ಹಣ ಇದ್ದರೂ, ಆಗಿಲ್ಲ ಪ್ರಗತಿ:
ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ 2022–23ರ ಬಜೆಟ್‌ನಲ್ಲಿ ₹100 ಕೋಟಿ ಘೋಷಣೆ ಮಾಡಿತ್ತು. ಕಾಂಗ್ರೆಸ್ ಸರ್ಕಾರವೂ ಕಳೆದ ವರ್ಷದ ಬಜೆಟ್‌ನಲ್ಲಿ ₹100 ಕೋಟಿ ಘೋಷಣೆ ಮಾಡಿದೆ. 2023ರ ಮಾರ್ಚ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಕಾರ್ಯಗಳಿಗೆ ಅಂಜನಾದ್ರಿಯಲ್ಲಿ ಚಾಲನೆ ಕೊಟ್ಟಿದ್ದರೂ ಪ್ರಸ್ತುತ ₹17.15 ಕೋಟಿ ವೆಚ್ಚದ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಅವೂ ಮಂದಗತಿಯಲ್ಲಿ ಸಾಗಿವೆ. ಭಕ್ತರಿಂದ ಸಂಗ್ರಹವಾದ ದೇಣಿಗೆ ಮೊತ್ತವೇ ಪ್ರಸ್ತುತ ₹8.07 ಕೋಟಿ ಇದ್ದರೂ ಭಕ್ತರಿಗೆ ಮೂಲಸೌಲಭ್ಯದ ಕೊರತೆ ಕಾಡುತ್ತಿದೆ.