ಭಾರದ ಉಪಗ್ರಹ ಹೊತ್ತು ಡಿಸೆಂಬರ್ನಲ್ಲಿ ನಭಕ್ಕೆ ಚಿಮ್ಮಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಬಾಹುಬಲಿ (LVM3‑M6) ರಾಕೆಟ್ ಮೂಲಕ ‘ಬ್ಲ್ಯೂಬರ್ಡ್ ಬ್ಲಾಕ್–2’ ಎಂಬ ಉಪಗ್ರಹ ಕಕ್ಷೆ ಸೇರಿದೆ.

ಅಮೆರಿಕದ ಎಎಸ್ಟಿ ಸ್ಪೇಸ್ಮೊಬೈಲ್ನೊಂದಿಗಿನ ವಾಣಿಜ್ಯ ಒಪ್ಪಂದದ ಭಾಗವಾಗಿ ಡಿ. 24ರಂದು ಈ ಉಪಗ್ರಹ ಹೊತ್ತ ಬಾಹುಬಲಿ ರಾಕೆಟ್ನ ಉಡ್ಡಯನ ನಡೆಯಿತು. ಉಪಗ್ರಹವು ಬರೋಬ್ಬರಿ 6,100 ಕೆ.ಜಿ. ತೂಕದ್ದಾಗಿತ್ತು. ಲಾಂಚಿಂಗ್ ಪ್ಯಾಡ್ನಿಂದ ಚಿಮ್ಮಿದ ರಾಕೆಟ್ ಕೇವಲ 15 ನಿಮಿಷಗಳಲ್ಲಿ ನಿಗದಿತ ಕಕ್ಷೆ ಸೇರಿತು. ಇನ್ನೇನು ಕೆಲವೇ ದಿನಗಳಲ್ಲಿ ಮೊಬೈಲ್ಗೆ ತಾನೇ ಸಿಗ್ನಲ್ ನೀಡುವ ಕೆಲಸವನ್ನು ಈ ಉಪಗ್ರಹ ಮಾಡಲಿದೆ. ಆ ಮೂಲಕ ಟವರ್ ಇಲ್ಲದೆ, ಕೇಬಲ್ ಇಲ್ಲದೆ ಮೊಬೈಲ್ಗಳಿಗೆ ಸಿಗ್ನಲ್ ಸಿಗುವ ದಿನಗಳು ಸನಿಹವಾಗುತ್ತಿವೆ.

ಬ್ಲೂಬರ್ಡ್ ಬ್ಲಾಕ್ 2 ಉಪಗ್ರಹ ಏಕೆ ಚರ್ಚೆಯಲ್ಲಿದೆ?

ಬಾಹ್ಯಾಕಾಶ ಆಧಾರಿತ ಮೊಬೈಲ್ ಟವರ್ ಆಗಿ ಕೆಲಸ ಮಾಡುವುದೇ ಬ್ಲೂಬರ್ಡ್ ಬ್ಲಾಕ್–2 ಉಪಗ್ರಹದ ಕೆಲಸ. ಇದು ಗಾತ್ರದಲ್ಲಿ ಮಾತ್ರ ದೊಡ್ಡದಲ್ಲ, ತಂತ್ರಜ್ಞಾನದಲ್ಲೂ ಅತ್ಯಾಧುನಿಕ. ಭೂಮಿಯಲ್ಲಿ ಕಟ್ಟಡಗಳ ಮೇಲೆ ಗಗನಕ್ಕೆ ಚಾಚಿರುವ ಟವರ್ಗಳ ಬದಲಾಗಿ ಹಾಗೂ ಭೂಮಿ ಅಗೆದು ಹೂಳಿರುವ ಕೇಬಲ್ಗೆ ಪರ್ಯಾಯವಾಗಿ 4ಜಿ ಹಾಗೂ 5ಜಿ ನೆಟ್ವರ್ಕ್ ಅನ್ನು ಈ ಉಪಗ್ರಹ ನೇರವಾಗಿ ಭೂಮಿ ಮೇಲಿರುವ ಜನರ ಮೊಬೈಲ್ಗಳಿಗೆ ನೀಡಲಿದೆ. ಈ ತಂತ್ರಜ್ಞಾನದಿಂದ ಈವರೆಗೂ ನೆಟ್ವರ್ಕ್ ಇಲ್ಲದೆ ಸಂವಹನ ಸಾಧಿಸಲು ಸಾಧ್ಯವಾಗದ ಪ್ರದೇಶಕ್ಕೂ ನೆಟ್ವರ್ಕ್ ಸಿಗಲಿದೆ.

ಈ ತಂತ್ರಜ್ಞಾನದಿಂದ ಕಟ್ಟಡಗಳ ಮೇಲೆ ದೊಡ್ಡ ಆಂಟೆನಾಗಳ ಅಗತ್ಯ ಇನ್ನು ಮುಂದೆ ಇರದು. ನೆಟವರ್ಕ್ ಪೂರೈಕೆಗಾಗಿಯೇ ಹೆಚ್ಚುವರಿ ಸಾಧನಗಳನ್ನು ಅಳವಡಿಸುವ ಅಗತ್ಯವಿಲ್ಲ. ಬಾಹ್ಯಾಕಾಶದಲ್ಲಿರುವ ಉಪಗ್ರಹದಿಂದ ಅಡೆತಡೆ ಇಲ್ಲದೆ ನೇರವಾಗಿ ಮೊಬೈಲ್ಗೆ ತಲುಪುವ ಸಿಗ್ನಲ್ ಮಾತ್ರ ಇಲ್ಲಿರುವುದು.

‘ಡೈರೆಕ್ಟ್ ಟು ಮೊಬೈಲ್’ ಉಪಗ್ರಹ ಆಧಾರಿತ ಮೊದಲ ಬ್ರಾಡ್ಬ್ಯಾಂಡ್ ನೆಟವರ್ಕ್ ಕಲ್ಪಿಸುವ ಜಾಗತಿಕ ಉಪಗ್ರಹ ಸಮೂಹವೇ ಈ ಬ್ಲೂಬರ್ಡ್. ಈ ತಂತ್ರಜ್ಞಾನದಿಂದ ಹಳ್ಳಿಗಾಡುಗಳು, ದಟ್ಟ ಕಾನನದಲ್ಲಿ ಮನೆ ಹೊಂದಿರುವವರಿಗೂ ಮೊಬೈಲ್ ಸಂಪರ್ಕ ಸಾಧ್ಯವಾಗಲಿದೆ ಎಂಬುದು ಇದರ ವಿಶೇಷ.

ಸಾಂಪ್ರದಾಯಿಕ ಉಪಗ್ರಹಕ್ಕೆ ಹೋಲಿಸಿದಲ್ಲಿ, ಇದು ಬೃಹತ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಬ್ಲೂಬರ್ಡ್ ಬ್ಲಾಕ್–2ಗೆ ಅಳವಡಿಸಿರುವ ಆ್ಯಂಟೆನಾ ಬರೋಬ್ಬರಿ 223 ಚದರ ಮೀಟರ್ನಷ್ಟು ದೊಡ್ಡದು. ಭೂಮಿಯ ಕೆಳ ಕಕ್ಷೆಯಲ್ಲಿ ಅಳವಡಿಸಿದ ಈವರೆಗಿನ ಅತ್ಯಂತ ದೊಡ್ಡ ವಾಣಿಜ್ಯ ಬಳಕೆಯ ಸಂವಹನ ಉಪಗ್ರಹ ಇದಾಗಿದೆ.

ಈ ಉಪಗ್ರಹದಿಂದ ಭಾರತಕ್ಕೇನು ಲಾಭ?

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಆರ್ಥಿಕತೆ ವೃದ್ಧಿ: ಜಗತ್ತಿನ ವಿವಿಧ ರಾಷ್ಟ್ರಗಳ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿರುವ ಭಾರತದ ಇಸ್ರೊ, ಅದರಿಂದ ದೇಶಕ್ಕೆ ಆದಾಯ ತರುತ್ತಿದೆ. ಅಗ್ಗದ ಬೆಲೆಗೆ, ವಿಶ್ವಾಸರ್ಹ ರಾಕೇಟ್ ಬಳಕೆಯಿಂದಾಗಿ ಜಾಗತಿಕ ಕಂಪನಿಗಳಾದ ಎಎಸ್ಟಿ ಸ್ಪೇಸ್ ಮೊಬೈಲ್ ಹಾಗೂ ಇನ್ನಿತರವು ‘ಇಸ್ರೊ’ವನ್ನೇ ತಮ್ಮ ಉಡ್ಡಯನ ಪಾಲುದಾರ ಸಂಸ್ಥೆಯಾಗಿ ಪರಿಗಣಿಸಿವೆ. ಇದರಿಂದ ಇಸ್ರೊ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ಜತೆಗೆ ಆದಾಯವನ್ನೂ ತರುತ್ತಿದೆ. ಇದಕ್ಕಾಗಿಯೇ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಎಂಬ ವಾಣಿಜ್ಯ ಕಂಪನಿಯನ್ನೂ ಇಸ್ರೊ ಆರಂಭಿಸಿದೆ.

ಎಲ್ಲರಿಗೂ ನೆಟ್ವರ್ಕ್: ಭಾರತದ ಪಟ್ಟಣ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಉತ್ತಮವಾಗಿರುವುದು ಸಾಮಾನ್ಯ. ಆದರೆ ನಗರ ಹಾಗೂ ಪಟ್ಟಣಗಳಿಂದ ದೂರವಿರುವ ಸಾಕಷ್ಟು ಪ್ರದೇಶಗಳು ಇಂದಿಗೂ ಮೊಬೈಲ್ ನೆಟ್ವರ್ಕ್ನಿಂದ ದೂರವೇ ಉಳಿದಿವೆ. ಉಪಗ್ರಹ ಆಧಾರಿತ ಮೊಬೈಲ್ ಬ್ರಾಡ್ಬ್ಯಾಂಡ್ನಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗಗಳನ್ನು ಡಿಜಿಟಲ್ ರೂಪದಲ್ಲಿ ಉಂಟಾಗಿರುವ ವಿಭಜನೆಯನ್ನು ಬೆಸೆಯಲಿದೆ. ಇದರಿಂದ ಶಿಕ್ಷಣ, ತುರ್ತು ಸಂಪರ್ಕ, ಆರೋಗ್ಯ ಸೌಲಭ್ಯ ಮತ್ತು ಆರ್ಥಿಕ ಅವಕಾಶಗಳು ಎಲ್ಲರಿಗೂ ಸಮಾನವಾಗಿ ತಲುಪಲಿದೆ.

ಅಮೆರಿಕ ಹಾಗೂ ಭಾರತದ ಈ ಜಂಟಿ ಪಾಲುದಾರಿಕೆಯ ಹಿಂದೆ ನೂರಾರು ವಿಜ್ಞಾನಿಗಳು, ಎಂಜಿನಿಯರ್ಗಳು ಹಾಗೂ ತಂತ್ರಜ್ಞರ ಅವಿರತ ಶ್ರಮ ಅಡಗಿದೆ. ರಾಕೇಟ್ ವಿನ್ಯಾಸದಿಂದ ಹಿಡಿದು, ಲಾಂಚ್ ಪ್ಯಾಡ್ ಸಜ್ಜುಗೊಳಿಸುವ ಸಿಬ್ಬಂದಿವರೆಗೂ ನೂರಾರು ಜನ ಇದಕ್ಕಾಗಿ ಬೆವರು ಹರಿಸಿದ್ದಾರೆ.

ಸದ್ಯ ಬ್ಲೂಬರ್ಡ್ ಬ್ಲಾಕ್–2 ಉಪಗ್ರಹ ಯಶಸ್ವಿಯಾಗಿ ಕಕ್ಷೆ ಸೇರಿದೆ. ಮುಂದಿನ ಹಂತ ಇದಕ್ಕೆ ಆಂಟೆನಾ ಜೋಡಣೆ, ಸಂಪರ್ಕ ಸಾಧ್ಯವೇ ಎಂದು ಪರೀಕ್ಷಿಸುವುದು ಮತ್ತು ಭೂಮಿಯ ಎಲ್ಲಾ ಪ್ರದೇಶಗಳಿಗೂ ನೆಟ್ವರ್ಕ್ ಸಿಗುತ್ತದೆಯೇ ಎಂಬುದನ್ನು ಪರಿಶೀಲಿಸುವುದಾಗಿದೆ. ಇದು ಯಶಸ್ವಿಯಾಗುತ್ತಿದ್ದಂತೆ ಭೂಮಿಯ ಎಲ್ಲಾ ಭಾಗಗಳಿಗೂ ನೆಟ್ವರ್ಕ್ ಸಿಗ್ನಲ್ ತಲುಪಿಸುವುದು ಇದರ ಕೆಲಸ.

ಉತ್ತಮ ಚಿಂತನೆ, ತಂಡವಾಗಿ ದುಡಿಯುವ ಮನಸ್ಥಿತಿ ಹಾಗೂ ಹೊಸ ಸಾಧ್ಯತೆಗಳ ಕುರಿತು ಜಗತ್ತಿನ ರಾಷ್ಟ್ರಗಳು ಗಡಿಮೀರಿ ಕೆಲಸ ಮಾಡಿದರೆ ಸಿಗುವ ಪ್ರತಿಫಲಕ್ಕೆ ಇದು ಕನ್ನಡಿಯಾಗಿದೆ. ಈ ಬೃಹತ್ ಉಪಗ್ರಹವು ಕಕ್ಷೆಯಲ್ಲಿ ಕುಳಿತು ತನ್ನ ಕಾರ್ಯವನ್ನು ಯಶಸ್ವಿಯಾಗಿ ಆರಂಭಿಸಿದರೆ, ಇನ್ನುಮುಂದೆ ಆಗಸವೂ ಅಂಗೈಯಲ್ಲಿ ಎಂಬುದು ಸಾಬೀತಾಗಲಿದೆ ಎನ್ನುವುದು ತಜ್ಞರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.