ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಶೇ 26ರಷ್ಟು ಪ್ರತಿ ಸುಂಕದ ಅಸ್ತ್ರ ಪ್ರಯೋಗಿಸಿದ್ದಾರೆ. ಇದರ ಬಿಸಿ ಕರ್ನಾಟಕದ ವ್ಯಾಪಾರ ವಹಿವಾಟಿಗೂ ತಟ್ಟಲಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಇಳಿಕೆಯಾಗುವ ಆತಂಕ ಎದುರಾಗಿದೆ.
ಕಾಫಿ ಕಥೆ ಏನು?
ಸಂಬಾರ ಪದಾರ್ಥಗಳಿಗೆ ಬರೆ
ಐ.ಟಿ ವಲಯಕ್ಕೂ ಆತಂಕ
ಆಟೊ ವಲಯಕ್ಕೆ ಪರಿಣಾಮ ಇಲ್ಲ
ತಿಂಡಿ ತಿನಿಸು
ಔಷಧ, ಜವಳಿಗೆ ವರದಾನ
ಗ್ರಾನೈಟ್ ಉತ್ಪನ್ನಗಳಿಗೆ ಬಿಸಿ
ಕೆಲವು ಸರಕುಗಳ ರಫ್ತು ಇಳಿಕೆಯಾಗಬಹುದು. ಐ.ಟಿ ರಫ್ತಿನ ಮೇಲೆ ಶೂನ್ಯ ಸುಂಕ ಇರುವುದರಿಂದ ಈ ವಲಯದ ತೆರಿಗೆಯಿಂದ ಬರುವ ಆದಾಯದಲ್ಲಿ ಇಳಿಕೆಯಾಗುವುದಿಲ್ಲ
ಪಿ.ಸಿ. ಜಾಫರ್, ಕಾರ್ಯದರ್ಶಿ ಹಣಕಾಸು ಇಲಾಖೆ
ಶಿರಸಿಯ ಕಾಳುಮೆಣಸಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. ಅಮೆರಿಕದ ಪ್ರತಿ ಸುಂಕದಿಂದಾಗಿ ದೀರ್ಘಾವಧಿಯಲ್ಲಿ ಕಾಳುಮೆಣಸು ಹಾಗೂ ಅದರ ಮೌಲ್ಯವರ್ಧಿತ ಉತ್ಪನ್ನವಾದ ಬೋಳಕಾಳು (ಬಿಳಿಕಾಳು) ಮೇಲೆ ಆಗುವ ಪರಿಣಾಮವನ್ನು ತಳ್ಳಿಹಾಕುವಂತಿಲ್ಲ
ಗಜಾನನ ಹೆಗಡೆ, ಕಾಳುಮೆಣಸು ವರ್ತಕ ಶಿರಸಿ
ಪಾಲಿಮರ್ ಉತ್ಪನ್ನಗಳ ಮೇಲಿನ ನಿರ್ದಿಷ್ಟ ಸುಂಕ ಕುರಿತು ಸ್ಪಷ್ಟವಾಗಿ ಹೇಳಿಲ್ಲ. ಆದರೆ ಭಾರತದ ಪಾಲಿಮರ್ ಉತ್ಪನ್ನಗಳ ರಫ್ತಿನ ಮೇಲೆ ಪ್ರತಿ ಸುಂಕವು ಗಮನಾರ್ಹ ಪರಿಣಾಮ ಬೀರಲಿದೆ
ವಿ. ವಿಜಯಕುಮಾರ್ ಅಧ್ಯಕ್ಷ ಕರ್ನಾಟಕ ರಾಜ್ಯ ಪಾಲಿಮರ್ಸ್ ಅಸೋಸಿಯೇಷನ್
ರಫ್ತು ಆದಾಯ ಇಳಿಕೆ
ಭಾರತಕ್ಕೆ ಹೋಲಿಸಿದರೆ ಬಾಂಗ್ಲಾದೇಶಕ್ಕೆ ವಿಧಿಸಿರುವ ಪ್ರತಿ ಸುಂಕದ ಪ್ರಮಾಣ ಹೆಚ್ಚಿದೆ. ಇದು ಕರ್ನಾಟಕ ಸೇರಿ ದೇಶದ ಇತರೆ ರಾಜ್ಯಗಳಲ್ಲಿ ಸಿದ್ಧಉಡುಪುಗಳ ರಫ್ತು ಉತ್ತೇಜನಕ್ಕೆ ವರದಾನವಾಗಲಿದೆ
ಎಂ.ಜಿ. ರಾಜಗೋಪಾಲ್ ಅಧ್ಯಕ್ಷ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ