ಶುಕ್ರವಾರ, ಜೂನ್ 5, 2020
27 °C

ಫ್ಯಾಕ್ಟ್‌ ಚೆಕ್‌ | ಕೋವಿಡ್‌ ತಡೆಯುವಲ್ಲಿ ಹೋಮಿಯೊಪಥಿ ಔಷಧ ಕೆಲಸ ಮಾಡುತ್ತದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೊರೊನಾ ವೈರಸ್‌ ತಡೆಯುವಲ್ಲಿ ಹೋಮಿಯೊಪಥಿ ಔಷಧ  ‘ಅರ್ಸೇನಿಕಂ ಅಲ್ಬುಂ 30’ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ’ ಎಂದು ಆಯುಷ್‌ ಇಲಾಖೆ ಮಾಡಿರುವ ಟ್ವೀಟ್‌ ಬಹಳ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ.

‘ಈ ಸುದ್ದಿಯನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ’ ಎಂದು ಲಿಂಕ್‌ ಸಹಿತವಾದ ಸಂದೇಶ ವಾಟ್ಸ್‌ ಆ್ಯಪ್‌ನಲ್ಲಿ ಈಗ ಹೆಚ್ಚು ಪ್ರಸಾರವಾಗುತ್ತಿದೆ.

ಆಯುಷ್‌ ಇಲಾಖೆಯು ಜನವರಿ ತಿಂಗಳ ಅಂತ್ಯದಲ್ಲಿ ಇಂಥ ಒಂದು ಟ್ವೀಟ್‌ ಮಾಡಿತ್ತು. ಆ ಕುರಿತ ಸುದ್ದಿಯೂ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ಈ ಔಷಧದ ಪರಿಣಾಮಗಳ ಬಗ್ಗೆ ಯಾವುದೇ ಹೋಮಿಯೋಪಥಿ ವೈದ್ಯರು ವೈಜ್ಞಾನಿಕ ಅಧ್ಯಯನ ನಡೆಸಿರುವ ದಾಖಲೆಗಳಿಲ್ಲ. ಮಾತ್ರವಲ್ಲ, ಈ ಔಷಧದಿಂದ ಸೋಂಕಿತರು ಗುಣಮುಖರಾದ ಉದಾಹರಣೆಯೂ ಇಲ್ಲ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು