ಬುಧವಾರ, ಜೂಲೈ 8, 2020
28 °C

ಅನುಷ್ಕಾ ಶರ್ಮಾ ನಿರ್ಮಾಣದ ‘ಪಾತಾಳ್‌ ಲೋಕ್‌' ವಿರುದ್ಧ ನೆಟ್ಟಿಗರ ಆಕ್ರೋಶ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ನಿರ್ಮಾಣದ ‘ಪಾತಾಳ್‌ ಲೋಕ್‌' ವೆಬ್‌ ಸಿರೀಸ್‌ ವಿವಾದಕ್ಕೆ ಕಾರಣವಾಗಿದ್ದು ನೆಟ್ಟಿಗರು
#BoycottPaatalLok ಎಂದು ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಮೇ 15ರಂದು ಅಮೆಜಾನ್‌‌ ಪ್ರೈಮ್‌ನಲ್ಲಿ  ‘ಪಾತಾಳ್‌ ಲೋಕ್‌' ವೆಬ್‌ ಸಿರೀಸ್‌ ಬಿಡುಗಡೆಯಾಗಿದೆ. ಇದರಲ್ಲಿ ಹಿಂದೂಗಳ ಧಾರ್ಮಿಕ
ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳಿವೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ರೈಂ ಥ್ರಿಲ್ಲರ್ ಕಥಾ ಹಂದರ ಇರುವ 'ಪಾತಾಳ್‌ ಲೋಕ್‌‘ ವೆಬ್‌ ಸಿರೀಸ್‌ನಲ್ಲಿ ಹಿಂದೂ ಪೊಲೀಸ್‌ ಅಧಿಕಾರಿಗಳನ್ನು ನೆಗೆಟಿವ್‌ ನೆರಳಲ್ಲಿ ತೋರಿಸಲಾಗಿದೆ. ಆದರೆ ಮುಸ್ಲಿಂ ಪೊಲೀಸ್ ಅಧಿಕಾರಿಯನ್ನು ಪ್ರಾಮಾಣಿಕನಂತೆ ಬಿಂಬಿಸಲಾಗಿದೆ ಎಂಬುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಇದರಲ್ಲಿ ಕೋಮು ಭಾವನೆ ಕೆರಳಿಸುವಂತಹ ದೃಶ್ಯಗಳು, ಅಶ್ಲೀಲ ಪದಗಳ ಬಳಕೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ವಿಕೃತವಾಗಿ ರಾರಾಜಿಸುತ್ತಿದ್ದು ಇದಕ್ಕೆ ಸೆನ್ಸಾರ್ ಅಗತ್ಯವಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕಾಗಿ ಟ್ವಿಟ್ಟರ್‌ನಲ್ಲಿ #BoycottPaatalLok ಎಂಬ ಅಭಿಯಾನವನ್ನು ಆರಂಭಿಸಲಾಗಿದೆ. ನಿರ್ಮಾಪಕಿ ಅನುಷ್ಕಾ ಶರ್ಮಾ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು