ಪ್ರತಿ ವರ್ಷ ಜುಲೈ 29ರಂದು ‘ವಿಶ್ವ ಹುಲಿ ದಿನ’ ಆಚರಿಸಲಾಗುತ್ತದೆ. 20ನೇ ಶತಮಾನದ ಆರಂಭದಲ್ಲಿ ವಿಶ್ವದಾದ್ಯಂತ 1 ಲಕ್ಷಕ್ಕೂ ಹೆಚ್ಚು ಹುಲಿಗಳು ಇದ್ದವು. ಆದರೆ 21ನೇ ಶತಮಾನದ ವೇಳೆಗೆ ಅವುಗಳ ಸಂಖ್ಯೆ 4,000ಕ್ಕಿಂತ ಕಡಿಮೆಯಾಗಿತ್ತು. ಹುಲಿಗಳ ಸಂರಕ್ಷಣೆಯ ಮಹತ್ವವನ್ನು ಸಾರುವ ಮತ್ತು ಹುಲಿಗಳನ್ನು ಸಂರಕ್ಷಿಸುವ ಉದ್ದೇಶದಿಂದ 2010ರಲ್ಲಿ ವಿಶ್ವ ಹುಲಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಹನ್ನೆರಡನೆಯ ವಿಶ್ವ ಹುಲಿ ದಿನದ ಸಂದರ್ಭದಲ್ಲಿ, ವಿಶ್ವದಲ್ಲಿನ ಹುಲಿ ಪ್ರಭೇದಗಳತ್ತ ಒಂದು ನೋಟ

ಕ್ಯಾಸ್ಪಿಯಾ ಪ್ರದೇಶದ ಹುಲಿ

8–11ಅಡಿಮೂಗಿನಿಂದ ಬಾಲದ ತುದಿವರೆಗಿನ ಸರಾಸರಿ ಉದ್ದ

160–250ಕೆ.ಜಿ.ಸರಾಸರಿ ತೂಕ

ಆವಾಸ: ಅಫ್ಗಾನಿಸ್ತಾನ, ಇರಾನ್, ಟರ್ಕಿಯ ಕಾಡುಗಳಲ್ಲಿ ಇದ್ದವು

l ಕ್ಯಾಸ್ಪಿಯಾ ಪ್ರದೇಶದ ಹುಲಿಗಳು ಬದುಕಿದ್ದಾಗ, ಬೇರೆಲ್ಲಾ ಹುಲಿಗಳಿಗಿಂತ ದೊಡ್ಡ ಗಾತ್ರದವು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದವು. ಮೂಗಿನ ತುದಿಯಿಂದ ಬಾಲದ ತುದಿಯವರೆಗೆ 11.8 ಅಡಿ ಉದ್ದವಿದ್ದ ಹುಲಿಯೊಂದನ್ನು 20ನೇ ಶತಮಾನದ ಆರಂಭದಲ್ಲಿ ಗುರುತಿಸಲಾಗಿತ್ತು. ಇವುಗಳ ಬಣ್ಣ ಬೂದಾಗಿದ್ದ ಕಾರಣ ಇವುಗಳನ್ನು ಬೂದು ಹುಲಿಗಳು ಎಂದೂ ಕರೆಯಲಾಗುತ್ತಿತ್ತು. ಬೇಟೆಯ ಕಾರಣದಿಂದಲೇ ಇವು ಸಂಪೂರ್ಣವಾಗಿ ನಾಮಾವಶೇಷವಾಗಿವೆ

ಮಲಯ ಹುಲಿ

7–9ಅಡಿಮೂಗಿನಿಂದ ಬಾಲದ ತುದಿವರೆಗಿನ ಸರಾಸರಿ ಉದ್ದ

100–130ಕೆ.ಜಿ.ಸರಾಸರಿ ತೂಕ

200ಕ್ಕಿಂತ ಕಡಿಮೆ ಹುಲಿಗಳು ಉಳಿದಿವೆ ಎಂದು ಅಂದಾಜಿಸಲಾಗಿದೆ

ಆವಾಸ: ದಕ್ಷಿಣ ಮ್ಯಾನ್ಮಾರ್, ಮಲೇಷ್ಯಾ, ದಕ್ಷಿಣ ಥಾಯ್ಲೆಂಡ್

l ಇವು ಈಗಿನ ಹುಲಿ ಪ್ರಭೇದಗಳಲ್ಲೇ ಅತ್ಯಂತ ಸಣ್ಣ ಗಾತ್ರದ ಮತ್ತು ಕಡಿಮೆ ತೂಕದ ಹುಲಿಗಳು. ಧಾರ್ಮಿಕ ವಿಧಿವಿಧಾನಗಳು, ಆಹಾರ ಮತ್ತು ಔಷಧಿಗಾಗಿ ಇವುಗಳ ಮಾಂಸ ಮತ್ತು ದೇಹದ ಭಾಗಗಳನ್ನು ಬಳಸಲಾಗುತ್ತದೆ. ಹೀಗಾಗಿ ಇವುಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಅವು ಅಳಿವಿನತ್ತ ಸಾಗುತ್ತಿವೆ

ಸುಮಾತ್ರಾ ಹುಲಿ

7–8.5ಅಡಿಮೂಗಿನಿಂದ ಬಾಲದ ತುದಿವರೆಗಿನ ಸರಾಸರಿ ಉದ್ದ

100–130ಕೆ.ಜಿ.ಸರಾಸರಿ ತೂಕ

400-600 ಹುಲಿಗಳು ಉಳಿದಿವೆ ಎಂದು ಅಂದಾಜಿಸಲಾಗಿದೆ

ಆವಾಸ: ಇಂಡೊನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಮಾತ್ರ ಇವೆ

l ಸುಮಾತ್ರಾ ದ್ವೀಪದಲ್ಲಿ ಮಾತ್ರ ಇವು ಇದ್ದು, ತೀರಾ ಅಪಾಯದಲ್ಲಿ ಇವೆ ಎನ್ನಲಾಗಿದೆ. ಇವುಗಳ ಬಣ್ಣ ದಟ್ಟವಾಗಿದ್ದು, ಭೀಕರವಾಗಿ ಕಾಣುತ್ತವೆ. ಆದರೆ ಇವುಗಳ ಗಾತ್ರ ಚಿಕ್ಕದು

ಇಂಡೊ–ಚೀನಾ ಹುಲಿ

8–9.5ಅಡಿಮೂಗಿನಿಂದ ಬಾಲದ ತುದಿವರೆಗಿನ ಸರಾಸರಿ ಉದ್ದ

130–180ಕೆ.ಜಿ.ಸರಾಸರಿ ತೂಕ

300–400 ಹುಲಿಗಳು ಉಳಿದಿವೆ ಎಂದು ಅಂದಾಜಿಸಲಾಗಿದೆ

ಆವಾಸ: ಆಗ್ನೇಯ ಚೀನಾ, ಮ್ಯಾನ್ಮಾರ್, ಲಾವೋಸ್, ಥಾಯ್ಲೆಂಡ್, ವಿಯೆಟ್ನಾಂ, ಕಾಂಬೋಡಿಯಾ

l ಈ ಹುಲಿಗಳಲ್ಲಿ ಪಟ್ಟೆಗಳದ್ದೇ ವಿಶೇಷ. ಇವುಗಳ ಪಟ್ಟೆಗಳು ಅತ್ಯಂತ ಸಪೂರವಾಗಿದ್ದು, ಮೊನಚಾಗಿರುತ್ತವೆ. ಜತೆಗೆ ಇವುಗಳಲ್ಲಿ ಜೋಡಿ ಪಟ್ಟೆಗಳು ಕಂಡುಬರುವುದಿಲ್ಲ

ಜಾವಾ ಹುಲಿ

8–9 ಅಡಿ/ ಮೂಗಿನಿಂದ ಬಾಲದ ತುದಿವರೆಗಿನ ಸರಾಸರಿ ಉದ್ದ

100–130 ಕೆ.ಜಿ./ ಸರಾಸರಿ ತೂಕ

ಆವಾಸ: ಇಂಡೊನೇಷ್ಯಾದ ಜಾವಾ ದ್ವೀಪ

l ಬೇಟೆಯ ಕಾರಣದಿಂದಲೇ ಇವು ಸಂಪೂರ್ಣವಾಗಿ ನಾಮಾವಶೇಷವಾಗಿವೆ. ಈ ಪ್ರಭೇದದ ಹುಲಿಯನ್ನು ಕೊನೆಯ ಬಾರಿಗೆ ನೋಡಿದ್ದು 1970ರಲ್ಲಿ. ಈಗಲೂ ಜಾವಾದ ಕಾಡುಗಳಲ್ಲಿ ಈ ಹುಲಿಗಳು ಇವೆ ಎನ್ನಲಾಗುತ್ತದೆ, ಆದರೆ ಅದು ಸಾಬೀತಾಗಿಲ್ಲ

ಸೈಬೀರಿಯದ ಹುಲಿ

7–11ಅಡಿಮೂಗಿನಿಂದ ಬಾಲದ ತುದಿವರೆಗಿನ ಸರಾಸರಿ ಉದ್ದ

130–200ಕೆ.ಜಿ.ಸರಾಸರಿ ತೂಕ

600 ಹುಲಿಗಳು ಉಳಿದಿವೆ ಎಂದು ಅಂದಾಜಿಸಲಾಗಿದೆ

ಆವಾಸ: ಪೂರ್ವ ಚೀನಾ, ಕೊರಿಯಾ, ದಕ್ಷಿಣ ಪೂರ್ವ ರಷ್ಯಾ

l ಈಗ ಜಗತ್ತಿನಲ್ಲಿರುವ ಹುಲಿಗಳಲ್ಲೇ ಅತ್ಯಂತ ದೈತ್ಯ ಹುಲಿ ಎಂಬ ಹೆಗ್ಗಳಿಕೆ ಸೈಬೀರಿಯ ಹುಲಿಗಳದ್ದು. ಈಗಾಗಲೇ ನಿರ್ನಾಮವಾಗಿರುವ ಕ್ಯಾಸ್ಪಿಯಾ ಹುಲಿಗಳ ಹತ್ತಿರದ ಸಂಬಂಧಿ. 12 ಅಡಿಗೂ ಹೆಚ್ಚು ಉದ್ದದ ಹುಲಿಗಳನ್ನು ಗುರುತಿಸಲಾಗಿದೆ

ದಕ್ಷಿಣ ಚೀನಾ ಹುಲಿ

8–9ಅಡಿಮೂಗಿನಿಂದ ಬಾಲದ ತುದಿವರೆಗಿನ ಸರಾಸರಿ ಉದ್ದ

110–170ಕೆ.ಜಿ.ಸರಾಸರಿ ತೂಕ

30–40 ಹುಲಿಗಳು ಉಳಿದಿವೆ ಎಂದು ಅಂದಾಜಿಸಲಾಗಿದೆ

ಆವಾಸ: ಮಧ್ಯ ಮತ್ತು ಪೂರ್ವ ಚೀನಾ

l ಇವುಗಳು ಅಳಿವಿನ ಅಂಚಿನಲ್ಲಿರುವ ಪ್ರಭೇದದ ಹುಲಿಗಳಾಗಿವೆ. ಚೀನಾದ ಮೃಗಾಲಯಗಳಲ್ಲಿ 30–40ರಷ್ಟು ವಯಸ್ಕ ಹುಲಿಗಳು ಇವೆ ಎಂದು ಅಂದಾಜಿಸಲಾಗಿದೆ. ಅವುಗಳ ಸಹಜ ಆವಾಸದಲ್ಲಿ ಅವು ಸಂಪೂರ್ಣವಾಗಿ ನಿರ್ನಾಮವಾಗಿವೆ ಎನ್ನಲಾಗಿದೆ. ತಮ್ಮ ಸಹಜ ಪರಿಸರದಲ್ಲಿ ಬದುಕುಳಿಯುವ ಮತ್ತು ವಂಶಾಭಿವೃದ್ಧಿ ಮಾಡುವ ಸಾಮರ್ಥ್ಯ ಕ್ಷೀಣಿಸಿದೆ ಎನ್ನಲಾಗಿದೆ

ಬಾಲಿ ಹುಲಿ

7–8 ಅಡಿ/ ಮೂಗಿನಿಂದ ಬಾಲದ ತುದಿವರೆಗಿನ ಸರಾಸರಿ ಉದ್ದ

90–100 ಕೆ.ಜಿ./ ಸರಾಸರಿ ತೂಕ

ಆವಾಸ: ಇಂಡೊನೇಷ್ಯಾದ ಬಾಲಿ ದ್ವೀಪ

l ಈ ಹುಲಿಗಳು ಬದುಕಿದ್ದಾಗ, ಬೇರೆಲ್ಲಾ ಹುಲಿಗಳಿಗಿಂತ ಸಣ್ಣದಾಗಿದ್ದವು.ಬೇಟೆಯ ಕಾರಣದಿಂದಲೇ ಇವು ಸಂಪೂರ್ಣವಾಗಿ ನಾಮಾವಶೇಷವಾಗಿವೆ. ಇಂಡೊನೇಷ್ಯಾದ ಜನಪದ ಕಲೆ, ಶಿಲ್ಪಕಲೆಗಳಲ್ಲಿ ಈ ಹುಲಿಗೆ ಪ್ರಧಾನ ಸ್ಥಾನವಿದೆ

ಆಧಾರ: ವರ್ಲ್ಡ್ ವೈಲ್ಡ್ಲೈಫ್ ಫೋರಂ, ಗ್ಲೋಬಲ್ ಟೈಗರ್ ಫೋರಂ, ಭಾರತದಲ್ಲಿ ಹುಲಿ ಸ್ಥಿತಿಗತಿ ವರದಿ–2018

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.