ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಯ ಟಿ.ವಿಯಲ್ಲಿ ಹೊಸ ಧಾರಾವಾಹಿ ‘ಜನನಿ‘: ಆ.15ರಿಂದ ಪ್ರಸಾರ

Last Updated 9 ಆಗಸ್ಟ್ 2022, 12:37 IST
ಅಕ್ಷರ ಗಾತ್ರ

ಬೆಂಗಳೂರು:ಉದಯ ಟಿ.ವಿಯ ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾ ಸೇರದಂತೆ ವಿಭಿನ್ನ ಕಥಾ ಹಂದರ ಇರುವ ಧಾರಾವಾಹಿಗಳನ್ನು ನೀಡಿರುವ ಉದಯ ವಾಹಿನಿ ಈಗ ‘ಜನನಿ‘ ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ.

’ಜನನಿ‘ ಕೌಟುಂಬಿಕ ಆಧಾರಿತ ಧಾರಾವಾಹಿ. ಇದರಲ್ಲಿ ಕಥಾನಾಯಕಿ ಜನನಿಯ ತಂದೆ ರಾತ್ರಿ ಹಗಲು ಎನ್ನದೇ ಬಹಳ ಕಷ್ಟ ಪಟ್ಟು ದುಡಿದು, ತನ್ನ ಮಗಳು ದೊಡ್ಡ ಸಾಧಕಿಯಗಬೇಕೆಂದು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ . ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರಗಳಿಂದ ಜನನಿಯ ಮದುವೆಯಾಗುತ್ತದೆ. ಮುಂದೆ ಏನಾಗುತ್ತದೆ ಎಂಬುದೇ ಕುತೂಹಲಕಾರಿ.

ಈ ಕಥೆಯಲ್ಲಿ ಒಂದು ಹೆಣ್ಣು ತನ್ನಲ್ಲಿರುವ ಪ್ರತಿಭೆಯಿಂದ ತನ್ನ ಗುರಿಯನ್ನು ಮುಟ್ಟಲು ತನ್ನ ಮನೆಯಲ್ಲಿ ಹಾಗೂ ಗಂಡನ ಮನೆಯಲ್ಲಿ ಮತ್ತು ಈ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿ, ಹೋರಾಡಿ ಸಾಧನೆ ಮಾಡುವುದರ ಜೊತೆಗೆ ಇತರೆ ಹೆಣ್ಣು ಮಕ್ಕಳಿಗೆ ಹೇಗೆ ಸ್ಫೂರ್ತಿ ಆಗುತ್ತಾಳೆ ಎಂಬುದನ್ನು ಕುತೂಹಲಕರವಾಗಿ ವಿವರಿಸಲಾಗಿದೆ.

ಈ ಧಾರವಾಹಿ ಚಿ.ಗುರುದತ್ ನಿರ್ಮಾಣ ಸಂಸ್ಥೆಯಾದ ಶಾರದಾಸ್ ಸಿನಿಮಾಸ್ ಮೂಲಕ ಹೊನ್ನೇಶ್ ರಾಮಚಂದ್ರಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ . ಕಥಾ ನಾಯಕಿಯಾಗಿ ವರ್ಷಿಕಾ ಹಾಗು ನಾಯಕಿಯ ತಂದೆಯಾಗಿಪ್ರದೀಪ್ ತಿಪಟೂರ್, ತಾಯಿಯಾಗಿ ದಿವ್ಯಾ ಗೋಪಾಲ್ ನಟಿಸಿದ್ದಾರೆ. ನಾಯಕನಾಗಿ ಮಂಗಳೂರು ಪ್ರತಿಭೆ ಕಿರಣ್ ನಟಿಸಿದ್ದಾರೆ. ಪುಷ್ಪ ಸ್ವಾಮಿ, ಮಾಂಗಲ್ಯ ಧಾರವಾಹಿ ಖ್ಯಾತಿಯ ಮುನಿ, ಲಕ್ಷ್ಮಣ್ , ಅರುಣ್ , ಶ್ವೇತಾ , ರೂಪ , ಶಿಲ್ಪ ಅಯ್ಯರ್ ನಟಿಸುತ್ತಿದ್ದಾರೆ.

‘ಜನನಿ‘ ಧಾರಾವಾಹಿ ಆಗಸ್ಟ್ 15ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಉದಯ ಟಿ.ವಿಯಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT