ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರ ಆಗಸ್ಟ್ ದಾಖಲಿಸಿತು 121 ವರ್ಷದಲ್ಲೇ ಅತಿ ಹೆಚ್ಚಿನ ಶುಷ್ಕ ಹವೆ, ತಾಪಮಾನ!

ದೇಶದಲ್ಲಿ ಬಹುತೇಕ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಆಘಾತಕಾರಿ ಮಾಹಿತಿಯೊಂದನ್ನು ಹೊರಗೆಡವಿದೆ.
Published 1 ಸೆಪ್ಟೆಂಬರ್ 2023, 13:33 IST
Last Updated 1 ಸೆಪ್ಟೆಂಬರ್ 2023, 13:33 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಬಹುತೇಕ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಆಘಾತಕಾರಿ ಮಾಹಿತಿಯೊಂದನ್ನು ಹೊರಗೆಡವಿದೆ.

ಭಾರತದಲ್ಲಿ 121 ವರ್ಷಗಳಲ್ಲಿ ಕಳೆದ ಆಗಸ್ಟ್ ತಿಂಗಳು ಅತ್ಯಂತ ಹೆಚ್ಚು ಒಣ (ಶುಷ್ಕ- ತೀರಾ ಕಡಿಮೆ ಮಳೆಯೊಂದಿಗೆ ಒಣ ಹವೆ ಇರುವುದು) ಹಾಗೂ ಬಿಸಿ ಹವೆಯನ್ನು ಹೊಂದಿತ್ತು ಎಂದು ಹವಾಮಾನ ಇಲಾಖೆ (IMD) ಹೇಳಿದೆ.

ಆಗಸ್ಟ್ ತಿಂಗಳಲ್ಲಿ ಕಳೆದ ಏಳು ವರ್ಷದಿಂದ ಸತತವಾಗಿ ತಾಪಮಾನ ಏರಿಕೆ ಕಂಡಿದ್ದು 2023 ರ ಆಗಸ್ಟ್ ತಿಂಗಳು ಕೂಡ 121 ವರ್ಷಗಳಲ್ಲಿ ಅತ್ಯಂತ ಹೆಚ್ಚು ತಾಪಮಾನ ಹೊಂದಿತ್ತು ಎಂದು ಅದು ಹೇಳಿದೆ.

ಸಾಮಾನ್ಯಕ್ಕಿಂತ ಆಗಸ್ಟ್‌ನಲ್ಲಿ ಕಂಡು ಬಂದಿರುವ ಭಾರಿ ಒಣ ಹವೆ, ತಾಪಮಾನ, ಅನಿಶ್ಚಿತ ಮಳೆ ನಿಶ್ಚಿತವಾಗಿಯೂ ಜಾಗತಿಕ ತಾಪಮಾನ ಬದಲಾವಣೆಯ ಮುನ್ಸೂಚನೆ ಎಂದು ಅನೇಕ ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ತಾಪಮಾನ 35.4 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಆಗಸ್ಟ್‌ನಲ್ಲಿ ತೀವ್ರ ಮಳೆ ಕೊರತೆ ಕಂಡು ಬಂದಿದೆ. ಆದರೆ, ಸೆಪ್ಟೆಂಬರ್‌ನಲ್ಲಿ ಸಾಮಾನ್ಯ ಮುಂಗಾರು ನಿರೀಕ್ಷೆ ಮಾಡಬಹುದು ಎಂದು ಐಎಂಡಿ ಹೇಳಿದೆಯಾದರೂ, ತಾಪಮಾನ ಸಾಮಾನ್ಯಕ್ಕಿಂತಲೂ ಹೆಚ್ಚು ಇರಲಿದೆ ಎಂದೂ ಹೇಳಿದೆ.

ಸೆಪ್ಟೆಂಬರ್‌ನಲ್ಲಿ ದೇಶದ ಈಶಾನ್ಯ ಹಾಗೂ ಹಿಮಾಲಯ ತಪ್ಪಲು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸುರಿಯಬಹುದು, ಉಳಿದ ಭಾಗಗಳಲ್ಲಿ ಸಾಮಾನ್ಯ, ಕೆಲವು ಕಡೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT