ರಾಜ್ಯದಲ್ಲಿ ಬೆಂಗಳೂರು ಮಾದಕ ವಸ್ತುಗಳ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮಂಗಳೂರು ಎರಡನೇ ಸ್ಥಾನದಲ್ಲಿದೆ. ಮೈಸೂರು ಮತ್ತಿತರ ನಗರಗಳಲ್ಲಿಯೂ ಡ್ರಗ್ಸ್ ಸಂಸ್ಕೃತಿ ಗಮನಾರ್ಹ ಪ್ರಮಾಣದಲ್ಲಿದೆ.
ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗೆ (ಎಎನ್‌ಟಿಎಫ್) ಮುಖ್ಯಸ್ಥರ ನೇಮಕ ಆಗಿರಲಿಲ್ಲ. ಡಿ.31ರಂದು ಮುಖ್ಯಸ್ಥರನ್ನು ನೇಮಿಸಲಾಗಿದೆ. ಈ ವರ್ಷ ಡ್ರಗ್ಸ್ ವಿರುದ್ಧ ಸಮರ ಸಾರಿದ್ದೇವೆ. ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ತ್ವರಿತವಾಗಿ ಕ್ರಮ ತೆಗೆದುಕೊಳ್ಳವಂತೆಯೂ ಎಲ್ಲ ಪೊಲೀಸ್ ಅಧಿಕಾರಿಗಳಿಗೂ ಸೂಚಿಸಲಾಗಿದೆ
–ಡಾ.ಎಂ.ಎ.ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕ
ಇತ್ತೀಚೆಗೆ ಎಂಡಿಎಂಎನಂತಹ ಕೃತಕ ಡ್ರಗ್ ಹಾವಳಿ ಜಾಸ್ತಿ ಆಗುತ್ತಿದೆ. ಕರಾವಳಿಯಲ್ಲಿ ಇದುವರೆಗೆ ಕೃತಕ ಡ್ರಗ್ ತಯಾರಿಸಿದ ಪ್ರಕರಣ ವರದಿಯಾಗಿಲ್ಲ. ಇಂತಹ ಡ್ರಗ್ ಹೆಚ್ಚಾಗಿ ಮುಂಬೈ ಹಾಗೂ ಬೆಂಗಳೂರಿನಿಂದ ಇಲ್ಲಿಗೆ ಪೂರೈಕೆ ಆಗುತ್ತಿದೆ. ಕೇರಳದ ಗಡಿ ಭಾಗದ ಮೂಲಕವೂ ಮಾದಕ ಪದಾರ್ಥ ಕಳ್ಳಸಾಗಣೆಯಾಗುತ್ತಿದೆ. ಡ್ರಗ್ ಕಳ್ಳಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿ ಎರಡು ದಿನಕ್ಕೆ ಒಂದು ಪ್ರಕರಣವನ್ನಾದರೂ ಭೇದಿಸುತ್ತಿದ್ದೇವೆ.
–ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್.,ಮಂಗಳೂರು ಪೊಲೀಸ್ ಕಮಿಷನರ್
ರಾಜ್ಯದ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಆರೋಪಿಗಳು, ಸ್ಥಳೀಯರಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ಬೇರೆ ರಾಜ್ಯಗಳಿಗೆ ವ್ಯಾಪಾರಕ್ಕೆ ತೆರಳುವವರು ಬರುವಾಗ ಮಾದಕ ವಸ್ತು ತಂದು, ಒಂದೆಡೆ ಸಂಗ್ರಹಿಸುತ್ತಾರೆ. ಹುಬ್ಬಳ್ಳಿಯಿಂದ ಕರಾವಳಿ, ಶಿವಮೊಗ್ಗ ಭಾಗಕ್ಕೆ ಬಸ್‌ಗಳಲ್ಲಿ ಔಷಧ ಹಾಗೂ ಇತರ ವಸ್ತುಗಳ ಪಾರ್ಸೆಲ್ ನೆಪದಲ್ಲಿ ಸಾಗಾಟ ಮಾಡುತ್ತಾರೆ. ವಿದ್ಯಾರ್ಥಿಗಳೇ ಇವರ ಗುರಿ