ಮಂಗಳವಾರ, ಆಗಸ್ಟ್ 4, 2020
22 °C

2018ರಲ್ಲಿ ನಡೆದ ಭಾರತದ ಹುಲಿ ಗಣತಿ ವಿಶ್ವದಾಖಲೆ: ಇಲ್ಲಿದೆ ಮಾಹಿತಿ...

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅತಿ ಹೆಚ್ಚು ಕ್ಯಾಮೆರಾಗಳನ್ನು ಬಳಸಿ ಭಾರತದಲ್ಲಿ  2018ರಲ್ಲಿ ನಡೆಸಲಾದ ಹುಲಿಗಣತಿ ಗಿನ್ನಿಸ್ ವಿಶ್ವದಾಖಲೆಗೆ ಸೇರ್ಪಡೆಯಾಗಿದೆ.

ವಿಶ್ವ ಹುಲಿ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು 2018 ನೇ ಅಖಿಲ ಭಾರತ ಹುಲಿ ಗಣತಿಯ ನಾಲ್ಕನೇ  ಆವೃತ್ತಿ ಫಲಿತಾಂಶವನ್ನು ಪ್ರಕಟಿಸಿದ್ದರು. ಭಾರತದಲ್ಲಿ ಒಟ್ಟು  2,967 ಹುಲಿಗಳು ಇರುವುದು ಸರ್ವೆಯಲ್ಲಿ ತಿಳಿದುಬಂದಿದೆ. ಇದು ಜಗತ್ತಿನಲ್ಲಿರುವ ಶೇಕಡಾ 75 ರಷ್ಟು ಹುಲಿಗಳ ಸಂತತಿಯಾಗಿದೆ.

‘ಅಖಿಲ ಭಾರತ ಹುಲಿಗಳ ಗಣತಿಯು ಗಿನ್ನಿಸ್ ವಿಶ್ವದಾಖಲೆಗೆ ಸೇರ್ಪಡೆಯಾಗಿದೆ. ಇದೊಂದು ಅದ್ಭುತ ಕ್ಷಣ. ಇದು ಆತ್ಮನಿರ್ಭರ್ ಭಾರತಕ್ಕೆ ಉತ್ತಮ ಉದಾಹರಣೆಯಾಗಿದೆ’ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವೇಡ್ಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು