ಶುಕ್ರವಾರ, ಜೂನ್ 18, 2021
22 °C

Fact Check: ವಿದೇಶಿ ಮಾಧ್ಯಮಗಳು ಮೋದಿ ಪರವಾಗಿ ವರದಿ ಮಾಡುತ್ತಿವೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೋವಿಡ್‌ ಅನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕಷ್ಟಪಟ್ಟು ದುಡಿಯುತ್ತಿದ್ದಾರೆ. ವಿರೋಧ ಪಕ್ಷಗಳ ಸುಳ್ಳಿನ ಮಾತಿನ ಬಲೆಗೆ ಬೀಳಬೇಡಿ ಎಂದು ದಿ ಡೈಲಿ ಗಾರ್ಡಿಯನ್ ವರದಿ ಮಾಡಿದೆ. ಮೋದಿ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವರದಿ ಪ್ರಕಟಿಸಿದ್ದ ವಿದೇಶಿ ಮಾಧ್ಯಮಗಳು, ಈಗ ಮೋದಿ ಪರವಾಗಿಯೇ ವರದಿ ಮಾಡುತ್ತಿವೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ‘ಫಿಲಿಪ್ಪೀನ್ಸ್‌ನ ದಿ ಡೈಲಿ ಗಾರ್ಡಿಯನ್ ಮಾಧ್ಯಮವು ಮೋದಿ ಅವರನ್ನು ಹೊಗಳಿ ವರದಿ ಮಾಡಿದೆ’ ಎಂದು ಆಜ್‌ತಕ್ ಟ್ವೀಟ್ ಮಾಡಿತ್ತು. ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಹ ವೈರಲ್ ಆಗಿದೆ.

‘ದಿ ಡೈಲಿ ಗಾರ್ಡಿಯನ್ ವಿದೇಶಿ ಮಾಧ್ಯಮ ಅಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನ್ಯೂಸ್‌ಎಕ್ಸ್‌ ವಾಹಿನಿಯ ಮಾತೃಸಂಸ್ಥೆ ಐಟಿವಿ ನೆಟ್‌ವರ್ಕ್ 2021ರ ಜನವರಿಯಲ್ಲಿ ದಿ ಡೈಲಿ ಗಾರ್ಡಿಯನ್ ಎಂಬ ಸುದ್ದಿತಾಣ ಆರಂಭಿಸಿದೆ. ಇದನ್ನು ಫಿಲಿಪ್ಪೀನ್ಸ್‌ನ ದಿ ಡೈಲಿ ಗಾರ್ಡಿಯನ್ ಪತ್ರಿಕೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಆಜ್‌ತಕ್ ಟ್ವೀಟ್ ಮಾಡಿತ್ತು. ಈಗ ಆ ಟ್ವೀಟ್ ಅನ್ನು ಅಳಿಸಲಾಗಿದೆ. ದಿ ಡೈಲಿ ಗಾರ್ಡಿಯನ್ ಆರಂಭವಾದಾಗಿನಿಂದ ತನ್ನ ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾಗಿಯೇ ಬರೆದಿದೆ. ಇಂಥದ್ದೇ ಒಂದು ಲೇಖನವನ್ನು ಈಗ ವಿದೇಶಿ ಮಾಧ್ಯಮದ ವರದಿ ಎಂದು ಹಂಚಿಕೊಳ್ಳಲಾಗುತ್ತಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು