ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮುಖ ಸಮಸ್ಯೆಯಾಗಿದ್ದು, ಮಕ್ಕಳ ಕಡಿಮೆ ಎತ್ತರ, ಕಡಿಮೆ ತೂಕ, ಎತ್ತರಕ್ಕೆ ತಕ್ಕಂತೆ ತೂಕ ಇಲ್ಲದೇ ಇರುವುದು ಅಪೌಷ್ಟಿಕತೆಯ ಮುಖ್ಯ ಮಾನದಂಡಗಳಾಗಿವೆ. ಅಪೌಷ್ಟಿಕತೆಗೆ ವಿವಿಧ ಕಾರಣಗಳಿದ್ದರೂ, ಭಾರತದಲ್ಲಿ ಜಾತಿಗಳಿಗೂ ಮಕ್ಕಳ ಅಪೌಷ್ಟಿಕತೆಗೂ ಸಂಬಂಧ ಇದೆ ಎಂದು ಅಧ್ಯಯನವೊಂದು ಹೇಳಿದೆ. ಬಡದೇಶಗಳಾಗಿರುವ ಸಹರಾ ಮರುಭೂಮಿಗೆ ಹೊಂದಿಕೊಂಡ ಆಫ್ರಿಕಾ ದೇಶಗಳಲ್ಲಿನ ಮಕ್ಕಳ ಬೆಳವಣಿಗೆ ಕುಂಠಿತ ಪ್ರಮಾಣಕ್ಕಿಂತಲೂ ಭಾರತದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಕ್ಕಳ ಬೆಳವಣಿಗೆ ಕುಂಠಿತ ಪ್ರಮಾಣವು ಹೆಚ್ಚಿದೆ ಎನ್ನುವುದು ಅಧ್ಯಯನದ ಪ್ರಮುಖ ಅಂಶ

ಭಾರತ ಮತ್ತು ಸಹರಾ ಮರುಭೂಮಿಗೆ ಹೊಂದಿಕೊಂಡ ಆಫ್ರಿಕಾ ದೇಶಗಳಲ್ಲಿ ಜಗತ್ತಿನ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 44ರಷ್ಟು ಮಕ್ಕಳು ಇದ್ದಾರೆ. ಇವೆರಡೂ ಪ್ರದೇಶಗಳಲ್ಲಿಯೇ ಜಗತ್ತಿನ ಶೇ 70ರಷ್ಟು ಬೆಳವಣಿಗೆ ಕುಂಠಿತವಾದ ಮಕ್ಕಳಿದ್ದಾರೆ.

ಮಕ್ಕಳ ಬೆಳವಣಿಗೆ ಕುಂಠಿತ ಆಗಿರುವುದು ಅಪೌಷ್ಟಿಕತೆಯ ಪ್ರಮುಖ ಸೂಚ್ಯಂಕ. ಒಂದು ಮಗು ತನ್ನ ವಯಸ್ಸಿಗೆ ಸಹಜವಾಗಿ ಬೆಳೆಯಬೇಕಾದ ಎತ್ತರಕ್ಕಿಂತ ಕಡಿಮೆ ಇದ್ದರೆ, ಆ ಮಗುವಿನ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಅದನ್ನು ಪೌಷ್ಟಿಕತೆಯ ತೀವ್ರ ಕೊರತೆ ಎಂದೂ ಹೇಳಲಾಗುತ್ತದೆ.

ಅಶೋಕ ವಿಶ್ವವಿದ್ಯಾಲಯದ ಅಶ್ವಿನಿ ದೇಶಪಾಂಡೆ ಮತ್ತು ಮಲೇಷ್ಯಾದ ಮೊನಾಶ್ ವಿಶ್ವವಿದ್ಯಾಲಯದ ರಾಜೇಶ್ ರಾಮಚಂದ್ರನ್ ಅವರು ಭಾರತೀಯ ಮಕ್ಕಳ ಎತ್ತರದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಭಾರತದ ಮಕ್ಕಳು ಸಹರಾ ಮರುಭೂಮಿಗೆ ಹೊಂದಿಕೊಂಡ ಆಫ್ರಿಕಾ ದೇಶಗಳ ಮಕ್ಕಳಿಗಿಂತಲೂ ಕಡಿಮೆ ಎತ್ತರ ಏಕೆ ಇರುತ್ತಾರೆ ಎನ್ನುವುದಕ್ಕೆ ಅವರು ಕಂಡುಕೊಂಡಿರುವ ಉತ್ತರ: ಸಾಮಾಜಿಕ ಅಸ್ತಿತ್ವ, ಅದರಲ್ಲೂ ಮುಖ್ಯವಾಗಿ ಜಾತಿಯು ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆಗೆ ಮುಖ್ಯ ಕಾರಣವಾಗಿದೆ.

ಮಗು ಹುಟ್ಟಿದ ನಂತರದ 1,000 ದಿನಗಳು ಬಹಳ ಮುಖ್ಯವಾಗಿದ್ದು, ಅದನ್ನು ‘ಬಂಗಾರದ ಅವಧಿ’ ಎಂದು ಕರೆಯಲಾಗುತ್ತದೆ. ಎರಡು ವರ್ಷದ ಹೊತ್ತಿಗೆ ಮಗುವಿನ ಶೇ 80ರಷ್ಟು ಮಿದುಳು ಬೆಳವಣಿಗೆ ಆಗುವುದರೊಂದಿಗೆ, ಅದರ ಆರೋಗ್ಯಕರ ಜೀವನಕ್ಕೆ ಅಡಿಪಾಯ ಹಾಕಬೇಕು. ಈ ಅವಧಿಯಲ್ಲಿ ಆರೋಗ್ಯ ಸೇವೆ, ಪೌಷ್ಟಿಕ ಆಹಾರ, ಆರಂಭದ ಕಲಿಕೆ ಮತ್ತು ಉತ್ತಮ ಬೆಳವಣಿಗೆಗೆ ಪೂರಕವಾದ ವಾತಾವರಣ ಸಿಕ್ಕರೆ, ಮಗುವಿನ ಭವಿಷ್ಯ ಉತ್ತಮವಾಗಿರುತ್ತದೆ.

ಹಲವು ವಿಚಾರಗಳಲ್ಲಿ ಭಾರತ ಮತ್ತು ಸಹರಾ ಮರುಭೂಮಿಗೆ ಹೊಂದಿಕೊಂಡ ಆಫ್ರಿಕಾ ದೇಶಗಳ ನಡುವೆ ಸಾಮ್ಯ ಇದೆ. ಎರಡೂ ದೇಶಗಳಲ್ಲಿ ಮಧ್ಯಮ ವರ್ಗ ಶೀಘ್ರವಾಗಿ ಬೆಳೆಯುತ್ತಿದ್ದು, ಯುವಕರ ಸಂಖ್ಯೆ ಹೆಚ್ಚಿದೆ. ಎರಡರಲ್ಲಿಯೂ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಜತೆಗೆ ಬಡತನ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸವಾಲುಗಳೂ ಎರಡೂ ದೇಶಗಳಲ್ಲಿ ಸಮನಾಗಿವೆ. ಜಗತ್ತಿನಲ್ಲಿರುವ ಬಡವರ ಪೈಕಿ ಶೇ 85 ಮಂದಿ ಸಹರಾ ಮರುಭೂಮಿಗೆ ಹೊಂದಿಕೊಂಡ ಆಫ್ರಿಕಾ ದೇಶಗಳು ಮತ್ತು ದಕ್ಷಿಣ ಏಷ್ಯಾದಲ್ಲಿಯೇ (ಭಾರತವನ್ನೂ ಒಳಗೊಂಡಂತೆ) ಇದ್ದಾರೆ ಎಂದು ವಿಶ್ವ ಬ್ಯಾಂಕ್ 2021ರಲ್ಲಿ ಹೇಳಿತ್ತು.

ಸಹರಾ ಮರುಭೂಮಿಗೆ ಹೊಂದಿಕೊಂಡ ಜಿಂಬಾಬ್ವೆ, ಉಗಾಂಡ, ನೈಜೀರಿಯಾ, ರುವಾಂಡಾ, ಮಡಗಾಸ್ಕರ್, ಬುರುಂಡಿ, ಲೈಬೀರಿಯಾ ಮುಂತಾದ 19 ಆಫ್ರಿಕಾ ದೇಶಗಳು ಮತ್ತು ಭಾರತದ ನಡುವಿನ ಇತ್ತೀಚಿನ ಅಂಕಿಅಂಶಗಳನ್ನು ಹೋಲಿಸಿದರೆ, ಹಲವು ಆತಂಕಕಾರಿ ವಿಚಾರಗಳು ತಿಳಿದುಬರುತ್ತವೆ ಎಂದು ವರದಿ ಉಲ್ಲೇಖಿಸಿದೆ. ಅಪೌಷ್ಟಿಕತೆಯ ವಿರುದ್ಧ ಹೋರಾಟದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳು ದಾಪುಗಾಲಿಡುತ್ತಿದ್ದರೂ ಸಹರಾ ಮರುಭೂಮಿಗೆ ಹೊಂದಿಕೊಂಡಿರುವ 19 ರಾಷ್ಟ್ರಗಳಲ್ಲಿ ಮಕ್ಕಳ ಬೆಳವಣಿಗೆ ಕುಂಠಿತ ಪ್ರಮಾಣವು ಶೇ 33.6 ಇದ್ದರೆ, ಭಾರತದ ಮಕ್ಕಳ ಬೆಳವಣಿಗೆ ಕುಂಠಿತ ಪ್ರಮಾಣವು ಶೇ 35.7 ಇದೆ.

ಭಾರತದಲ್ಲಿರುವ ಐದು ವರ್ಷದೊಳಗಿನ 13.75 ಕೋಟಿ ಮಕ್ಕಳ ಪೈಕಿ ಶೇ 35.7ರಷ್ಟು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದು, ಮೂರನೇ ಒಂದರಷ್ಟು ಮಕ್ಕಳು ನಿಗದಿತ ತೂಕಕ್ಕಿಂತ ಕಡಿಮೆ ಇದ್ದಾರೆ. ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಕುಂಠಿತಗೊಂಡಿರುವ ಮಕ್ಕಳ ಸಂಖ್ಯೆ ಶೇ 22.

ಭಾರತದ ವಿವಿಧ ಸಾಮಾಜಿಕ ಹಿನ್ನೆಲೆಯ ಆರು ಗುಂಪುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರ ಪೈಕಿ ಆದಿವಾಸಿಗಳು ಮತ್ತು ದಲಿತರೂ ಸೇರಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳ ಐದು ವರ್ಷದ ಒಳಗಿನ ಮಕ್ಕಳ ಪೈಕಿ ಬೆಳವಣಿಗೆ ಕುಂಠಿತ ಮಕ್ಕಳ ಪ್ರಮಾಣ ಶೇ 40ರಷ್ಟಿದೆ. ಒಬಿಸಿ, ಮುಸ್ಲಿಂ ಮಕ್ಕಳ ಬೆಳವಣಿಗೆ ಕುಂಠಿತ ಪ್ರಮಾಣವೂ ಸಹರಾಗೆ ಹೊಂದಿಕೊಂಡ ಆಫ್ರಿಕಾ ದೇಶಗಳ ಮಕ್ಕಳಿಗಿಂತ ಹೆಚ್ಚು ಇದೆ. ಭಾರತದ ಉನ್ನತ ಜಾತಿಯ ಇದೇ ವಯಸ್ಸಿನ ಮಕ್ಕಳು ಶೇ 27ರಷ್ಟು ಕುಂಠಿತ ಬೆಳವಣಿಗೆ ಹೊಂದಿದ್ದಾರೆ. ಇದು ಸಹರಾಗೆ ಹೊಂದಿಕೊಂಡಿರುವ ಆಪ್ರಿಕಾ ದೇಶಗಳ ಮಕ್ಕಳಿಗಿಂತ ಕಡಿಮೆ ಪ್ರಮಾಣವಾಗಿದೆ. ದೇಶದ ಅಂಚಿನ ಸಮುದಾಯಗಳ ಮಕ್ಕಳು ಪ್ರಬಲ ಜಾತಿಗಳ ಮಕ್ಕಳಿಗಿಂತ ಶೇ 20ರಷ್ಟು ಹೆಚ್ಚು ಕುಂಠಿತ ಬೆಳವಣಿಗೆಯನ್ನು ಅನುಭವಿಸುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನ ಹೇಳಿದೆ.

ಮಗುವಿನ ಬೆಳವಣಿಗೆಗೆ ಪೂರಕವಲ್ಲದ ಅನಾರೋಗ್ಯಕರ ವಾತಾವರಣ ಮತ್ತು ಕಡಿಮೆ ಕ್ಯಾಲೊರಿಗಳ ಲಭ್ಯತೆ ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಗೆ ಪ್ರಮುಖ ಕಾರಣವಾಗಿವೆ. ಎಷ್ಟನೇ ಮಗು, ನೈರ್ಮಲ್ಯ ಪದ್ಧತಿಗಳು, ತಾಯಿಯ ಎತ್ತರ, ಶಿಕ್ಷಣ, ರಕ್ತಹೀನತೆ ಮತ್ತು ಕುಟುಂಬದ ಸಾಮಾಜಿಕ ಆರ್ಥಿಕ ಸ್ಥಿತಿಗಳ ಪರಿಗಣನೆಯ ನಂತರವೂ ಈ ಅಧ್ಯಯನದ ಫಲಿತಾಂಶವು ಮಹತ್ವದ್ದೆನಿಸುತ್ತದೆ.

ಪ್ರಬಲ ಜಾತಿಯ ಮಕ್ಕಳು ಉತ್ತಮ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆ ಪಡೆಯುತ್ತಾರೆ. ಹಾಗಾಗಿ ಅವರ ಬೆಳವಣಿಗೆ ವಯಸ್ಸಿಗೆ ತಕ್ಕಂತೆ ಇರುವುದರಲ್ಲಿ ಆಶ್ಚರ್ಯಕರವಾದುದೇನಿಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ. ಹೀಗಾಗಿ ಭಾರತದಲ್ಲಿ ಪೌಷ್ಟಿಕತೆಗೆ ಸಂಬಂಧಿಸಿದ ನೀತಿ ನಿಯಮಗಳನ್ನು ರೂಪಿಸುವಾಗ ಜಾತಿ, ವರ್ಗಗಳನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕಾದ ಅಗತ್ಯವಿದೆ ಎಂದು ವರದಿ ಪ್ರತಿಪಾದಿಸಿದೆ.

ಕೇಂದ್ರದ ಅಂಕಿ ಅಂಶ ಹೇಳುವುದೇನು?

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಂಕಿ ಅಂಶಗಳು ಕೂಡ ಈ ಅಧ್ಯಯನದಲ್ಲಿ ಕಂಡುಕೊಂಡಿರುವ ವಿಚಾರಗಳನ್ನು ಪುಷ್ಟೀಕರಿಸುತ್ತವೆ.

ಮಕ್ಕಳ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆಯ ಬಗ್ಗೆ ಲೋಕಸಭೆಯ ಈ ವರ್ಷದ ಮುಂಗಾರು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರು 2019–21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್ಎಫ್ಎಚ್ಎಸ್) ವಿವರಗಳ ಆಧಾರದಲ್ಲಿ ಉತ್ತರ ನೀಡಿದ್ದಾರೆ. ಅವರ ಪ್ರಕಾರ, ದೇಶದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೆಳಗಿನ ಶೇ 35.5ರಷ್ಟು ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಶೇ 32.1ರಷ್ಟು ಮಕ್ಕಳು ನಿಗದಿತ ಮಿತಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ಶೇ 19.3ರಷ್ಟು ಮಕ್ಕಳು ಎತ್ತರಕ್ಕೆ ಸಮವಾಗಿ ತೂಕ ಹೊಂದಿಲ್ಲ.

1992–93ರಲ್ಲಿ ನಡೆದಿದ್ದ ಮೊದಲ ಎನ್ಎಫ್ಎಚ್ಎಸ್ ಪ್ರಕಾರ, ಬೆಳವಣಿಗೆ ಕುಂಠಿತಗೊಂಡಿರುವ ನಾಲ್ಕು ವರ್ಷಕ್ಕಿಂತ ಕಡಿಮೆ ಮಕ್ಕಳ ಪ್ರಮಾಣ ಶೇ 52ರಷ್ಟಿತ್ತು. ಶೇ 53.4ರಷ್ಟು ಮಕ್ಕಳ ತೂಕ ನಿಗದಿತ ಮಿತಿಗಿಂತ ಕಡಿಮೆ ಇತ್ತು. ಶೇ 17.5ರಷ್ಟು ಮಕ್ಕಳು ತಮ್ಮ ಎತ್ತರಕ್ಕೆ ಸಮನಾದ ತೂಕ ಹೊಂದಿರಲಿಲ್ಲ.

ರಾಜ್ಯಗಳಲ್ಲಿ: ದೇಶದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಬೆಳವಣಿಗೆ ಕುಂಠಿತಗೊಂಡಿರುವ ಮಕ್ಕಳ ಪ್ರಮಾಣ(6 ವರ್ಷದೊಳಗಿನ) ಲಕ್ಷದ್ವೀಪದಲ್ಲಿ ಅತಿ ಹೆಚ್ಚಿದೆ (ಶೇ 46.29). ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ (ಶೇ 45.13), ಮಹಾರಾಷ್ಟ್ರ (ಶೇ 42.54) ಮೂರನೇ ಸ್ಥಾನದಲ್ಲಿದೆ. ಗೋವಾ ರಾಜ್ಯದಲ್ಲಿ ಅತಿ ಕಡಿಮೆ ಅಂದರೆ ಶೇ 5.91ರಷ್ಟು ಮಕ್ಕಳು ಮಾತ್ರ ಕುಂಠಿತ ಬೆಳವಣಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಣಿಪುರದಲ್ಲಿ ಈ ಪ್ರಮಾಣ ಶೇ 11.65 ರಷ್ಟಿದೆ. ಸಿಕ್ಕಿಂ, ಜಮ್ಮು– ಕಾಶ್ಮೀರ ಹಾಗೂ ಲಡಾಖ್ನಲ್ಲಿ ಕ್ರಮವಾಗಿ ಶೇ 12.04,ಶೇ 12.41 ಮತ್ತು 12.62 ರಷ್ಟಿದೆ.

ಆಧಾರ: ‘ದಿ ಹಿಡನ್ ಡಿವೈಡ್: ಎ ನೋಟ್ ಆನ್ ದಿ ಸಿಗ್ನಿಫಿಕೆನ್ಸ್ ಆಫ್ ವಿದಿನ್–ಇಂಡಿಯಾ ಡಿಸ್ಪ್ಯಾರಿಟೀಸ್’ ವರದಿ, ಲೋಕಸಭೆಯಲ್ಲಿ ಸಚಿವರ ಉತ್ತರ

ಕರ್ನಾಟಕದಲ್ಲಿ

ರಾಜ್ಯದಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 35.86ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ 17.88ರಷ್ಟು ಮಕ್ಕಳು ನಿಗದಿತ ಮಿತಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ಶೇ 3.9ರಷ್ಟು ಮಕ್ಕಳು (0–5 ವರ್ಷದೊಳಗಿನ) ಎತ್ತರಕ್ಕೆ ಸಮನಾದ ತೂಕ ಹೊಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.