ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT
ವಿದೇಶ ವಿದ್ಯಮಾನ: ಡ್ರಗ್ಸ್‌ ಹುತ್ತವ ಬಡಿದು ಹುಯಿಲೆಬ್ಬಿಸಿದ ಮೆಕ್ಸಿಕೊ
ವಿದೇಶ ವಿದ್ಯಮಾನ: ಡ್ರಗ್ಸ್‌ ಹುತ್ತವ ಬಡಿದು ಹುಯಿಲೆಬ್ಬಿಸಿದ ಮೆಕ್ಸಿಕೊ
ಪಾತಕಿ ಹತ್ಯೆ ನಂತರ ದೇಶದ ಹಲವೆಡೆ ಹಿಂಸಾಚಾರ; ಮಾದಕ ವಸ್ತು ಕಳ್ಳಸಾಗಣೆ ಕೂಟದ ಹಿಂದಿದೆ ವ್ಯವಸ್ಥಿತ ಜಾಲ
ಫಾಲೋ ಮಾಡಿ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
Comments
ಮೆಕ್ಸಿಕೊದಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ಕೂಟವೊಂದರ ಮುಖ್ಯಸ್ಥನನ್ನು ಸೇನೆ ಹೊಡೆದುರುಳಿಸಿದ ಬೆನ್ನಲ್ಲೆ ವ್ಯಾಪಕ ಹಿಂಸಾಚಾರ ಹುಟ್ಟಿಕೊಂಡಿದೆ. ಗುಂಪಿನ ಮುಖ್ಯಸ್ಥನನ್ನು ಕೊಂದರೆ, ಜಾಲದ ಅಂತ್ಯವಲ್ಲ, ಹೊಸ ಜಾಲವೊಂದರ ಹುಟ್ಟಿನ ಆರಂಭ ಎನ್ನುವುದು ಅಲ್ಲಿ ಹೊಸ ವಿಚಾರವೇನಲ್ಲ. ಹಲವು ಹಂತಗಳ, ಹಲವು ಗುಂಪುಗಳ, ಹಲವು ಪ್ರದೇಶಗಳನ್ನು ಆಧರಿಸಿದ, ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಲೆ ಕಂಡುಕೊಂಡಿರುವ ಡ್ರಗ್ಸ್ ಕಳ್ಳಸಾಗಣೆಯ ಕೂಟಗಳ ಹಿಂದೆ ಅಲ್ಲಿನ ರಾಜಕಾರಣಿಗಳ, ಅಧಿಕಾರಿಗಳ, ಉದ್ಯಮಿಗಳ ಪಾಲೂ ಇದೆ ಎನ್ನಲಾಗುತ್ತಿದೆ
ಎಲ್ ಮೆಂಚೊ

ಎಲ್ ಮೆಂಚೊ

ಫಿಫಾ ವಿಶ್ವಕಪ್‌
ಫಿಫಾ ವಿಶ್ವಕಪ್‌
ರಾಜಕೀಯದ ಪಾತ್ರ ಏನು?
ನಿಜವಾದ ಸಮಸ್ಯೆ ಇರುವುದೇ ಇಲ್ಲಿ. ಭಯ ಹುಟ್ಟಿಸುವ ಕಾರ್ಯಶೈಲಿಯನ್ನು ಅಳವಡಿಸಿಕೊಂಡಿರುವ ಅವುಗಳಿಂದಲೇ ಕುಖ್ಯಾತಿ ಪಡೆದಿರುವ ಕೂಟಗಳು ವಿವಿಧ ತಂತ್ರಗಳ ಮೂಲಕ ಉದ್ಯಮಿಗಳು ರಾಜಕಾರಣಿಗಳು ಅಧಿಕಾರಿಗಳನ್ನೂ ತಮ್ಮ ಜಾಲದ ಭಾಗವನ್ನಾಗಿ ಮಾಡಿಕೊಂಡಿವೆ. ದೇಶದ ಆಡಳಿತದ ಪ್ರಮುಖ ಅಂಗಗಳಲ್ಲಿ ಕೂಟಗಳ ಹಿತಾಸಕ್ತಿ ರಕ್ಷಿಸುವ ಜನರು ಇದ್ದಾರೆ. ಅಂಥ ವ್ಯವಸ್ಥೆಯನ್ನು ನಾಶ ಮಾಡದೇ ಕೇವಲ ಕೂಟದ ಮುಖ್ಯಸ್ಥನನ್ನು ಕೊಲ್ಲುವುದರಿಂದ ಯಾವ ಪ್ರಯೋಜನವೂ ಇಲ್ಲ ಎನ್ನುವುದು ಹಲವರ ವಿಶ್ಲೇಷಣೆ.
ಮೆಕ್ಸಿಕೊದ ಜಾಲಿಸ್ಕೊ ರಾಜ್ಯದ ಪ್ಯೂರ್ಟೊ ವೆಲ್ಲಟ್ರಾ ಪ್ರದೇಶದಲ್ಲಿನ ಸೇತುವೆಯೊಂದರಲ್ಲಿ ಬೆಂಕಿಗೆ ಆಹುತಿಯಾದ ವಾಹನಗಳ ಅವಶೇಷಗಳು
ಮೆಕ್ಸಿಕೊದ ಜಾಲಿಸ್ಕೊ ರಾಜ್ಯದ ಪ್ಯೂರ್ಟೊ ವೆಲ್ಲಟ್ರಾ ಪ್ರದೇಶದಲ್ಲಿನ ಸೇತುವೆಯೊಂದರಲ್ಲಿ ಬೆಂಕಿಗೆ ಆಹುತಿಯಾದ ವಾಹನಗಳ ಅವಶೇಷಗಳು
ಆಧಾರ: ರಾಯಿಟರ್ಸ್, ದಿ ನ್ಯೂಯಾರ್ಕ್ ಟೈಮ್ಸ್, ಬಿಬಿಸಿ, ಎಪಿ, ಅಮೆರಿಕದ ವಿದೇಶಾಂಗ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT