ಬುಧವಾರ, 12 ನವೆಂಬರ್ 2025
×
ADVERTISEMENT
ಆಳ ಅಗಲ| ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು
ಆಳ ಅಗಲ| ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು
ಫಾಲೋ ಮಾಡಿ
Published 12 ನವೆಂಬರ್ 2025, 19:30 IST
Last Updated 12 ನವೆಂಬರ್ 2025, 19:30 IST
Comments
ದೆಹಲಿ ಕಾರು ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಐವರು ವೈದ್ಯರನ್ನು ಬಂಧಿಸಿದ ಬಳಿಕ ‘ವೈಟ್‌ ಕಾಲರ್‌ ಭಯೋತ್ಪಾದನೆ’ಯ ಚರ್ಚೆ ಆರಂಭವಾಗಿದೆ. ವೃತ್ತಿಪರ ಶಿಕ್ಷಣ ಅಥವಾ ಉನ್ನತ ಶಿಕ್ಷಣ ಪಡೆದಿರುವವರು ಭಯೋತ್ಪಾದನೆಯಲ್ಲಿ ತೊಡಗಿದರೆ ಅದನ್ನು ‘ವೈಟ್‌ ಕಾಲರ್‌ ಭಯೋತ್ಪಾದನೆ’ ಎನ್ನಲಾಗುತ್ತದೆ. ಧಾರ್ಮಿಕ ಮೂಲಭೂತವಾದಿ ಗಳಿಂದ ‘ಬ್ರೈನ್‌ ವಾಶ್‌’ಗೆ ಒಳಗಾದ ಬಡವರು, ಅನಕ್ಷರಸ್ಥರು ಉಗ್ರರಾಗಿ ಬದಲಾಗುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಈಗ ಅದು ಬದಲಾಗಿದೆ. ಉನ್ನತ ಶಿಕ್ಷಣ ಪಡೆದು, ಉತ್ತಮ ಉದ್ಯೋಗದಲ್ಲಿ ಇರುವವರು ಕೂಡ ಉಗ್ರರಾಗುತ್ತಿದ್ದಾರೆ.
‘ವೈಟ್‌ ಕಾಲರ್‌ ಅಪರಾಧ’ದಿಂದ ಪ್ರೇರಣೆ
‘ವೈಟ್ ಕಾಲರ್‌ ಭಯೋತ್ಪಾದನೆ’ ಪರಿಕಲ್ಪನೆಯು ‘ವೈಟ್‌ ಕಾಲರ್‌ ಅಪರಾಧ’ ಎಂಬುದರಿಂದ ಪ್ರೇರಿತವಾದುದು. 1939ರಿಂದಲೇ ಈ ಪದ ಚಾಲ್ತಿಯಲ್ಲಿದೆ. ಅಮೆರಿಕದ ಎಫ್‌ಬಿಐ ಪ್ರಕಾರ, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ನಡೆಸುವ ವಿವಿಧ ರೀತಿಯ ವಂಚನೆ, ಹಗರಣಗಳನ್ನು ‘ವೈಟ್‌ ಕಾಲರ್‌ ಅಪರಾಧ’ ಎಂದು ಕರೆಯಲಾಗುತ್ತದೆ. ಈ ಅಪರಾಧಗಳು ಹಿಂಸಾ ರೂಪದ್ದಲ್ಲ. ಸಾರ್ವಜನಿಕ ಭ್ರಷ್ಟಾಚಾರ, ಆರೋಗ್ಯ ಕ್ಷೇತ್ರದಲ್ಲಿನ ಹಗರಣ, ಸಾಲ ಅವ್ಯವಹಾರ, ಷೇರು ಹಗರಣ, ಹಣದ ಅಕ್ರಮ ವರ್ಗಾವಣೆ ಮುಂತಾದ ಅಪರಾಧ ಕೃತ್ಯಗಳು ‘ವೈಟ್‌ ಕಾಲರ್‌’ ಅಪರಾಧಗಳ ಪಟ್ಟಿಯಲ್ಲಿವೆ.   
ವೈದ್ಯರ ನೇಮಕಾತಿ ಏಕೆ?
ಕೆಲವು ವರ್ಷಗಳವರೆಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಎಂಜಿನಿಯರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ವರದಿಯಾಗುತ್ತಿತ್ತು. ಇತ್ತೀಚೆಗೆ ವೈದ್ಯರು ಕೂಡ ಈ ಜಾಲದ ಭಾಗವಾಗಿರುವುದು ಕಂಡುಬರುತ್ತಿದೆ. ಸಂಘಟನೆಗಳು ಎಂಜಿನಿಯರ್‌ಗಳ ಜೊತೆಗೆ ವೈದ್ಯರನ್ನು ನೇಮಕಾತಿ ಮಾಡಲು ಮುಂದಾಗುತ್ತಿವೆ. ವೈದ್ಯರು ಹೆಚ್ಚು ಜ್ಞಾನ, ಕೌಶಲ ಹೊಂದಿರುತ್ತಾರೆ, ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಸಾಮಾಜಿಕವಾಗಿ ಹೆಚ್ಚು ಜನರೊಂದಿಗೆ ತೊಡಗಿಸಿಕೊಂಡಿರುತ್ತಾರೆ. ಸಮಾಜದಲ್ಲಿ ಗೌರವವನ್ನೂ ಹೊಂದಿರುತ್ತಾರೆ. ಅವರು ನಡೆಸುವ ಚಟುವಟಿಕೆಗಳ ಬಗ್ಗೆ ಜನರಿಗೆ ಯಾವುದೇ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಭಯೋತ್ಪಾದನಾ ಜಾಲಗಳು ವೈದ್ಯರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿವೆ ಎಂಬುದು ತಜ್ಞರ ವಾದ.
ಆಧಾರ: ಪಿಟಿಐ, ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್ ವರದಿ, ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗ, ದಿ ಗಾರ್ಡಿಯನ್, ಎಫ್‌ಬಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT