ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಾತರ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 1978ರಲ್ಲಿ ನಡೆದ ಉಪಚುನಾವಣೆ ಇಂದಿರಾ ಗಾಂಧಿ ಅವರಿಗೆ ಭಾರತದ ರಾಜಕಾರಣದಲ್ಲಿ ಮರುಜನ್ಮ ನೀಡಿತು. ತುರ್ತುಪರಿಸ್ಥಿತಿಯ ಬಳಿಕ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೀನಾಯ ಸೋಲಾಗಿತ್ತು. ಪಕ್ಷದ ಅಧ್ಯಕ್ಷೆಯಾಗಿದ್ದ ಇಂದಿರಾ ಅವರು ರಾಯಬರೇಲಿಯಲ್ಲಿ ಸೋತಿದ್ದರು. 1977ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಡಿ.ಬಿ. ಚಂದ್ರೇಗೌಡ ಗೆದ್ದಿದ್ದರು. ಇಂದಿರಾ ಅವರಿಗಾಗಿ ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟರು. ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದ ಉಪ‍ಚುನಾವಣೆಯಲ್ಲಿ ಇಂದಿರಾ ಗೆದ್ದರು. ಆ ದಿನಗಳಲ್ಲಿ ಈಗಿನಂತೆ ಕ್ಷಣ ಕ್ಷಣದ ಮಾಹಿತಿ ನೀಡುವ ವ್ಯವಸ್ಥೆ ಎಲ್ಲಿಯೂ ಇರಲಿಲ್ಲ. ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶ ತಿಳಿಯಲು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ‘ಪ್ರಜಾವಾಣಿ’ ಕಚೇರಿಯ ಮುಂದೆ ಸೇರಿದ್ದ ಜನಸಮೂಹ.
Published : 14 ಮಾರ್ಚ್ 2019, 19:18 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT