ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮ ದಾಳಿ ಬಗ್ಗೆ ಹೇಳಿಕೆಗೆ ಆಕ್ರೋಶ: ಕಪಿಲ್ ಶರ್ಮಾ ಶೋದಿಂದ ಸಿಧು ಔಟ್

Last Updated 16 ಫೆಬ್ರುವರಿ 2019, 11:31 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದಿರುವ ನವಜೋತ್ ಸಿಂಗ್ಸಿಧು ಅವರನ್ನು ದಿ ಕಪಿಲ್ ಶರ್ಮಾ ಶೋದಿಂದ ಹೊರಗೆಹಾಕಬೇಕೆಂದು ಒತ್ತಾಯಿಸಿ ನೆಟಿಜನ್‍ಗಳು ನಡೆಸಿದ ಆನ್‍ಲೈನ್ ಅಭಿಯಾನಕ್ಕೆ ಸ್ಪಂದಿಸಿದ ಸೋನಿ ಟೀವಿ ಸಿಧು ಅವರನ್ನು ಪ್ರಸ್ತುತ ಶೋನಿಂದ ತೆಗೆದು ಹಾಕಿದೆ.

ಪುಲ್ವಾಮದಾಳಿ ಬಗ್ಗೆ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧುಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಟ್ವಿಟರ್‌ನಲ್ಲಿ #boycottsidhu ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು.

ಸಿಧು ಹೇಳಿದ್ದೇನು?
ಪುಲ್ವಾಮಾ ದಾಳಿಗೆ ಪಾಕಿಸ್ತಾನದ ಮೇಲೆ ಆರೋಪ ಮಾಡುವುದು ಸರಿಯಲ್ಲ. ದಾಳಿ ನಡೆದದ್ದು ಖಂಡನಾರ್ಹ, ಆದರೆ ಕೆಲವೇ ಜನರು ಮಾಡಿದ ಕೆಲಸಕ್ಕೆ ಒಂದು ರಾಷ್ಟ್ರದ ಮೇಲೆ ಆರೋಪಿಸುವುದು ಸರಿಯಯಲ್ಲ.ಭಯೋತ್ಪಾದನೆಗೆ ವಿಭಾಗ, ಧರ್ಮ ಇಲ್ಲ. ಅಲ್ಲಿ ಒಳ್ಳೆಯವರು, ಕೆಟ್ಟವರು ಎಲ್ಲರೂ ಇರುತ್ತಾರೆ. ಎಲ್ಲ ದೇಶದಲ್ಲಿಯೂ ಇಂಥವರು ಇರುತ್ತಾರೆ. ಕೆಟ್ಟವರಿಗೆ ಶಿಕ್ಷೆಯಾಗಬೇಕು. ಈ ಹೀನ ಕೃತ್ಯಕ್ಕೆ ವ್ಯಕ್ತಿಗಳನ್ನು ಮಾತ್ರ ಟೀಕಿಸುವುದು ಸರಿಯಲ್ಲ ಎಂದು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದರು.

ಸಿಧು ಹೇಳಿಕೆಗೆ ಜನರಿಂದ ಆಕ್ರೋಶ ವ್ಯಕ್ತವಾಗಿದ್ದರಿಂದ ದಿ ಕಪಿಲ್ ಶರ್ಮಾ ಶೋ ಕಾರ್ಯಕ್ರಮ ಮತ್ತು ಇದನ್ನು ಪ್ರಸಾರ ಮಾಡುತ್ತಿರುವ ಸೋನಿ ಟೀವಿ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲ.ಹಾಗಾಗಿ ತಮ್ಮ ಶೋ ನಿಂದ ಸಿಧು ಅವರನ್ನು ದೂರವಿಡಲು ವಾಹಿನಿ ತೀರ್ಮಾನಿಸಿದೆ.ಸಿಧು ಬದಲು ದಿ ಕಪಿಲ್ ಶರ್ಮಾ ಶೋ ನಲ್ಲಿ ಅರ್ಚನಾ ಪೂರಣ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅರ್ಚನಾ ಅವರದ್ದು ಎರಡು ಎಪಿಸೋಡ್‍ಗಳನ್ನು ಶೂಟ್ ಮಾಡಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

#SackSidhuFromPunjabCabinet
ಕಪಿಲ್ ಶರ್ಮಾ ಅವರ ಶೋನಿಂದ ಸಿಧು ಅವರನ್ನು ತೆಗೆದು ಹಾಕಿದ್ದಾಯ್ತು. ಇದೀಗ ಪಂಜಾಬ್ ಸಚಿವ ಸಂಪುಟದಿಂದಲೂ ಸಿಧು ಅವರನ್ನು ಹೊರಹಾಕಬೇಕು ಎಂದು ಒತ್ತಾಯಿಸಿ ಟ್ವಿಟರ್‌ನಲ್ಲಿ ಅಭಿಯಾನ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT