ಮಾಜಿ ಸಚಿವೆ, ನಟಿ ಉಮಾಶ್ರೀ ಆರು ವರ್ಷಗಳ ಕಾಲ ರಾಜಕೀಯದಲ್ಲಿ ತೊಡಗಿಕೊಂಡಿದ್ದರಿಂದ ಬಣ್ಣದಲೋಕದಿಂದ ದೂರ ಇದ್ದರು. ಈಗ ‘ಆರತಿಗೊಬ್ಬ ಕೀರ್ತಿಗೊಬ್ಬ’ ಮೆಗಾ ಧಾರವಾಹಿ ಮೂಲಕ ನಟನೆಗೆ ಮರಳಿದ್ದಾರೆ.

‘ಅಭಿನಯದಲ್ಲಿ ರಂಗಭೂಮಿ, ಹಿರಿತೆರೆ, ಕಿರುತೆರೆ ಎಂಬ ಭೇದಭಾವ ನನಗೆ ತಿಳಿದಿಲ್ಲ. ಮಂತ್ರಿಯಾಗಿದ್ದಾಗಲೂ ನಟಿಸಲು ಅವಕಾಶಗಳು ಬಂದಿದ್ದವು. ಸಮಯದ ಅಭಾವದಿಂದಾಗಿ ಅವಕಾಶಗಳನ್ನು ನಿರಾಕರಿಸಿದ್ದೆ’ ಎಂದು ಉಮಾಶ್ರೀ ಹೇಳಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿಡಿಸೆಂಬರ್ 23ರಿಂದ ಈ ಧಾರಾವಾಹಿ ಆರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆಸಂಜೆ 6.30ಕ್ಕೆ ಪ್ರಸಾರವಾಗಲಿದೆ.

ಧಾರಾವಾಹಿಯ ಶೀರ್ಷಿಕೆಯೇ ಹೇಳುವಂತೆ ಇಬ್ಬರು ಅಣ್ಣ ತಮ್ಮಂದಿರ ಅವಳಿ ಹುಡುಗರ ಕತೆಯಾಗಿದೆ. ವಿಜಯ್ ಮುಂಬಯಿ ದೊಡ್ಡ ಆಸ್ಪತ್ರೆಯಲ್ಲಿ ವೈದ್ಯ, ನೋವಿಗೆ ಸ್ಪಂದಿಸುವ ಗುಣ ಹೊಂದಿದ್ದು, ಸದಾ ಹಸನ್ಮುಖಿಯಾಗಿರುತ್ತಾನೆ. ಮತ್ತೊಂದು ಕಡೆ, ಹಳ್ಳಿಯಲ್ಲಿ ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳಲಿರುವಅಜಯ್ ನಂಬರ್ ಒನ್ ಕಿರಾತಕ. ಬೇರೆಯವರನ್ನು ಯಾಮಾರಿಸುತ್ತಾ ಬಿಂದಾಸ್ ಜೀವನ ನಡೆಸುತ್ತಿರುತ್ತಾನೆ.

ಕಥಾ ನಾಯಕಿಯರಾದ ಆರತಿ ಮುಗ್ಧ ಮನಸ್ಸಿನವಳು. ಎಲ್ಲರ ಕಷ್ಟಕ್ಕೆ ಮರುಗುವವಳು. ಇನ್ನೊಂದುಕಡೆ ಕೀರ್ತಿ ಗತ್ತಿನವಳು, ಬುದ್ಧಿವಂತೆ, ಕೆಲಸದಲ್ಲಿ ಮೀರಿಸುವವರಿಲ್ಲ. ಒಂದು ಘಟನೆಯಲ್ಲಿ ಅಣ್ಣ ತಮ್ಮ ಹೇಗೆ ಬೇರೆಯಾಗುತ್ತಾರೆ, ಮತ್ತೆ ಇಬ್ಬರೂ ಹತ್ತಿರವಾಗುತ್ತಿದ್ದರೂ ಸಂಬಂಧ ತಿಳಿದಿರುವುದಿಲ್ಲ. ಇವರಿಬ್ಬರಿಗೆ ಆರತಿ, ಕೀರ್ತಿಯರಲ್ಲಿ ಯಾರು ಒಲಿಯುತ್ತಾರೆ ಎನ್ನುವುದು ಈ ಧಾರಾವಾಹಿಯ ಕುತೂಹಲ.

‘ಮನೆಯೊಂದು ಮೂರು ಬಾಗಿಲು’, ‘ಅಗ್ನಿಸಾಕ್ಷಿ’ ಧಾರಾವಾಹಿಗಳನ್ನು ನಿರ್ದೇಶಿಸಿದ ಮೈಸೂರು ಮಂಜು ಈ ಧಾರಾವಾಹಿಯ ನಿರ್ದೇಶನ ಜತೆಗೆ ಪರಿಣಿಕ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಪೂರ್ಣಚಂದ್ರತೇಜಸ್ವಿ ದ್ವಿಪಾತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ನಾಯಕಿಯರಾಗಿ ದೀಪಿಕಾ ಮತ್ತು ಮೇಘನಾ ಶೆಣೈ, ತಾಯಿ ಪಾತ್ರದಲ್ಲಿ ಉಮಾಶ್ರೀ, ಇವರಿಗೆ ಜೋಡಿಯಾಗಿ ಅನಂತವೇಲು, ದತ್ತು ಪೋಷಕರಾಗಿ ಚಿತ್ಕಲಾ ಬಿರಾದಾರ್-ಶ್ರೀನಾಥ್ ವಸಿಷ್ಠ, ಉಳಿದ ಪಾತ್ರಗಳಲ್ಲಿ ಮೂಗು ಸುರೇಶ್, ನೆ.ಲ. ನರೇಂದ್ರಬಾಬು, ಜಯಮ್ಮ, ಸುಜಾತಾ, ಗಜೇಂದ್ರ, ದೊರೇಸ್ ಬಾಬು, ಸುನಿಲ್ ಕುಲಕರ್ಣಿ, ಮಾನ್ವಿತಾ, ಅರ್ಚನಾ ಕೊಟ್ಟಿಗೆ, ಭರತ್ ನಟಿಸುತ್ತಿದ್ದಾರೆ. ಸಂಕಲನ ಗುರುಮೂರ್ತಿ ಹೆಗ್ಗಡೆ, ಛಾಯಾಗ್ರಹಣ ಭೋಗರಾಜ್-ಗುರುಸ್ವಾಮಿ ಕುಪ್ಯ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.