ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಗ್‌ಬಾಸ್ ಸೀಸನ್ 15ರಿಂ‌ದ ಹೊರನಡೆದ ಶಮಿತಾ ಶೆಟ್ಟಿ?

Last Updated 14 ನವೆಂಬರ್ 2021, 11:01 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಹಿಂದಿ ಬಿಗ್ ಬಾಸ್ ಸೀಸನ್ 15 ಹಲವು ವಿವಾದಗಳಿಂದಲೇ ಸುದ್ದಿಯಾಗುತ್ತಿದೆ.

ಆದರಲ್ಲೂ ಕಳೆದ ಒಂದು ವಾರದಲ್ಲಿ ರಾಕೇಶ್ ಬಾಪಟ್ ಮತ್ತು ಅಫ್ಸಾನಾ ಖಾನ್ ಹೊರಹೋಗಿದ್ದರು. ಅದರ ಬೆನ್ನಲ್ಲೇ ನಟಿ ಶಮಿತಾ ಶೆಟ್ಟಿ ಕೂಡ ಹೊರಹೋಗಿದ್ದಾರೆ.

ಶಮಿತಾ ಶೆಟ್ಟಿ ಅವರು ಶನಿವಾರ ರಾತ್ರಿ ಬಿಗ್ ಬಾಸ್‌ನಿಂದ ವೈದ್ಯಕೀಯ ಕಾರಣ ನೀಡಿ ನಿರ್ಗಮಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಎರಡು-ಮೂರು ದಿನಗಳಲ್ಲಿ ಅವರು ವಾಪಸ್ ಬರುವ ನಿರೀಕ್ಷೆಯಿದೆ.

ರಾಕೇಶ್ ಕೂಡ ವೈದ್ಯಕೀಯ ಕಾರಣ ನೀಡಿ ಮನೆಯಿಂದ ನಿರ್ಗಮಿಸಿದ್ದರು. ಉಳಿದಂತೆ, ಅಫ್ಸಾನಾ ಖಾನ್ ಅವರನ್ನು ಮನೆಯಿಂದ ಹೊರಹೋಗುವಂತೆ ಸೂಚಿಸಲಾಗಿತ್ತು.

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 15 ಈ ಬಾರಿ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿಗಳ ಕಾರಣದಿಂದ ಸುದ್ದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT