ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು 'ಅಥರ್ವ'ನಾಗಿ ಪ್ರತ್ಯಕ್ಷರಾಗಿದ್ದಾರೆ. ಸೈನ್ಸ್-ಫಿಕ್ಷನ್ ಗ್ರಾಫಿಕ್ ನೋವೆಲ್ 'ಅಥರ್ವ: ದಿ ಒರಿಜಿನ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ವೆಬ್ ಸರಣಿ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿರುವ ಎಂಎಸ್ ಧೋನಿ ದುಷ್ಟಶಕ್ತಿಯ ವಿರುದ್ಧ ಹೋರಾಡುವ ಶಿಷ್ಟಪಾಲಕನ ಅವತಾರದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ 'ಅಥರ್ವ' ಚಿತ್ರದ ಟೀಸರ್ ಅನ್ನು ಹಂಚಿಕೊಂಡಿದ್ದು, 'ನನ್ನ ಹೊಸ ಅವತಾರವನ್ನು ಅನಾವರಣಗೊಳಿಸಲು ಖುಷಿಯಾಗುತ್ತಿದೆ...' ಎಂದಿದ್ದಾರೆ.

ಲೇಖಕ ರಮೇಶ್ ತಮಿಳ್ಮಣಿ ಅವರ 'ಅಥರ್ವ' ಹೆಸರಿನ ಪ್ರಕಟಗೊಂಡಿರದ ಕೃತಿ ಆಧಾರಿತ ವೆಬ್ ಸರಣಿ ಇದಾಗಿದೆ. 'ಧೋನಿ ಎಂಟರ್ಟೈನ್ಮೆಂಟ್' ಮೂಲಕ ವೆಬ್ ಸರಣಿ ನಿರ್ಮಾಣಗೊಳ್ಳುತ್ತಿದೆ.

ಫೆಬ್ರುವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಪರ ಹಾಜರಾಗಲಿದ್ದಾರೆ. ಎಂಎಸ್ ಧೋನಿ ಸೇರಿದಂತೆ ನಾಲ್ವರನ್ನು ಸಿಎಸ್ಕೆ ತಂಡದಲ್ಲಿ ಉಳಿಸಿಕೊಂಡಿದೆ. ರವೀಂದ್ರ ಜಡೇಜಾ ಅವರನ್ನು ₹ 16 ಕೋಟಿಗೆ, ಧೋನಿ ಅವರನ್ನು ₹ 12 ಕೋಟಿಗೆ, ಮೊಯೀನ್ ಅಲಿ ಅವರನ್ನು ₹ 8 ಕೋಟಿಗೆ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ₹ 6 ಕೋಟಿಗೆ ಸಿಎಸ್ಕೆ ಉಳಿಸಿಕೊಂಡಿದೆ.

ಫೆ 12ರಿಂದ ಐಪಿಎಲ್ ಮೆಗಾ ಹರಾಜು: ಶಿಖರ್, ಶ್ರೇಯಸ್ಗೆ ಗರಿಷ್ಠ ಮೂಲಬೆಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.