌಡಮನೆಪ್ರವೇಶಿಸುವುದುಖಚಿತವಾಗಿದ್ದು,ಇನ್ನುಳಿದವರುಯಾರುಎನ್ನುವಕುತೂಹಲವನ್ನುಚಾನೆಲ್‌ಉಳಿಸಿದೆ.

ಇವರ ಜೊತೆಗೆ ಮನೆ ಪ್ರವೇಶಿಸಲಿರುವ 9 ಜನ ಹೊಸ ಸ್ಪರ್ಧಿಗಳು ಯಾರು ಎಂಬುವುದು ಶನಿವಾರದ ಸಂಚಿಕೆಯಲ್ಲೇ ತಿಳಿಯಲಿದೆ. ‘ಬಿಗ್‌ಬಾಸ್ ಎನ್ನುವುದು ಮನಸ್ಸಿನ ಆಟ. ಮುಗ್ಧತೆ ಮತ್ತು ಅನುಭವ ಎರಡರ ಮುಖಾಮುಖಿ ಮನುಷ್ಯನೊಳಗಿನ ಇನ್ನಷ್ಟು ಮುಖಗಳನ್ನು ಹೊರತರಲಿದ್ದು, ಆಟಕ್ಕೆ ಹೊಸ ರಂಗು ಬರಲಿದೆ’ ಎಂದು ಬಿಗ್‌ಬಾಸ್‌ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT