ಗುರುವಾರ , ಡಿಸೆಂಬರ್ 2, 2021
20 °C

ಬಿಗ್ ಬಾಸ್: ಅಶ್ಲೀಲ ಪದ ಬಳಸಿ ಹೊಡೆದಾಡಿಕೊಂಡ ಶಮಿತಾ ಶೆಟ್ಟಿ-ಅಫ್ಸಾನಾ ಖಾನ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್ ಸೀಸನ್ 15 ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ.

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನಟಿ ಶಮಿತಾ ಶೆಟ್ಟಿ ಮತ್ತು ಅಫ್ಸಾನಾ ಖಾನ್ ಅವರ ನಡುವಣ ವಾಕ್ಸಮರ ಮತ್ತು ಪರಸ್ಪರ ಕೈ ಮಿಲಾಯಿಸಲು ಮುಂದಾದ ಘಟನೆ ನಡೆದಿದೆ.

ಟಾಸ್ಕ್ ಒಂದರಲ್ಲಿ ಭಾಗವಹಿಸುವ ಸಂದರ್ಭ ಅಫ್ಸಾನಾ ಖಾನ್ ಅವರು ಆಕಾಶಾ ಸಿಂಗ್ ಅವರ ಬಟ್ಟೆ ಎಳೆದಾಡಿದ್ದಾರೆ. ಬಟ್ಟೆ ಹರಿಯಬೇಡಿ ಎಂದು ಆಕಾಶಾ ಕೇಳಿಕೊಂಡಿದ್ದಾರೆ.

ಈ ಸಂದರ್ಭ ಮಾತಿಗೆ ಮಾತು ಬೆಳೆದಿದ್ದು, ಮಧ್ಯ ಪ್ರವೇಶಿಸಿದ ಶಮಿತಾ ಶೆಟ್ಟಿ, ಅಫ‌್ಸಾನಾ ಯಾವತ್ತೂ ತನ್ನ ತಪ್ಪು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಇದು ಅಫ್ಸಾನ ಮತ್ತು ಶಮಿತಾ ಮಧ್ಯೆ ಜಗಳಕ್ಕೆ ಕಾರಣವಾಗಿದ್ದು, ನನ್ನನ್ನು ಕೇಳಲು ನೀನು ಯಾರು? ನೀನೊಬ್ಬಳು ಕೆಟ್ಟ ಹೆಂಗಸು ಎಂದು ಶಮಿತಾರನ್ನು ಅಫ್ಸಾನಾ ನಿಂದಿಸಿದ್ದಾರೆ.

ಆ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯ ಉಳಿದ ಸ್ಪರ್ಧಿಗಳು ಇಬ್ಬರನ್ನೂ ಸಮಾಧಾನಿಸಲು ಮುಂದಾಗಿದ್ದಾರೆ. ಅದನ್ನು ಕೇಳದ ಶಮಿತಾ ಮತ್ತು ಅಫ್ಸಾನಾ ಪರಸ್ಪರ ಹೊಡೆದಾಡಿಕೊಳ್ಳಲು ಸಿದ್ಧರಾಗಿದ್ದಾರೆ.

ಜತೆಗೆ ಅಫ್ಸಾನಾ ತಾಳ್ಮೆ ಕಳೆದುಕೊಂಡು ಮನೆಯಲ್ಲಿನ ಕೆಲವೊಂದು ವಸ್ತುಗಳನ್ನು ಒಡೆದು ಹಾಕಿದ್ದಾರೆ. ಆ ಸಂದರ್ಭದಲ್ಲಿ ನನ್ನನ್ನು ಮುಟ್ಟಿ ನೋಡು, ಮತ್ತೆ ನೋಡೋಣ ಎಂದು ಶಮಿತಾ ಅಫ್ಸಾನಾ ಅವರಿಗೆ ಸವಾಲು ಹಾಕಿದ್ದಾರೆ.

ಬಳಿಕ ಸಹಸ್ಪರ್ಧಿಗಳ ಒತ್ತಾಯಕ್ಕೆ ಮಣಿದು ಜಗಳ ಕೊನೆಗೊಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು