ಕೊಪ್ಪಳ: ಕೊಪ್ಪಳ, ರಾಯಚೂರು, ಅವಿಭಜಿತ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು ಏಳು ದಶಕ ಸಮೀಪಿಸುತ್ತಿದೆ. ಹೂಳು ತುಂಬಿಕೊಂಡಿರುವುದರಿಂದ ಕರ್ನಾಟಕದ ಪಾಲಿನ ಪೂರ್ತಿ ನೀರು ಲಭ್ಯವಾಗುತ್ತಿಲ್ಲ. ಕನಕಗಿರಿ ತಾಲ್ಲೂಕಿನ ನವಲಿ ಬಳಿ 35 ಟಿಎಂಸಿ ಅಡಿ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿ ಹಲವು ವರ್ಷಗಳಾದರೂ ಯೋಜನಾ ವರದಿ ಇನ್ನೂ ಸಿದ್ಧಗೊಂಡಿಲ್ಲ.

ಈ ನಡುವೆ ಸುತ್ತಲಿನ ಗ್ರಾಮಸ್ಥರ ವಿರೋಧದಿಂದಾಗಿ ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ ಎಂಬುದು ನೀರಾವರಿ ತಜ್ಞರ ಕಳವಳಕ್ಕೆ ಕಾರಣವಾಗಿದೆ.

135ಟಿಎಂಸಿ ಅಡಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 35 ಟಿಎಂಸಿ ಅಡಿಗೂ ಹೆಚ್ಚು ಪ್ರಮಾಣದ ಹೂಳು ತುಂಬಿದೆ. ಇಷ್ಟೊಂದು ಪ್ರಮಾಣದ ಹೂಳು ತೆಗೆಯುವುದು ತುಂಬಾ ವೆಚ್ಚದಾಯಕ. ರಾಜ್ಯದ ಪಾಲಿನ 30 ಟಿಎಂಸಿ ಅಡಿ ನೀರು ಖೋತಾ ಆಗುತ್ತಿದೆ. ಅದಕ್ಕಾಗಿ ಸರ್ಕಾರ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿದೆ.

15 ಗ್ರಾಮ ಮುಳುಗಡೆ: ಜಲಾಶಯ ನಿರ್ಮಾಣವಾಗುವುದರಿಂದ ಗುಡೂದೂರು, ಮಲ್ಲಾಪುರ, ಕರಡೋಣಿ, ಈಚನಾಳ, ಬುನ್ನಟ್ಟಿ, ಯತ್ನಟ್ಟಿ, ಗೊಲ್ಲರಹಟ್ಟಿ, ಪುರ, ಬುಕನಟ್ಟಿ, ಉಮಲೋಟಿ, ನೀರಲೂಟಿ, ಕಾಟಾಪುರ, ಮಲ್ಲಿಗೆವಾಡ, ಚಿಕ್ಕಖೇಡ, ಹಿರೇಖೇಡ ಸೇರಿದಂತೆ15 ಗ್ರಾಮಗಳು ಮುಳುಗಡೆಯಾಗಲಿವೆ ಎಂದು ಅಂದಾಜಿಸಲಾಗಿದೆ. ವಿಸ್ತೃತ ಯೋಜನಾ ವರದಿಯ ನಂತರ ಗ್ರಾಮಗಳ ಮುಳುಗಡೆ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ.

ಏರುತ್ತಿರುವ ಯೋಜನಾ ವೆಚ್ಚ: ಜಲಾಶಯ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕಳೆದ ಬಜೆಟ್‌ನಲ್ಲಿ₹ 14.30 ಕೋಟಿ ಮೀಸಲಿರಿಸಿದ್ದು, ₹ 13.30 ಕೋಟಿ ಅನುದಾನ ಬಿಡುಗಡೆಯಾಗಿದೆ.ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಜಲಾಶಯದ ಯೋಜನಾ ವೆಚ್ಚ ₹ 5,800 ಕೋಟಿ ಎಂದು ಅಂದಾಜಿಸಲಾಗಿತ್ತು. ಈಗ ಯೋಜನಾ ವೆಚ್ಚ ₹12 ಸಾವಿರ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಮಾನಾಂತರ ಜಲಾಶಯ ಕಣ್ಣೊರೆಸುವ ತಂತ್ರ. ಮಸ್ಕಿ ಉಪ ಚುನಾವಣೆ ಗೆಲ್ಲಲು ಬಿಜೆಪಿ ಏನೇನೋ ಕಸರತ್ತು ಮಾಡಿತ್ತು. ಚುನಾವಣೆಯಲ್ಲಿ ಸೋತ ನಂತರ ಅಪಸ್ವರ ಎಬ್ಬಿಸುತ್ತಿದ್ದಾರೆ.

– ಚಾಮರಸ ಮಾಲಿಪಾಟೀಲ, ಅಧ್ಯಕ್ಷ, ರಾಜ್ಯ ರೈತ ಸಂಘ

ನೀರಿನ ಸದ್ಬಳಕೆಗೆ ನವಲಿ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಏನೇ ತಾಂತ್ರಿಕ ಮತ್ತು ಜನರ ಸಮಸ್ಯೆಗಳಿದ್ದರೂ ಅದನ್ನು ಸರ್ಕಾರದ ಗಮನಕ್ಕೆ ತಂದು ಸಮೀಕ್ಷೆ ಕಾರ್ಯ ನಡೆಸಲಾಗುವುದು.

– ಮಲ್ಲಿಕಾರ್ಜುನ ಗುಂಗೆ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನೀರಾವರಿ ನಿಗಮ ನಿಯಮಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.