ಶನಿವಾರ, ಮೇ 28, 2022
24 °C

ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ಜೀವನವೇ ಸಾಕು ಎನ್ನಿಸಿತ್ತು: ಉರ್ಫಿ ಜಾವೇದ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Urfi Javed Instagram Post

ಬೆಂಗಳೂರು: ಬಿಗ್ ಬಾಸ್ ಒಟಿಟಿ ಮತ್ತು ಟಿವಿ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಉರ್ಫಿ ಜಾವೇದ್ ತಮ್ಮ ಜೀವನದ ಕಹಿ ಅನುಭವಗಳನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಿಚ್ಚಿಟ್ಟಿದ್ದಾರೆ.

ಉರ್ಫಿ ಅವರು ಹೇಳುವಂತೆ, ಕೆಲಸವಿಲ್ಲದೇ ಹೋದಾಗ, ಕೈಯಲ್ಲಿರುವ ಹಣವೆಲ್ಲ ಖಾಲಿಯಾದಾಗ ಮತ್ತು ಪ್ರೀತಿ ಅಂತ್ಯವಾದಾಗ ನನಗೆ ಜೀವನವೇ ಸಾಕಾಗಿ ಹೋಗಿತ್ತು. ಇದಕ್ಕೆಲ್ಲ ಅಂತ್ಯ ಹಾಡಬೇಕೆಂಬ ಸನ್ನಿವೇಶ ಎದುರಾಗಿತ್ತು ಎಂದಿದ್ದಾರೆ.

ಫ್ಯಾಶನ್ ಟ್ರೆಂಡ್ ಮತ್ತು ಬೋಲ್ಡ್ ಹೇಳಿಕೆಯಿಂದಾಗಿ ಉರ್ಫಿ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಜೀವನದಲ್ಲಿ ಸಾಕಷ್ಟು ಕಷ್ಟ ಎದುರಿಸಿದೆ. ಹಲವು ಬಾರಿ ಎದುರಾದ ಸಮಸ್ಯೆಗಳಿಗೆ ಅಂತ್ಯ ಹಾಡಲು ಮುಂದಾಗಿದ್ದೆ. ಈಗಲೂ ನನ್ನ ಬಳಿ ಹೆಚ್ಚೇನೂ ಹಣವಿಲ್ಲ, ಉತ್ತಮ ಎನ್ನಿಸುವಂತಹ ಕೆಲಸವಿಲ್ಲ, ಈಗಲೂ ನಾನು ಒಂಟಿಯಾಗಿದ್ದೇನೆ, ಆದರೆ ಒಂದು ಭರವಸೆಯಿದೆ. ಕಷ್ಟ ಬಂದಾಗ ಎದುರಿಸಿ ಬದುಕುವುದನ್ನು ಅಭ್ಯಾಸ ಮಾಡಿಕೊಂಡೆ. ಮುಂದೆಯೂ ಹಾಗೆಯೇ ಜೀವನವನ್ನು ಎದುರಿಸುತ್ತೇನೆ, ಸಮಸ್ಯೆ ವಿರುದ್ಧ ಹೋರಾಡಿ ಎಂದು ಹುರುಪಿನ ಮಾತುಗಳನ್ನು ಉರ್ಫಿ ಹೇಳಿದ್ದಾರೆ.

ಬಿಕಿನಿ ಧರಿಸಿರುವ ಫೋಟೊ ಜತೆಗೆ ಈ ಬರಹವನ್ನು ಅವರು ಹಂಚಿಕೊಂಡಿದ್ದು, ವರ್ಷದ ಕೊನೆಯಲ್ಲಿ ಭರವಸೆದಾಯಕ ಮಾತಿನ ಮೂಲಕ ಧನಾತ್ಮಕ ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು