ಶನಿವಾರ, ಡಿಸೆಂಬರ್ 4, 2021
24 °C

FACT CHECK: ಉಪವಾಸನಿರತ ಪೊಲೀಸರಿಗೆ ಯೋಗಿ ಸರ್ಕಾರದಿಂದ ಫಲಾಹಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊಲೀಸರು ಸಾಮೂಹಿಕ ಭೋಜನ ಮಾಡುತ್ತಿರುವ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ‘ಯೋಗಿ ಸರ್ಕಾರವು ನವರಾತ್ರಿಯ ಉಪವಾಸ ಆಚರಿಸುವ ಪೊಲೀಸ್ ಸಿಬ್ಬಂದಿಗೆ ಫಲಾಹಾರದ ವಿಶೇಷ ವ್ಯವಸ್ಥೆ ಮಾಡಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಇಂತಹ ದೃಶ್ಯ ನೋಡಿದ್ದೇನೆ. ಇಂತಹ ದೃಶ್ಯಗಳು ಇಫ್ತಾರ್‌ ವೇಳೆ ಮಾತ್ರ ಕಾಣಸಿಗುತ್ತಿದ್ದವು’ ಎಂಬುದಾಗಿ ಟ್ವಿಟರ್ ಬಳಕೆದಾರರೊಬ್ಬರು ಉಲ್ಲೇಖಿಸಿದ್ದಾರೆ. ಪೊಲೀಸ್ ಮೀಡಿಯಾ ಸೇರಿದಂತೆ ಕೆಲವು ವೆಬ್‌ಸೈಟ್‌ಗಳು ಇದೇ ಅರ್ಥದಲ್ಲಿ ವರದಿ ಮಾಡಿವೆ.

ಇಂತಹ ಕಾರ್ಯಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಆಯೋಜಿಸಿದೆ ಎಂಬ ಕುರಿತ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ.

ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, ಹೆಚ್ಚುವರಿ ಎಸ್ಪಿ ವಿಕಾಸ್‌ಚಂದ್ರ ತ್ರಿಪಾಠಿ ಅವರು 2018ರಲ್ಲಿ ಟ್ವಿಟರ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದರು ಎಂದು ತಿಳಿದುಬಂದಿದೆ. ನವರಾತ್ರಿ ಅಂಗವಾಗಿ ಲಖನೌದ ಠಾಣಾ ಚೌಕ್‌ ಪೊಲೀಸ್ ಠಾಣೆ ಸಿಬ್ಬಂದಿಗೆ ವಿಶೇಷ ಫಲಾಹಾರ ಕೂಟ ಆಯೋಜಿಸಿದ್ದಾಗಿ ಅವರು ಉಲ್ಲೇಖಿಸಿದ್ದರು. ಹೀಗಾಗಿ ಯೋಗಿ ಸರ್ಕಾರವು ಮೊಟ್ಟಮೊದಲ ಬಾರಿಗೆ ರಾಜ್ಯದ ಪೊಲೀಸರಿಗೆ ಫಲಾಹಾರ ಕೂಟ ಆಯೋಜಿಸಿದೆ ಎಂಬುದು ತಪ್ಪು ಮಾಹಿತಿ ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು