ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಟಾರ್‌ ಸುವರ್ಣದಲ್ಲಿ ‘ರಂಗಿನ ಹಬ್ಬ’

Last Updated 18 ಮಾರ್ಚ್ 2022, 13:48 IST
ಅಕ್ಷರ ಗಾತ್ರ

ರಂಗಿನ ಹಬ್ಬಕ್ಕೆ ಸಜ್ಜಾಗಿದೆ ಸ್ಟಾರ್ ಸುವರ್ಣ ವಾಹಿನಿಯ ವೇದಿಕೆ. ಈಕಾರ್ಯಕ್ರಮದಲ್ಲಿ ವಾಹಿನಿಯ ಧಾರಾವಾಹಿ ಕಲಾವಿದರು, ಹಲವು ಆಟಗಳ ಮೂಲಕ ಹಬ್ಬದ ಉತ್ಸಾಹ ಹೆಚ್ಚಿಸಿದ್ದಾರೆ.

ಕಿರುತೆರೆಯ ಕಲಾವಿದರ ಜೊತೆ ಬಣ್ಣದೋಕುಳಿ ಆಡಲಿದ್ದಾರೆ ನಟಿಯರಾದ ಶುಭಾ ಪೂಂಜ ಮತ್ತು ರಾಗಿಣಿ ದ್ವಿವೇದಿ. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ಗುರುಕಿರಣ್ ಅವರು ಸಿನಿಮಾ ಪಯಣದ 25 ವರ್ಷಗಳ ಸಂಭ್ರಮಾಚರಣೆ ನಡೆದಿದೆ. ಶುಭಾ ಪೂಂಜ ಅವರು ತಮ್ಮ ಪತಿ ಸುಮಂತ್ ಜೊತೆಯಲ್ಲಿ ಮೊದಲ ಹೋಳಿ ಹಬ್ಬ ಆಚರಿಸಿದ್ದಾರೆ. ನಟಿ ರಾಗಿಣಿ ಮತ್ತು ಡ್ಯಾನ್ಸ್ ಮಾಸ್ಟರ್ ಮುರುಗ ಜೊತೆಯಾಗಿ ಹೆಜ್ಜೆ ಹಾಕಿದ್ದು, ರಂಗಿನ ಹಬ್ಬಕ್ಕೆ ವಿಶೇಷ ರಂಗು ತುಂಬಿದ್ದಾರೆ. ನಿರಂಜನ್ ದೇಶಪಾಂಡೆ ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ.

ರಂಗಿನ ಹಬ್ಬ ಕಾರ್ಯಕ್ರಮ ಮಾರ್ಚ್ 20ರಂದು ಸಂಜೆ 6ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT