ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕನ್ನಡದಲ್ಲಿ ನ್ಯಾಷನಲ್ ಜಿಯೊಗ್ರಾಫಿಕ್ ವಾಹಿನಿ

Last Updated 31 ಜನವರಿ 2021, 0:59 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್‌ ಜಿಯೊಗ್ರಾಫಿಕ್ ವಾಹಿನಿಯು ಕನ್ನಡದಲ್ಲಿ ಪ್ರಸಾರ ಆರಂಭಿಸುತ್ತಿದೆ. ಇಂದಿನಿಂದ (ಜನವರಿ 31) ಕನ್ನಡದ ನ್ಯಾಷನಲ್ ಜಿಯೊಗ್ರಾಫಿಕ್ ವಾಹಿನಿಯ ಪ್ರಸಾರ ಶುರು ಮಾಡಲಿದೆ. ಈ ವಾಹಿನಿಯು ಭಾರತದಲ್ಲಿ ಈಗ ಇಂಗ್ಲಿಷ್‌ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಪ್ರಸಾರ ಆಗುತ್ತಿದೆ.

‘ಪ್ರೈಮಲ್ ಸರ್ವೈವರ್, ಗ್ರೇಟ್ ಹ್ಯೂಮನ್‌ ರೇಸ್‌ನಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಇನ್ನು ಕನ್ನಡದಲ್ಲೇ ವೀಕ್ಷಿಸಬಹುದು’ ಎಂದು ಕಂಪನಿ ಹೇಳಿದೆ. ‘ಈಚಿನ ವರ್ಷಗಳಲ್ಲಿ ನಮ್ಮ ಕಾರ್ಯಕ್ರಮಗಳಿಗೆ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ. ಕರ್ನಾಟಕದಲ್ಲೂ ಇದು ಆಗಿದೆ. ಇದನ್ನು ನಾವು ನಮ್ಮ ಕಾರ್ಯಕ್ರಮಗಳನ್ನು ಕನ್ನಡದಲ್ಲಿಯೂ ಪ್ರಸಾರ ಮಾಡುವ ಅವಕಾಶವಾಗಿ ಕಂಡೆವು’ ಎಂದು ಸ್ಟಾರ್‌ ಆ್ಯಂಡ್‌ ಡಿಸ್ನಿ ಇಂಡಿಯಾದ ಮಾಹಿತಿ–ಮನರಂಜನೆ ವಿಭಾಗದ ಮುಖ್ಯಸ್ಥ ಕೆವಿನ್ ವಾಜ್ ಹೇಳಿದ್ದಾರೆ.

ನ್ಯಾಷನಲ್ ಜಿಯಾಗ್ರಫಿಕ್ ವಾಹಿನಿಯು ಜಾಗತಿಕ ಮಟ್ಟದಲ್ಲಿ 172 ದೇಶದಲ್ಲಿ ಒಟ್ಟು 43 ಭಾಷೆಗಳಲ್ಲಿ ಪ್ರಸಾರ ಆಗುತ್ತಿದೆ.

‘ಹಿಂದಿಯೇತರ ಪ್ರದೇಶಗಳ ಜನ ನಮ್ಮ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಈಚಿನ ವರ್ಷಗಳಲ್ಲಿ ವೀಕ್ಷಿಸುತ್ತಿದ್ದಾರೆ. ನಮ್ಮ ವೀಕ್ಷಕರು ತಮ್ಮ ಮಾತೃಭಾಷೆಯಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಯಸುತ್ತಾರೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಕರ್ನಾಟಕದಲ್ಲಿ ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ವೀಕ್ಷಕರು ಸಿಗುತ್ತಿರುವುದು ನಾವು ಕನ್ನಡದಲ್ಲಿ ವಾಹಿನಿ ಆರಂಭಿಸಲು ಪ್ರೇರಣೆ ನೀಡಿತು’ ಎಂದು ಕೆವಿನ್ ವಾಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ನಮ್ಮ ಇಂಗ್ಲಿಷ್‌ ಕಾರ್ಯಕ್ರಮಗಳನ್ನು ಸ್ಥಳೀಯ ಭಾಷೆಗಳಿಗೆ ಯಾಂತ್ರಿಕವಾಗಿ ಡಬ್ ಮಾಡುವುದಿಲ್ಲ. ಸ್ಥಳೀಯ ಭಾಷೆಗಳಲ್ಲಿ ಇರುವ ನಾಣ್ನುಡಿಗಳನ್ನು ಬಳಸಿಕೊಂಡು, ಸ್ಥಳೀಯರಿಗೆ ಹತ್ತಿರವಾಗುವಂತೆ ಮಾಡುತ್ತೇವೆ’ ಎಂದು ವಾಜ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT