ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನಿರೀಕ್ಷೆಯಂತೆ ಭಾರತ ಮತ್ತು ಇಸ್ರೇಲ್ ನಡುವೆ ಕೃತಕ ಬುದ್ಧಿಮತ್ತೆ (AI), ರಕ್ಷಣೆ ಮತ್ತು ಕೃಷಿ ಒಳಗೊಂಡ 16 ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ.

ಪ್ರಮುಖವಾಗಿ ರಕ್ಷಣಾ ವಲಯದಲ್ಲಿ ಎರಡೂ ದೇಶಗಳು ಜಂಟಿಯಾಗಿ ಆಯುಧಗಳ ಅಭಿವೃದ್ಧಿ, ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಬದ್ಧವಾಗಿವೆ ಎಂದು ಒಪ್ಪಿಗೆ ಸೂಚಿಸಿವೆ. ಇದರ ಮುಂದಿನ ಮಾತುಕತೆ ಮೇ ತಿಂಗಳಲ್ಲಿ ನಡೆಯಲಿವೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
.ಇಸ್ರೇಲ್ ಮಾದರಿಯಂತೆ ‘ಐರನ್ ಡೋಮ್’ ರೂಪಿಸಲು ಸಿದ್ಧತೆ: ಟ್ರಂಪ್.ಭಾರತ–ಇಸ್ರೇಲ್: ವ್ಯಾಪಾರ, ಕೃಷಿ, ಡಿಜಿಟಲ್ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ.
ವಾಯುದಾಳಿಯ ರಕ್ಷಾ ಕವಚ ಎಂದೇ ಕರೆಯಲಾಗುವ ಐರನ್ ಡೋಮ್ ಮತ್ತು ಐರನ್ ಬೀಮ್ಗಳ ಖರೀದಿ ಮತ್ತು ತ್ರಂತ್ರಜ್ಞಾನ ವರ್ಗಾವಣೆಯ ಕುರಿತು ಸಾಕಷ್ಟು ನಿರೀಕ್ಷೆಗಳಿದ್ದವು, ಈ ಒಪ್ಪಂದಕ್ಕೆ ಸಹಿ ಬೀಳುವ ಮಾತುಗಳು ಕೇಳಿಬಂದಿತ್ತು. ಆದರೆ ಯಾವುದೇ ಕ್ಷಿಪಣಿಯ ಹೆಸರನ್ನು ಉಲ್ಲೇಖಿಸದೆ ರಕ್ಷಣೆಯಲ್ಲಿ ಸಹಭಾಗಿತ್ವ ಇರಲಿದೆ ಎಂದು ಎರಡೂ ದೇಶಗಳು ಹೇಳಿವೆ.

ಅಷ್ಟಕ್ಕೂ ಭಾರತ ಈ ಎರಡು ಆಯುಧಗಳ ಕಡೆ ಹೆಚ್ಚು ಒಲವು ತೋರಲು ಕಾರಣವೇನು? ಇವುಗಳ ಶಕ್ತಿ ಸಾಮರ್ಥ್ಯ ಏನು? ಇವು ಭಾರತಕ್ಕೆ ಹೇಗೆ ಸಹಾಯಕವಾಗಿವೆ ಎಂಬ ಮಾಹಿತಿ ಇಲ್ಲಿದೆ.

ಸದ್ಯ ಭಾರತದಲ್ಲಿ ಇಸ್ರೇಲ್ ನಿರ್ಮಿತ ಐರನ್ ಡೋಮ್ಗಳ ವ್ಯವಸ್ಥೆ ಇಲ್ಲ. ಬದಲಾಗಿ ರಷ್ಯಾದ ಎಸ್–400, ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿ ವ್ಯವಸ್ಥೆ, ಬರಾಕ್ ಕ್ಷಿಪಣಿ ವ್ಯವಸ್ಥೆ ಮತ್ತು ಇತರೆ ಸ್ವದೇಶಿ ನಿರ್ಮಿತ ರಕ್ಷಾ ಕವಚಗಳು ಭಾರತದ ಬಳಿ ಇವೆ.

ಇವುಗಳ ಜೊತೆಗೆ ಐರನ್ ಡೋಮ್ ಮತ್ತು ಬೀಮ್ ಸೇರಿಸಿಕೊಂಡರೆ, ಆಕಾಶದಲ್ಲಿ ಭಾರತದ ಚಕ್ರವ್ಯೂಹ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ರಕ್ಷಣಾ ತಜ್ಞರು ಹೇಳುತ್ತಾರೆ.

ಆಪರೇಷನ್ ಸಿಂಧೂರ ಸಂಧರ್ಭದಲ್ಲಿ ಪಾಕಿಸ್ತಾನದ ಡ್ರೋನ್ ಹಾಗೂ ಕ್ಷೀಪಣಿಗಳ ದಾಳಿಯನ್ನು ಎದುರಿಸುವಲ್ಲಿ ಎಸ್–400 ಹಾಗೂ ಸ್ವದೇಶಿ ನಿರ್ಮಿತ ಕ್ಷಿಪಣಿಗಳು ನಿರ್ಣಾಯಕ ಪಾತ್ರವಹಿಸಿದ್ದವು. ಆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಶತ್ರುಗಳ ದಾಳಿಯನ್ನು ಎದುರಿಸಲು ನಮ್ಮ ವಾಯುಪಡೆಗೆ ಇಸ್ರೇಲ್ನ ಐರನ್ ಡೋಮ್ ಮತ್ತು ಐರನ್ ಬೀಮ್ಗಳ ಅಗತ್ಯವಿದೆ ಎಂಬುದು ತಜ್ಞರ ಅಭಿಪ್ರಾಯ.

ಕಡಿಮೆ ಖರ್ಚು ನಿಖರ ಗುರಿ

ಎಸ್ 400, ಐರನ್ ಡೋಮ್ ಬಳಸಿ ಶತ್ರುಗಳ ಮೇಲೆ ದಾಳಿ ನಡೆಸಲು ಅಧಿಕ ಹಣ ವೆಚ್ಚವಾಗುತ್ತದೆ. ಸಣ್ಣ ಡ್ರೋನ್ಗಳನ್ನು ಹೊಡೆದುರುಳಿಸಲು ದುಬಾರಿ ಮೊತ್ತ ವೆಚ್ಚಮಾಡುವುದರಿಂದ ಆರ್ಥಿಕ ಹೊರೆ ಉಂಟಾಗುತ್ತದೆ. ಐರನ್ ಡೋಮ್ನ ಒಂದು ಕ್ಷಿಪಣಿಯ ಬೆಲೆ ಸುಮಾರು 40,000 ದಿಂದ 60,000 ಡಾಲರ್ ಇದೆ. ಅಂದರೆ ಸುಮಾರು ₹33 ಲಕ್ಷದಿಂದ ₹50 ಲಕ್ಷದಷ್ಟು.

ಆದರೆ ಐರನ್ ಬೀಮ್ ಮೂಲಕ ಕೇವಲ ₹250 ರಿಂದ ₹300 ಗಳಲ್ಲಿ ಒಂದು ಬಾರಿ ದಾಳಿ ಮಾಡಬಹುದು. ಈಗಾಗಿ ಭಾರತ ಐರನ್ ಬೀಮ್ಕಡೆಗೆ ಹೆಚ್ಚು ಒಲವು ತೋರುತ್ತಿದೆ.

ಐರನ್ ಡೋಮ್ ಶಕ್ತಿ ಏನು?

ಐರನ್ ಡೋಮ್ ವಾಯು ಮಾರ್ಗದ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯವಿರುವ ರಕ್ಷಾಕವಚವಾಗಿದೆ. ಮುಖ್ಯವಾಗಿ ಕ್ಷಿಪಣಿ, ಡ್ರೋನ್, ಫಿರಂಗಿ ಶೆಲ್ಗಳು ಹಾಗೂ ಸಣ್ಣ ವಿಮಾನವನ್ನು ಪತ್ತೆಹಚ್ಚುವ ಮತ್ತು ಪ್ರತಿ ದಾಳಿ ನಡೆಸುವ ಸಾಮರ್ಥ್ಯವಿದೆ. ಇದರಲ್ಲಿ ರಾಡಾರ್ ನಿರ್ದೇಶಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಇದೆ. ಇದರ ವ್ಯಾಪ್ತಿ 4 ಕಿ.ಮೀ ನಿಂದ 70 ಕಿ.ಮೀ. ಇದ್ದು, ಶತ್ರುಗಳ ರಾಕೆಟ್ ಮತ್ತು ಕ್ಷಿಪಣಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಕೆಲವೇ ಸೆಕೆಂಡುಗಳಲ್ಲಿ ಶತ್ರುಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವಿದ್ದು, ಪ್ರತಿ ಲಾಂಚರ್ನಲ್ಲಿ 20 ಕ್ಷಿಪಣಿಗಳಿರುತ್ತವೆ. ಇಸ್ರೇಲ್ ಐರನ್ ಡೋಮ್ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಲು ಒಪ್ಪಿಗೆ ನೀಡಿದರೆ, ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿ ಭಾರತದಲ್ಲಿ ತಯಾರಾಗುವ ಸಾಧ್ಯತೆಯೂ ಇದೆ. ಇದು ಭಾರತಕ್ಕೆ ಬಲ ತಂದುಕೊಡಲಿದೆ.

ಐರನ್ ಬೀಮ್ ಕಡೆ ಒಲವು

ಭಾರತವು ಆಧುನಿಕ ಯದ್ಧ ಉಪಕರಣವಾದ ಐರನ್ ಬೀಮ್ ಖರೀದಿಗೆ ಹೆಚ್ಚು ಒಲವು ತೋರುತ್ತಿದೆ. ಲೇಸರ್ ಆಧಾರಿತ ವ್ಯವಸ್ಥೆ ಹೊಂದಿರುವ ಐರನ್ ಬೀಮ್ ಖರೀದಿ ಹಾಗೂ ತಂತ್ರಜ್ಞಾನ ವರ್ಗಾವಣೆಗೆ ಆಸಕ್ತಿ ತೋರಿದೆ. ಇದು ಡ್ರೋನ್, ರಾಕೆಟ್, ಮಧ್ಯಮ ಶ್ರೇಣಿಯ ಕ್ಷಿಪಣಿಗಳಂತಹ ವೈಮಾನಿಕ ಬೆದರಿಕೆಗಳನ್ನು ಆಕಾಶದಲ್ಲಿ ಲೇಸರ್ ಸಹಾಯದಿಂದ ನಾಶಪಡಿಸುತ್ತದೆ.

ಐರನ್ ಬೀಮ್ ವಿಶ್ವದ ಮೊದಲ ಲೇಸರ್ ಆಧಾರಿತ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಇದು ಐರನ್ ಡೋಮ್ಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಕಡಿಮೆ ವೆಚ್ಚದಲ್ಲಿ ಶತ್ರುಗಳ ರಾಕೆಟ್, ಕ್ಷೀಪಣಿ ಹಾಗೂ ಡ್ರೋನ್ಗಳನ್ನು ನಾಶಪಡಿಸುತ್ತದೆ. ಐರನ್ ಡೋಮ್ಗೆ ಹೋಲಿಸಿದರೆ, ಇದರ ಬೆಲೆ ತುಂಬಾ ಕಡಿಮೆ. ಇದರಲ್ಲಿ 100 ಕಿಲೋ ವ್ಯಾಟ್ ಸಾಮರ್ಥ್ಯದ ಶಕ್ತಿಯುತ ಲೇಸರ್ ಕಿರಣವನ್ನು ಗುರಿಯ ಮೇಲೆ ಕೇಂದ್ರೀಕರಿಸಿ ಅದನ್ನು ಸೆಕೆಂಡುಗಳಲ್ಲಿ ಸುಟ್ಟು ಹಾಕುತ್ತದೆ. 7 ರಿಂದ 10 ಕಿ.ಮೀ ದೂರದವರೆಗಿನ ಗುರಿಗಳನ್ನು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಸದ್ಯ ಇದರ ತಂತ್ರಜ್ಞಾನ ವರ್ಗಾವಣೆಯಾಗುವ ನಿರೀಕ್ಷೆಗಳಿವೆ.

ಭಾರತಕ್ಕಾಗುವ ಲಾಭಗಳೇನು?

ಒಂದುವೇಳೆ ಇಸ್ರೇಲ್ ತಂತ್ರಜ್ಞಾನ ವರ್ಗಾವಣೆಗೆ ಒಪ್ಪಿಗೆ ನೀಡಿದರೆ, ಭಾರತ ಮತ್ತು ಇಸ್ರೇಲ್ ನಡುವಿನ ರಕ್ಷಣಾ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲಿವೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಇಸ್ರೇಲ್ ಸಹಭಾಗಿತ್ವದಲ್ಲಿ ಐರನ್ ಡೋಮ್ ಸೇರಿದಂತೆ ಇತರೆ ಯುದ್ದ ಉಪಕರಣಗಳು ಭಾರತದಲ್ಲಿಯೇ ತಯಾರಾಗಲಿವೆ.

ಭಾರತವು ಚೀನಾ ಮತ್ತ ಪಾಕಿಸ್ತಾನದ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಲಿದೆ.

ಆಧುನಿಕ ಯುದ್ಧ ನೀತಿಯ ಭಾಗವಾಗಿರುವ ಡ್ರೋನ್ ದಾಳಿಯನ್ನು ಎದುರಿಸಲು ಸಹಕಾರಿಯಾಗಲಿದೆ. ಇವುಗಳ ವೆಚ್ಚ ಕೂಡ ಕಡಿಮೆ.

ಭಾರತವು ಈಗಾಗಲೇ ಹೊಂದಿರುವ S-400 ಮತ್ತು ಆಕಾಶ್ ಕ್ಷಿಪಣಿ ವ್ಯವಸ್ಥೆಗಳೊಂದಿಗೆ ಇವು ಸೇರಿಕೊಂಡರೆ, ಭಾರತದ ವಾಯುಗಡಿ ಇನ್ನಷ್ಟು ಬಲಿಷ್ಟವಾಗಲಿದೆ