ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದ ಮಂಗಕ್ಕೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ

ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದ ಮಂಗವೊಂದಕ್ಕೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು (cataract surgery) ಯಶಸ್ವಿಯಾಗಿ ನೆರವೇರಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
Published 31 ಮೇ 2024, 3:14 IST
Last Updated 31 ಮೇ 2024, 3:14 IST
ಅಕ್ಷರ ಗಾತ್ರ

ಹಿಸ್ಸಾರ್: ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದ ಮಂಗವೊಂದಕ್ಕೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು (cataract surgery) ಯಶಸ್ವಿಯಾಗಿ ನೆರವೇರಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

ಹಿಸ್ಸಾರನ ಲಾಲಾ ಲಜಪತ್ ರಾಯ್ ಪಶುವೈದ್ಯಕೀಯ ವಿಶ್ಯವಿದ್ಯಾಲಯದ ಅನಿಮಲ್ ಸರ್ಜರಿ ಹಾಗೂ ರೆಡಿಯಾಲಜಿ ವಿಭಾಗ ಈ ಅಪರೂಪದ ಕೆಲಸ ಮಾಡಿದೆ.

ಪ್ರಾಣಿ ಪ್ರಿಯ ಮುನೀಶ್ ಎನ್ನುವರು ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದ ಮಂಗವನ್ನು ನಮ್ಮ ಬಳಿ ತಂದಿದ್ದರು. ಮೊದಲು ಅದಕ್ಕೆ ನಡೆಯಲು ಬರುತ್ತಿರಲಿಲ್ಲ. ಬಳಿಕ ಕಣ್ಣಿನ ಪೊರೆಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂತು. ಕೂಡಲೇ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ವಿಭಾಗದ ಮುಖ್ಯಸ್ಥ ಆರ್‌.ಎನ್. ಚೌಧರಿ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಮಂಗ ಚೇತರಿಸಿಕೊಂಡಿದ್ದು ದೃಷ್ಟಿ ಬಂದಿದೆ. ಸದ್ಯ ಓಡಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹರಿಯಾಣದಲ್ಲಿ ಇದೇ ಮೊದಲ ಬಾರಿಗೆ ಪ್ರಾಣಿಯೊಂದಕ್ಕೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT