ಕೋವಿಡ್–19 ಕಾಯಿಲೆಯನ್ನು ಓಡಿಸಲು ಬೇಕಾದ‘ಬ್ರಹ್ಮಾಸ್ತ್ರ’ಕ್ಕಾಗಿ ಜಗತ್ತಿನ ವೈದ್ಯಕೀಯ ಲೋಕ ತಡಕಾಡುತ್ತಿದೆ.

ದಿಢೀರ್ ಎಂದು ಉದ್ಭವಿಸಿರುವ ಈ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿಯಲು ಅಮೆರಿಕ, ಚೀನಾ, ಬ್ರಿಟನ್ ಮತ್ತು ಜರ್ಮನಿ ದೇಶಗಳು ಪೈಪೋಟಿಗೆ ಬಿದ್ದಿವೆ. ಈ ವಿಚಾರದಲ್ಲಿ ಭಾರತವೇನೂ ಹಿಂದೆ ಉಳಿದಿಲ್ಲ. ಆದರೆ, ಇಷ್ಟೆಲ್ಲಾ ಸಂಶೋಧನೆಗಳು ನಡೆಯುತ್ತಿದ್ದರೂ
ಕೋವಿಡ್–19ಗೆ ಮೊದಲ ಲಸಿಕೆ ಸಿದ್ಧವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು.

ಎಬೊಲಾಕ್ಕೆ ಈ ಹಿಂದೆ ಶೋಧಿಸಿದ್ದ ಔಷಧಿಯನ್ನೇ ಇಂಗ್ಲೆಂಡ್ನಲ್ಲಿ ಕೆಲವು ರೋಗಿಗಳಿಗೆ ನೀಡಲಾಗಿದೆ. ಔಷಧಿ ಸೇವಿಸಿದ ರೋಗಿಗಳ ಉಸಿರಾಟದ ಸಮಸ್ಯೆ ತುಸು ನೀಗಿದ್ದೂ ಕಂಡುಬಂದಿದೆ. ಆದರೆ, ವೆಂಟಿಲೇಟರ್ ಅವಲಂಬನೆಯನ್ನು ಈ ಔಷಧಿಯಿಂದ ಸಂಪೂರ್ಣವಾಗಿ ತಪ್ಪಿಸಲು ಆಗಿಲ್ಲ.

ಲಸಿಕೆಯೇ, ಪ್ರತಿಕಾಯವೇ ಅಥವಾ ಮಾತ್ರೆಯೇ?

ಬೇರೆ ಕಾಯಿಲೆಗೆ ಈ ಹಿಂದೆ ಅಭಿವೃದ್ಧಿ ಪಡಿಸಿರುವ ಔಷಧಿಯಲ್ಲೇ ತುಸು ಮಾರ್ಪಾಡು ಮಾಡಿ, ಕೋವಿಡ್–19ರಪ್ರಭಾವವನ್ನು ತಗ್ಗಿಸುವಂತಹ ದಾರಿ ಹುಡುಕುವುದು ವೈದ್ಯಕೀಯ ಲೋಕದ ಮೊದಲ ಗುರಿ. ಮಲೇರಿಯಾ ಕಾಯಿಲೆ ಚಿಕಿತ್ಸೆಗೆ ಬಳಸುತ್ತಿದ್ದ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಯಿಂದ ಕೋವಿಡ್ ಅನ್ನೂ ಮಣಿಸಬಹುದೇ ಎಂಬ ತಪಾಸಣೆಗಳೂ ನಡೆದಿವೆ. ಆದರೆ, ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.

ಪ್ಲಾಸ್ಮಾ ಚಿಕಿತ್ಸೆಯ ಪರೀಕ್ಷೆಗಳೂ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆದಿವೆ.ಈ ಕಾಯಿಲೆಯಿಂದ ಬಳಲಿ ಗುಣವಾದವರ ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಅಭಿವೃದ್ಧಿಯಾದ ಪ್ರತಿರೋಧ ಕಣಗಳನ್ನೇ ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸುವುದು ಪ್ಲಾಸ್ಮಾ ಚಿಕಿತ್ಸೆ.

ಪ್ರತಿರೋಧ ಕಣಗಳು, ಕೊರೊನಾ ವೈರಾಣುಗಳ ಮೇಲೆ ದಾಳಿ ನಡೆಸುವ ಗುಣ ಬೆಳೆಸಿಕೊಂಡಿರುತ್ತವೆ.ರೋಗಪೀಡಿತ ವ್ಯಕ್ತಿಯ ದೇಹ ಸೇರಿದ ನಂತರವೂ ಈ ದಾಳಿಯನ್ನು ಅವು ಮುಂದುವರಿಸುತ್ತವೆ.ಆದ್ದರಿಂದ ಈ ಚಿಕಿತ್ಸೆ ಯಶಸ್ವಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಸಂಶೋಧಕರು ಇದ್ದಾರೆ.

ಇನ್ನು ಲಸಿಕೆಯ ಚಿಕಿತ್ಸೆ. ಅಮೆರಿಕದ 12 ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುವ ಕೆಲಸದಲ್ಲಿ ತೊಡಗಿಕೊಂಡಿವೆ. ಮೊದಲು ಅಭಿವೃದ್ಧಿಯಾಗುವ ಲಸಿಕೆಗೆ 100 ಕೋಟಿ ಡಾಲರ್ ಅನುದಾನ ನೀಡಲು ಅಮೆರಿಕ ಸರ್ಕಾರ ಸಿದ್ಧವಿದೆ. 12 ಕಂಪನಿಗಳು ಹಲವು ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದ್ದರೂ ಮೂರು ಲಸಿಕೆಗಳಷ್ಟೇ ಮನುಷ್ಯನ ಮೇಲೆ ಪ್ರಯೋಗ ನಡೆಸುವ ಹಂತಕ್ಕೆ ಬಂದಿವೆ. ಈ ಮೂರು ಲಸಿಕೆಗಳನ್ನು ಸಾರ್ಸ್ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್) ಮತ್ತು ಮಾರ್ಸ್ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್) ರೋಗಗಳ ಲಸಿಕೆಯ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ.

ಮೈಕ್ರೊಸಾಫ್ಟ್ ಮತ್ತು ಗೇಟ್ಸ್ ಪ್ರತಿಷ್ಠಾನದ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೋವಿಡ್–19 ಕಾಯಿಲೆಗೆ ಲಸಿಕೆಅಭಿವೃದ್ಧಿಪಡಿಸಲು ಅಮೆರಿಕದ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷನ್ ಡಿಸೀಸ್’ ಸಂಸ್ಥೆಗೆ ಅನುದಾನ ಘೋಷಿಸಿದ್ದಾರೆ. ‘ಲಸಿಕೆ ಅಭಿವೃದ್ಧಿಪಡಿಸಲು ಇನ್ನೂ ಕನಿಷ್ಠ 12 ತಿಂಗಳು ಬೇಕು’ ಎಂದು ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.

ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಪ್ರಯೋಗಾಲಯದ ಹಂತದಲ್ಲಿ ಈಗಾಗಲೇ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಬ್ರಿಟನ್ ಸರ್ಕಾರ ಇದಕ್ಕೆ ಅನುದಾನ ನೀಡುತ್ತಿದೆ. ಏಪ್ರಿಲ್ 23ರಿಂದ ಈ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸಿ ಪರೀಕ್ಷೆ ಆರಂಭಿಸಲಾಗಿದೆ. ಚಿಂಪಾಂಜಿಗಳಲ್ಲಿ ಇರುವ ವೈರಾಣುವನ್ನು ಆಧರಿಸಿ, ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಲಸಿಕೆಯನ್ನು ಈಗಾಗಲೇ ಇಲಿಗಳ ಮೇಲೆ ಪ್ರಯೋಗಿಸಿ, ಸಕಾರಾತ್ಮಕ ಫಲಿತಾಂಶ ಪಡೆಯಲಾಗಿದೆ. ಈ ತಂಡವು ಮೊದಲ ಹಂತದಲ್ಲಿ 510 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲು ಅನುಮತಿ ಪಡೆದಿದೆ.

ಜರ್ಮನಿಯ ಬಯೋಎನ್ಟೆಕ್ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಮನುಷ್ಯನ ಮೇಲೆ ಪ್ರಯೋಗಿಸಲಾಗುತ್ತಿದೆ. ಮೊದಲ ಹಂತದಲ್ಲಿ 200 ಮಂದಿ ಆರೋಗ್ಯವಂಥ ಸ್ವಯಂಸೇವಕರ ಮೇಲೆ, ಎರಡನೇ ಹಂತದಲ್ಲಿ ರೋಗಪೀಡಿತರ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಜೂನ್ ಅಂತ್ಯದ ವೇಳೆಗೆ ಈ ಪ್ರಯೋಗದ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ.

ಚೀನಾದಲ್ಲಿ ಅಭಿವೃದ್ಧಿಪಡಿಸಲಾಗಿರುವ ಮೂರು ಲಸಿಕೆಗಳನ್ನು ಈಗ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ.

ಇದನ್ನೂ ಓದಿ:ವೈರಸ್ ನಿಯಂತ್ರಣಕ್ಕೆ ಬಿಸಿಜಿ? ಹೆಚ್ಚಿನ ಸಂಶೋಧನೆ ಅಗತ್ಯ, ವೈದ್ಯರ ಪ್ರತಿಪಾದನೆ

ಲಸಿಕೆ ತಯಾರಿಕೆಯಲ್ಲಿ ಭಾರತವೂ ಮುಂದು

ಈ ವರ್ಷಾಂತ್ಯದ ವೇಳೆಗೆ ಕೋವಿಡ್ ಚಿಕಿತ್ಸೆಗಾಗಿ ಲಸಿಕೆಯ ಕೋಟ್ಯಂತರ ಡೋಸ್ಗಳು ಬೇಕಾಗಬಹುದು. ಲಸಿಕೆ ಅಭಿವೃದ್ಧಿಯಲ್ಲಿ ಭಾರತದ ತಯಾರಕರೂ ಮುಂಚೂಣಿಯಲ್ಲಿದ್ದಾರೆ. ಸದ್ಯ ಆರು ಕಂಪನಿಗಳು ಕೋವಿಡ್–19 ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಈ ಪೈಕಿ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಂಚೂಣಿಯಲ್ಲಿದೆ.

ಸೆರಂ ಇನ್ಸ್ಟಿಟ್ಯೂಟ್

ಅಮೆರಿಕದ ಕೊಡಜೆನಿಕ್ಸ್ ಕಂಪನಿ ಸಹಯೋಗದಲ್ಲಿ ಸೆರಂ ಕಂಪನಿಯು ಪ್ರಯೋಗಗಳನ್ನು ನಡೆಸುತ್ತಿದ್ದು, ಮಹತ್ವದ ಹಂತ ತಲುಪಿದೆ. ಜೀವಂತ ವೈರಸ್ನ ಉಗ್ರ ಗುಣಗಳನ್ನು ನಿಷ್ಕ್ರಿಯಗೊಳಿಸುವ (ಲೈವ್ ಅಟೆನ್ಯುಯೇಟೆಡ್) ಹಂತಕ್ಕೆ ಪ್ರಯೋಗ ತಲುಪಿದೆ. ಈ ಹಂತದಲ್ಲಿ ವೈರಸ್ ದುರ್ಬಲ ಸ್ಥಿತಿಯಲ್ಲಿದ್ದು, ದಾಳಿ ಮಾಡಿ ಹಾನಿ ಎಸಗುವ ಸಾಮರ್ಥ್ಯ ಕಳೆದುಕೊಂಡಿರುತ್ತದೆ. ಇದು ಲಸಿಕೆ ತಯಾರಿಕೆಯಲ್ಲಿ ಮಹತ್ವದ ಘಟ್ಟ.

‘ಪ್ರಾಣಿಗಳ ಮೇಲೆ ಪ್ರಯೋಗ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಬರುವ ಸೆಪ್ಟೆಂಬರ್ನಲ್ಲಿ ಮಾನವನ ಮೇಲೆ ಪ್ರಯೋಗಕ್ಕೆ ಸಿದ್ಧವಾಗಬೇಕಿದೆ’ ಎಂದು ಸೆರಂನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದರ್ ಪೂನಾವಾಲಾ ಹೇಳುತ್ತಾರೆ.

ಇನ್ನು, ಬ್ರಿಟನ್ ಸರ್ಕಾರದ ಬೆಂಬಲದೊಂದಿಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸೆರಂ ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಸೆಪ್ಟೆಂಬರ್ಗೆ ಸುಮಾರು 10 ಲಕ್ಷ ಲಸಿಕೆ ಡೋಸ್ಗಳು ಸಿದ್ಧವಾಗಲಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಸೆರಂ ಸಂಸ್ಥೆಯೊಂದೇ 40ರಿಂದ 50 ಕೋಟಿ ಡೋಸ್ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

*ಹೈದರಾಬಾದ್ ಮೂಲದ ಭಾರತ ಬಯೋಟೆಕ್ ಸಂಸ್ಥೆಯು ವಿಸ್ಕಾನ್ಸಿಸ್ ಮ್ಯಾಡಿಸನ್ ವಿಶ್ವವಿದ್ಯಾಲಯ ಹಾಗೂ ಅಮೆರಿಕ ಮೂಲದ ಫ್ಲೂಜೆನ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಜಗತ್ತಿನ ಎಲ್ಲ ಕಡೆಗೆ ಪೂರೈಸಲು 30 ಕೋಟಿ ಡೋಸ್ ಉತ್ಪಾದಿಸುವುದಾಗಿ ಕಂಪನಿ ಹೇಳಿಕೊಂಡಿದೆ

*ಝೈಡಸ್ ಕ್ಯಾಡಿಲಾ ಕಂಪನಿಯು ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಹಂತದಲ್ಲಿದೆ

*ಬಯೊಲಾಜಿಕಲ್ ಇ, ಇಂಡಿಯನ್ ಇಮ್ಯುನೊಲಾಜಿಕಲ್ಸ್ ಮತ್ತು ಮೈನ್ವ್ಯಾಕ್ ಸಂಸ್ಥೆಗಳು ತಲಾ ಒಂದೊಂದು ಲಸಿಕೆಯನ್ನು ಶೋಧಿಸುತ್ತಿವೆ

*ಇವಿಷ್ಟೇ ಅಲ್ಲದೆ, ಭಾರತದ ಇತರೆ ನಾಲ್ಕೈದು ಕಂಪನಿಗಳು ಲಸಿಕೆಗಾಗಿ ಪ್ರಯೋಗ ಹೂಡಿದ್ದು, ಅವಿನ್ನೂ ಅಭಿವೃದ್ಧಿಯ ಆರಂಭಿಕ ಹಂತದಲ್ಲಿವೆ

ಇದನ್ನೂ ಓದಿ:6 ಸಮರ್ಥ ಔಷಧ ಗುರುತಿಸಿದ ವಿಜ್ಞಾನಿಗಳು

ಎಲ್ಲರಿಗೂ ಸಿಗಲಿದೆಯೇ?

ಜಗತ್ತಿನ 185 ದೇಶಗಳಲ್ಲಿ ಕೋವಿಡ್–19 ಕಾಣಿಸಿಕೊಂಡಿದೆ. ಆದರೆ, ಐದಾರು ದೇಶಗಳಷ್ಟೇ ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಲಸಿಕೆ ಅಭಿವೃದ್ಧಿಪಡಿಸಿದ ದೇಶವು ಜಾಗತಿಕವಾಗಿ ಹೊಸ ಶಕ್ತಿಯಾಗಿ ಹೊರಹೊಮ್ಮಲಿದೆ. ಆದರೆ, ಕೋವಿಡ್–19 ಲಸಿಕೆಯು ಜಗತ್ತಿನಲ್ಲಿ ಹೊಸ ಬಿಕ್ಕಟ್ಟಿಗೆ ಕಾರಣವಾಗಲಿದೆ ಎನ್ನಲಾಗಿದೆ.

ಲಸಿಕೆ ರಾಷ್ಟ್ರೀಯತೆ (Vaccine Nationalism) ಎಂಬ ಹೊಸ ಪರಿಕಲ್ಪನೆ ತಲೆದೋರಲಿದೆ. ಲಸಿಕೆಯನ್ನು ಅಭಿವೃದ್ಧಿಪಡಿಸಿದ ರಾಷ್ಟ್ರಗಳು ಅದನ್ನು ಬೇರೆ ರಾಷ್ಟ್ರಗಳ ಜತೆ ಮುಕ್ತವಾಗಿ ಹಂಚಿಕೊಳ್ಳುತ್ತವೆಯೇ ಅಥವಾ ವಾಣಿಜ್ಯೀಕರಣ ಮಾಡುತ್ತವೆಯೇ ಎಂಬುದು ಈಗಿನ ಪ್ರಶ್ನೆ. ಲಸಿಕೆ ಅಭಿವೃದ್ಧಿಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಮಾರ್ಗಸೂಚಿಯನ್ನು ಈ ಎಲ್ಲಾ ರಾಷ್ಟ್ರಗಳು ಕಡೆಗಣಿಸಿವೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ಅಮೆರಿಕದ ಹಲವು ಕಂಪನಿಗಳು ಲಸಿಕೆ ತಯಾರಿಕೆಗೆಂದೇ ಭಾರತದ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿವೆ. ಚೀನಾದ ಕಂಪನಿಗಳ ಜತೆಯೂ ಒಪ್ಪಂದ ಮಾಡಿಕೊಂಡಿವೆ. ಇವುಗಳಲ್ಲಿ ಬಹುತೇಕ ಕಂಪನಿಗಳು, ಲಸಿಕೆಯನ್ನು ತಯಾರಿಸುವ ಘಟಕಗಳನ್ನು ಮಾತ್ರ ಹೊಂದಿವೆ. ಲಸಿಕೆ ತಯಾರಿಕೆಗೆ ಈ ಕಂಪನಿಗಳನ್ನು ಬಳಸಿಕೊಳ್ಳಲು ಅಮೆರಿಕದ ಕಂಪನಿಗಳು ಯೋಜಿಸಿವೆ ಎನ್ನಲಾಗಿದೆ.

ಲಸಿಕೆ ಅಭಿವೃದ್ಧಿಯಾದ ನಂತರ ಅದನ್ನು ಕೋಟ್ಯಂತರ ಡೋಸ್ಗಳಲ್ಲಿ ತಯಾರಿಸಲು ಸಿದ್ಧತೆ ನಡೆದಿದೆ. ಅಮೆರಿಕಕ್ಕೇ ಅದರಲ್ಲಿ ಸಿಂಹಪಾಲು ಬೇಕಾಗುತ್ತವೆ. ಟ್ರಂಪ್ ಅಮೆರಿಕದ ಅಗತ್ಯ ಬಿಟ್ಟು, ಬೇರೆ ದೇಶಕ್ಕೆ ಅವನ್ನು ಮಾರಾಟ ಮಾಡಲು ಅನುಮತಿ ನೀಡುತ್ತಾರೆಯೇ ಎಂಬ ಆತಂಕ ವ್ಯಕ್ತವಾಗಿದೆ.

ಲಸಿಕೆಯನ್ನು ಅಗತ್ಯ ಇರುವವರಿಗೆ ನೀಡುವುದಾಗಿ ಬ್ರಿಟನ್ ಹೇಳಿದೆ. ಜರ್ಮನಿಯೂ ಇದೇ ಮಾತು ಹೇಳಿದೆ. ಆದರೆ ಅಮೆರಿಕವಾಗಲೀ, ಚೀನಾ ಆಗಲೀ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ:ಪ್ಯಾರಾಸೈಟ್ ನಿರೋಧಕ ಔಷಧ ಕೋವಿಡ್–19ಗೆ ಪರಿಣಾಮಕಾರಿ: ಆಸ್ಟ್ರೇಲಿಯಾ ತಜ್ಞರು

ಬ್ರಿಕ್ಸ್ ಲಸಿಕೆ ಅಭಿವೃದ್ಧಿ ಕೇಂದ್ರ

ಕೋವಿಡ್–19 ಕಾಯಿಲೆಗೆ ಬ್ರಿಕ್ಸ್ ದೇಶಗಳು ಸೇರಿ ‘ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ’ ಸ್ಥಾಪಿಸುವಚರ್ಚೆ
ಯನ್ನು ಭಾರತ ಮತ್ತೆ ಮುನ್ನೆಲೆಗೆ ತಂದಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಜೊತೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದು, ಕೇಂದ್ರ ಸ್ಥಾಪನೆ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ಭಾರತ, ಚೀನಾ, ರಷ್ಯಾ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು.

2016ರಲ್ಲಿ ಗೋವಾದಲ್ಲಿ ನಡೆದಿದ್ದ ಬ್ರಿಕ್ಸ್ ಸಮ್ಮೇಳದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಔಷಧ, ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಸದಸ್ಯ ದೇಶಗಳ ನಡುವೆ ಸಹಕಾರ ಅತ್ಯಗತ್ಯ ಎಂದು ಒತ್ತಿ ಹೇಳಿದ್ದರು. 2017ರಲ್ಲಿ ಚೀನಾದಲ್ಲಿ ನಡೆದ ಸಮ್ಮೇಳನದಲ್ಲಿ ಈ ಕುರಿತು ಒಂದು ಸುತ್ತಿನ ಚರ್ಚೆ ನಡೆದಿತ್ತು. 2018ರಲ್ಲಿ ಜೊಹಾನ್ಸ್ಬರ್ಗ್ನಲ್ಲಿ ನಡೆದ ಸಭೆಯಲ್ಲಿ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಪ್ರಸ್ತಾವಕ್ಕೆ ಒಪ್ಪಿಗೆಯೂ ದೊರೆತಿತ್ತು. ಆದರೆ ಪ್ರಗತಿ ಕಂಡುಬಂದಿರಲಿಲ್ಲ. ಈ ಬಾರಿ ಜುಲೈನಲ್ಲಿ ನಿಗದಿಯಾಗಿರುವ ಸಭೆ ಕೋವಿಡ್ ಕಾರಣಕ್ಕೆ ಜರುಗುವುದು ಅನುಮಾನ.

ಹಲವು ಕಾಯಿಲೆಗಳಿಗೆಲಸಿಕೆ ಕೊಟ್ಟ ಭಾರತ

ಭಾರತದ ಔಷಧ ಅಥವಾ ಲಸಿಕೆ ಉತ್ಪಾದಕರು ಜಗತ್ತಿನ ಗಮನ ಸೆಳೆದಿದ್ದಾರೆ. ಆರು ದೊಡ್ಡ ಕಂಪನಿಗಳು ಹಾಗೂ ಹತ್ತಾರು ಸಣ್ಣಪುಟ್ಟ ಕಂಪನಿಗಳು ಇಲ್ಲಿವೆ. ಇವು ಪೋಲಿಯೊ, ನ್ಯುಮೋನಿಯಾ, ರೋಟಾವೈರಸ್, ಬಿಸಿಜಿ, ರುಬೆಲ್ಲಾ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ಔಷಧಿಗಳನ್ನು ಉತ್ಪಾದಿಸಿವೆ. ಇದೀಗ ಕೋವಿಡ್–19 ಲಸಿಕೆ ಅಭಿವೃದ್ಧಿಗೂ ಮುಂದಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.