ಕರ್ನಾಟಕವು ಕಂಪನಿಗಳಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಪಡೆಯುವ ರಾಜ್ಯಗಳ ಪಟ್ಟಿಯಲ್ಲಿ (2023–24ನೇ ಸಾಲಿನಲ್ಲಿ) ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ, ನಂತರದ ಸ್ಥಾನದಲ್ಲಿ ಗುಜರಾತ್ ಇವೆ. ಕಂಪನಿಗಳು ಸಿಎಸ್‌ಆರ್ ನಿಧಿಯನ್ನು ನೀಡುವಾಗ ಮುಂದುವರಿದ ರಾಜ್ಯಗಳತ್ತಲೇ ಹೆಚ್ಚು ಗಮನ ಹರಿಸುತ್ತಿವೆ; ನೆರವಿನ ಅಗತ್ಯ ಇರುವ ರಾಜ್ಯಗಳತ್ತ, ಹಿಂದುಳಿದ ಪ್ರದೇಶಗಳತ್ತ, ಸೂಕ್ಷ್ಮ ವಲಯಗಳತ್ತ ಚಿತ್ತ ಹರಿಸುತ್ತಿಲ್ಲ ಎನ್ನುವ ದೂರು ಇದೆ. ಅಂಕಿಅಂಶಗಳೂ ಅದನ್ನೇ ಹೇಳುತ್ತಿವೆ.