ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಾಯುಷಿ ನೀರಿನ ಹೆಗ್ಗಣ

Last Updated 26 ಜೂನ್ 2019, 19:30 IST
ಅಕ್ಷರ ಗಾತ್ರ

ಸದಾ ಬಿಲಗಳನ್ನು ಕೊರೆಯುವ ಹೆಗ್ಗಣಗಳನ್ನು ಉಪದ್ವ್ಯಾಪಿಗಳೆಂದೇ ಪರಿಗಣಿಸಲಾಗಿದೆ. ಅದರಲ್ಲೂ ಯುರೋಪಿಯನ್‌ ನೀರಿನ ಹೆಗ್ಗಣಗಳು ಹುಟ್ಟಿ ಎರಡನೇ ಚಳಿಗಾಲವನ್ನು ಕಾಣದಷ್ಟು ಅಲ್ಪಾಯುಷಿಗಳು. ಸ್ವಲ್ಪ ಇಲಿಮರಿಯನ್ನು ಹೋಲುವ ಇದರ ವೈಜ್ಞಾನಿಕ ಹೆಸರು ಆರ್ವಿಕೊಲ ಆ್ಯಂಪಿಬಿಯಸ್ (Arvicola amphibius). ಇದು ಮ್ಯಾಮಿಲಿಯಾ ಗುಂಪಿಗೆ ಸೇರಿದೆ. ಇದರ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಉದ್ದ - 12 ರಿಂದ 20 ಸೆಂ.ಮೀ

ಗಾತ್ರ - 300 ಗ್ರಾಂ

ಜೀವಿತಾವಧಿ - ಎರಡು ಚಳಿಗಾಲ– ಗರಿಷ್ಠ ಐದು ವರ್ಷ

ಹೇಗಿರುತ್ತೆ?

ಯುರೋಪಿಯನ್‌ ನೀರಿನ ಹೆಗ್ಗಣಗಳು ಅರೆಜಲವಾಸಿ ಸಸ್ತನಿ. ಪಿಳಿ ಪಿಳಿ ಕಣ್ಣು ಬಿಡುತ್ತಾ, ಮೈ ತುಂಬಾ ಕಂದು ಬಣ್ಣದ ತುಪ್ಪಳ ಹೊಂದಿರುವ ಇದು ದುಂಡನೆಯ ಮೂಗನ್ನು ಹೊಂದಿರುತ್ತದೆ. ಕಂಡರೂ ಕಾಣಿಸದಷ್ಟು ಅಸ್ಪಷ್ಟವಾದ ಕಿವಿಯನ್ನು ಹೊಂದಿರುತ್ತದೆ. ತುಂಡು ಬಾಲದ , ಪಾದಗಳು ಕಾಣಿಸದಷ್ಟು ಕೂದಲುಗಳಿರುತ್ತದೆ.

ಎಲ್ಲಿರುತ್ತೆ?

ಸಾಮಾನ್ಯವಾಗಿ ಯುರೋಪ್‌ ಹಾಗೂ ರಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಈ ನೀರಿನ ಹೆಗ್ಗಣಗಳು ಜೊಂಡು ಹುಲ್ಲುಗಳ ಮೇಲೆ ವಾಸಿಸುತ್ತದೆ. ಚೆಂಡಿನ ಮಾದರಿಯಲ್ಲಿ ಬಿಲಗಳನ್ನು ತೋಡುತ್ತವೆ. ಸಣ್ಣ ಸಣ್ಣ ಮರದ ದಿಮ್ಮಿಗಳು, ಹೊಲ ಗದ್ದೆಗಳು ಹಾಗೂ ತೋಟಗಳಲ್ಲಿಯೂ ಇದನ್ನು ಕಾಣಬಹುದು. ನೀರಿನ ಹೆಗ್ಗಣಗಳು ಚಳಿಗಾಲದಲ್ಲಿ ಹಿಮದುಂಡೆಗಳಲ್ಲಿಯೂ ಬಿಲ ಕೊರೆದು ಬದುಕಬಲ್ಲ ಸಾಮರ್ಥ್ಯ ಇರುತ್ತದೆ.

ಆಹಾರ ಪದ್ಧತಿ

ನೀರಿನ ಹೆಗ್ಗಣಗಳು ಹುಲ್ಲುಕಡ್ಡಿ, ಸಣ್ಣ ಸಣ್ಣ ಸಸ್ಯಗಳನ್ನು ತಿಂದು ಬದುಕುತ್ತದೆ. ಹಣ್ಣುಗಳು, ಕಂದಮೂಲಗಳು, ಗೆಡ್ಡೆ–ಗೆಣಸು, ರೆಂಬೆಯಲ್ಲಿ ಹುಟ್ಟುವ ಚಿಗುರೆಲೆಗಳನ್ನು ತಿಂದು ಬದುಕುತ್ತದೆ. ಕೆಲವೊಮ್ಮೆ ಗದ್ದೆಗಳಲ್ಲಿ ಬಂದ ಬೆಳೆಯನ್ನು ಸಂಪೂರ್ಣ ತಿಂದು, ಅಲ್ಲಲ್ಲಿ ಬಿಲ ತೋಡುತ್ತದೆ. ಹಾಗಾಗಿ ರೈತರು ಈ ಪ್ರಾಣಿಯನ್ನು ದೊಡ್ಡ ಸಮಸ್ಯೆಯಾಗಿ ನೋಡುತ್ತಾರೆ.

ಸಂತಾನೋತ್ಪತ್ತಿ

ನೀರಿನ ಹೆಗ್ಗಣಗಳು ಮಾರ್ಚ್‌ನಿಂದ ಶರತ್ಕಾಲದವರೆಗೂ ಸಂಗಾತಿಯನ್ನು ಬಯಸಿ ಹೊರಡುತ್ತವೆ. ಹೆಣ್ಣು ಹೆಗ್ಗಣಗಳು ಸುಮಾರು 21 ದಿನಗಳ ಕಾಲ ಗರ್ಭ ಧರಿಸುತ್ತವೆ. ಒಂದು ಬಾರಿ 8 ಮರಿಗಳನ್ನು ಹಾಕುವ ಸಾಮರ್ಥ್ಯ ಇದಕ್ಕಿದೆ. ಹುಟ್ಟಿದ ಮೂರು ದಿನಗಳ ನಂತರ ಮರಿಗಳು ಕಣ್ಣು ತೆರೆಯುತ್ತವೆ. ಅವುಗಳ ಗಾತ್ರ 28 ಗ್ರಾಂನಷ್ಟು ಇರುತ್ತದೆ. ನೀರಿನ ಹೆಗ್ಗಣಗಳು ಅಲ್ಪಾಯುಷಿಯಾಗಿದ್ದು, ಸರಾಸರಿ ಐದು ತಿಂಗಳ ಕಾಲವಷ್ಟೆ ಬದುಕಿ ಉಳಿಯಬಲ್ಲದು.

ವರ್ತನೆ

ನೀರಿನ ಹೆಗ್ಗಣಗಳು ಬಿಲ ತೋಡಿ ಅದರಲ್ಲಿ ಜೀವನ ನಡೆಸುವುದಲ್ಲದೇ, ನೀರಿನಲ್ಲಿಯೇ ಬದುಕಬಲ್ಲದು. ಗರ್ಭ ಧರಿಸಿದ ಹೆಣ್ಣು ಹೆಗ್ಗಣಗಳು 30 ರಿಂದ 150 ಸೆಂ.ಮೀನಷ್ಟು ದೊಡ್ಡ ಬಿಲಗಳನ್ನು ತೋಡಿ ಅದರಲ್ಲಿ ಸುರಕ್ಷಿತವಾಗಿ ಇರಲು ಬಯಸುತ್ತವೆ. ಹಾಗೆಯೇ ಗಂಡು ಹೆಗ್ಗಣಗಳು 60 ರಿಂದ 300 ಸೆಂ.ಮೀ ಉದ್ದದಷ್ಟು ದೊಡ್ಡ ಬಿಲ ತೋಡುತ್ತದೆ. ಇದೇ ಬಿಲದಲ್ಲಿ ಹಲವು ಹೆಣ್ಣು ಹೆಗ್ಗಣಗಳ ಜತೆ ಸ್ನೇಹದಿಂದ ಇರುತ್ತದೆ.

ಸಾಮಾನ್ಯವಾಗಿ ಹಗಲಿನಲ್ಲಿ ಚುರುಕಾಗಿರುತ್ತದೆ. ಚಳಿಗಾಲದಲ್ಲಿ ನಿದ್ದೆಮಾಡುವುದಿಲ್ಲ. ಆದರೆ, ಬಿಲದಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತದೆ.

ಸ್ವಾರಸ್ಯಕರ ಸಂಗತಿ

* ಇಂಗ್ಲೆಂಡ್‌ನಲ್ಲಿ ನೀರಿನ ಹೆಗ್ಗಣದ ಸಂತತಿ ನಶಿಸುತ್ತಿದ್ದು, 8 ಲಕ್ಷವಿದ್ದ ನೀರಿನ ಹೆಗ್ಗಣಗಳು 2.3 ಲಕ್ಷಕ್ಕೆ ಬಂದಿದೆ. ಮುಂಗುಸಿಯಂಥ ಪ್ರಾಣಿಗಳ ದಾಳಿಗೆ ಇದು ತುತ್ತಾಗುತ್ತಿರುವುದರಿಂದ ಇದರ ಸಂಖ್ಯೆಕಡಿಮೆಯಾಗಿರಬಹುದು ಎಂದು ಅಂದಾಜಿಲಾಗಿದೆ.

* ವಿಶ್ವದಾದ್ಯಂತ ನೀರಿನ ಆಕರಗಳು ಬತ್ತುತ್ತಿರುವುದರಿಂದ ನೀರಿನ ಹೆಗ್ಗಣಗಳ ಸಂತತಿ ಅಳಿವಿನಂಚಿನಲ್ಲಿದೆ. ರಾಸಾಯನಿಕ ಬಳಸಿ ಮಾಡುವ ಕೃಷಿ ಪದ್ಧತಿಯು ಇದರ ಪ್ರಾಣಕ್ಕೆ ಎರವಾಗಿದೆ.

* ಗದ್ದೆಗಳಲ್ಲಿ ವ್ಯಾಪಕವಾಗಿ ಬಿಲಗಳನ್ನು ತೋಡಿ, ಪ್ಲೇಗ್‌ನಂಥ ಸಾಂಕ್ರಾಮಿಕ ರೋಗಗಳನ್ನು ತಂದೊಡ್ಡುವ ಅಪಾಯವೂ ಇರುತ್ತದೆ.

* ಶೇ 80ರಷ್ಟು ತನ್ನ ದೇಹತೂಕದ ಆಹಾರವನ್ನು ನಿತ್ಯ ಸೇವಿಸುತ್ತದೆ. ಇವು ಕುಬ್ಜವಾಗಿದ್ದರೂ ನೀರಿನಲ್ಲಿ ಚೆನ್ನಾಗಿ ಈಜಬಲ್ಲದು.

* ಬ್ರಿಟನ್‌ನಿನಲ್ಲಿ 227ಕ್ಕಿಂತಲೂ ಅಧಿಕ ಸಸ್ಯಗಳನ್ನು ತಿಂದು ಬದುಕುತ್ತದೆ. ಕೆಲವು ತಳಿಗಳು ಹೆಸರಿಗೆ ಮಾತ್ರ ನೀರಿನ ಹೆಗ್ಗಣಗಳಾಗಿದ್ದು, ಅವು ನೀರಿನಲ್ಲಿ ಇರಲು ಇಷ್ಟಪಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT