ಒಲಿಂಪಿಯಾಡ್‌ನಲ್ಲೂ ಪ್ರಬಲವಾಗಿದ್ದ ರಷ್ಯಾ
ಎರಡು ವರ್ಷಗಳಿಗೊಮ್ಮೆ ನಡೆಯುವ ಚೆಸ್ ಒಲಿಂಪಿಯಾಡ್‌ನ ಓಪನ್ ವಿಭಾಗದಲ್ಲಿ ಸೋವಿಯತ್ ರಷ್ಯಾ ಒಟ್ಟು 18 ಬಾರಿ ಚಿನ್ನ ಗೆದ್ದಿದೆ. ಇದರಲ್ಲಿ 1952ರಿಂದ 1974ರವರೆಗೆ ಸತತವಾಗಿ 12 ಒಲಿಂಪಿಯಾಡ್ ಚಿನ್ನ ಗೆದ್ದಿದ್ದು ಒಂದು ಕಾಲದ ಅದರ ಪ್ರಾಬಲ್ಯಕ್ಕೆ ಪುರಾವೆ. 1980ರಿಂದ 1990ರವರೆಗೆ ಸತತವಾಗಿ ಆರು ಬಾರಿ ಅದು ಒಲಿಂಪಿಯಾಡ್‌ನಲ್ಲಿ ಚಾಂಪಿಯನ್ ಆಗಿ ಮೆರೆದಿತ್ತು. 1990ರಲ್ಲಿ ಸೋವಿಯತ್ ಒಕ್ಕೂಟ ಒಡೆದುಹೋದ ನಂತರ ರಷ್ಯಾ ತಂಡ ಸ್ವತಂತ್ರವಾಗಿ ಐದು ಬಾರಿ (1992 ರಿಂದ 2000) ಚಿನ್ನ ಜಯಿಸಿದೆ. ಸೋವಿಯತ್ ಒಕ್ಕೂಟದಿಂದ ಬೇರ್ಪಟ್ಟ ಅರ್ಮೇನಿಯಾ ಮೂರು ಬಾರಿ, ಉಕ್ರೇನ್ ಒಮ್ಮೆ, ಉಜ್ಬೇಕಿಸ್ತಾನ ಒಮ್ಮೆ (2022, ಭಾರತದಲ್ಲಿ) ಚಿನ್ನ ಗೆದ್ದಿವೆ.