ಭಾರತದಲ್ಲಿ ಕಳೆದ ಒಂದು ದಶಕದಿಂದ 'ಸ್ವಚ್ಛ ಭಾರತ್ ಮಿಷನ್' ಅಡಿಯಲ್ಲಿ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಇದರ ಹೊರತಾಗಿಯೂ ಇನ್ನೂ ಹಲವು ನಗರಗಳು ಸಂಪೂರ್ಣ ಸ್ವಚ್ಛವಾಗದೆ ಉಳಿದಿವೆ. ಸ್ವಚ್ಛ ಸರ್ವೇಕ್ಷಣ–2025 ವರದಿಯ ಪ್ರಕಾರ, ಕಳಪೆ ನೈರ್ಮಲ್ಯ ಮತ್ತು ಸಮರ್ಪಕ ತ್ಯಾಜ್ಯ ನಿರ್ವಹಣೆಯಲ್ಲಿ ಹೋರಾಟ ಮಾಡುತ್ತಿರುವ ಭಾರತದ 10 ಅತ್ಯಂತ ಕೊಳಕು ನಗರಗಳು ಯಾವುವು ಎಂಬುದರ ಕುರಿತು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಮಧುರೈ: ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು 'ದೇವಾಲಯಗಳ ನಗರ' ಎಂದು ಕರೆಯಲ್ಪಡುವ ಮಧುರೈ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಇದು ಅತ್ಯಂತ ಕೊಳಕು ನಗರ ಎಂಬ ಅಪಖ್ಯಾತಿ ಹೊಂದಿದೆ. ಈ ನಗರ ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಯೊಂದಿಗೆ ಹೋರಾಡುತ್ತಿದೆ. ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಕೇವಲ 4,823 ಅಂಕಗಳನ್ನು ಗಳಿಸಿದೆ.

ಲೂಧಿಯಾನ: ಪಂಜಾಬ್ನ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿರುವ ಲುಧಿಯಾನ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ 5,272 ಅಂಕ ಪಡೆದು ಕೊಳಕು ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ಕೈಗಾರಿಕೆಗಳ ವಿಸ್ತರಣೆಯ ವೇಗವು ಅದರ ನಾಗರಿಕ ಸೌಲಭ್ಯಗಳ ಅಭಿವೃದ್ಧಿಯನ್ನು ಮೀರಿಸಿದೆ ಎಂದು ಸಮೀಕ್ಷೆ ಧೃಡಪಡಿಸಿದೆ.

ಚೆನ್ನೈ: ಈ ಪಟ್ಟಿಯಲ್ಲಿ 6,822 ಅಂಕ ಹೊಂದಿರುವ ಚೆನ್ನೈ ಮೂರನೇ ಸ್ಥಾನದಲ್ಲಿದೆ. ಇದು ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಗೆ ಸಂಬಂಧಿಸಿದಂತೆ ನಿರಂತರ ಪ್ರಯತ್ನ ನಡೆಸುತ್ತಿದೆ. ಇದರ ಹೊರತಾಗಿಯೂ ಕೊಳಕು ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ರಾಂಚಿ: ಈ ಪಟ್ಟಿಯಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿ ನಾಲ್ಕನೇ ಸ್ಥಾನದಲ್ಲಿದೆ. ಇದು ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ 6,835 ಅಂಕ ಪಡೆದಿದೆ. ರಾಂಚಿ ನಗರ ಕಸ ವಿಲೇವಾರಿ ಮತ್ತು ಸಾರ್ವಜನಿಕ ನೈರ್ಮಲ್ಯ ನಿರ್ವಹಿಸುವಲ್ಲಿ ನಿರಂತರ ಸವಾಲುಗಳನ್ನು ಎದುರಿಸುತ್ತಿದೆ.

ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂದು ಕರೆಯುವ ಬೆಂಗಳೂರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿದ್ದರ ಹೊರತಾಗಿಯೂ ಬೆಂಗಳೂರು ಸರಿಯಾದ ಯೋಜನೆ ಇಲ್ಲದೆ ನಗರದ ವಿಸ್ತರಣೆ ಮತ್ತು ಅಸಮರ್ಪಕ ತ್ಯಾಜ್ಯ ನಿರ್ವಹಣೆಯ ಜೊತೆಗೆ ಜನಸಂಖ್ಯೆ ಏರಿಕೆಯ ಕಾರಣದಿಂದಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಧನ್ಬಾದ್: 7,196 ಅಂಕ ಹೊಂದಿರುವ ಜಾರ್ಖಂಡ್ನ ಧನ್ಬಾದ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕಲ್ಲಿದ್ದಲು ಗಣಿಗಾರಿಕೆಗೆ ಹೆಸರುವಾಸಿಯಾಗಿರುವ ಈ ನಗರ ಕೈಗಾರಿಕಾ ಮಾಲಿನ್ಯ ಮತ್ತು ಯೋಜನಾ ರಹಿತವಾಗಿ ನಗರ ಬೆಳವಣಿಗೆಯಾಗುತ್ತಿರುವುದರಿಂದ ತ್ಯಾಜ್ಯ ನಿರ್ವಹಣೆ ಸಮಸ್ಯೆ ಎದುರಿಸುತ್ತಿದೆ.

ಫರಿದಾಬಾದ್ : 7,329 ಅಂಕಗಳನ್ನು ಗಳಿಸಿದ ಫರಿದಾಬಾದ್ ಏಳನೇ ಸ್ಥಾನ ಪಡೆದುಕೊಂಡಿದೆ. ನಗರವು ಕಳಪೆ ಘನತ್ಯಾಜ್ಯ ನಿರ್ವಹಣೆ ಮತ್ತು ಅಸಮರ್ಪಕ ಸಾರ್ವಜನಿಕ ನೈರ್ಮಲ್ಯದ ಸಮಸ್ಯೆಗಳಿಂದ ತುಂಬಿದೆ.

ಗ್ರೇಟರ್ ಮುಂಬೈ: ಈ ನಗರವು ತ್ಯಾಜ್ಯ ನಿರ್ವಹಣೆ, ಜನದಟ್ಟನೆ ಮತ್ತು ಸಾರ್ವಜನಿಕ ನೈರ್ಮಲ್ಯದ ಸವಾಲುಗಳನ್ನು ನಿರಂತರವಾಗಿ ಎದುರಿಸುತ್ತಿದೆ. ಸ್ವಚ್ಛ ಸರ್ವೇಕ್ಷಣಾ ವರದಿಯಲ್ಲಿ 7,419 ಅಂಕ ಪಡೆದು 8ನೇ ಸ್ಥಾನದಲ್ಲಿದೆ.

ಶ್ರೀನಗರ: 7,488 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿರುವ ಶ್ರೀನಗರ. ಸ್ವಚ್ಛತೆ ಕಾಪಾಡಲು ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ.

ದೆಹಲಿ: ಸ್ವಚ್ಛ ಸರ್ವೇಕ್ಷಣ 2025ರ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದೆ. 7,920 ಅಂಕ ಹೊಂದಿದೆ. ನಗರವು ವಾಯು ಮತ್ತು ತ್ಯಾಜ್ಯ ಮಾಲಿನ್ಯದ ತೊಂದರೆಗಳನ್ನು ಎದುರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.